ಕಲಬುರಗಿ: ಸೇವೆ ಸಲ್ಲಿಸುತ್ತಿರುವ ಆರೋಗ್ಯ ಸಹಾಯಕ/ಸಹಾಯಕಿ ವೃಂದದ ಮಕ್ಕಳಿಗೆ 2023-24 ನೇ ಸಾಲಿನ 85% ಕ್ಕಿಂತ ಹೆಚ್ಚಿನ ಅಂಕ ಪಡೆದ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ತರಗತಿಗಳಲ್ಲಿ ತೇಗರ್ಡೆ ಹೊಂದಿರುವ ಹಾಗೂ ನಿಟ್ ಪರೀಕ್ಷೆಯಲ್ಲಿ ಉತೀರ್ಣರಾಗಿರುವ ಅಭ್ಯರ್ಥಿಗಳಿಗೆ ಆ.ಸ(ಹಿ/ಕಿ) ನೌ.ಪ.ಸ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಎನ್.ಡಿ. ಕಾಚಾಪೂರ ರವರ ಅಧ್ಯಕ್ಷತೆಯಲ್ಲಿ ವೈಯಕ್ತಿಕ ಖರ್ಚಿನಲ್ಲಿ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಎನ್.ಡಿ.ಕಾಚಾಪೂರ ತಿಳಿಸಿದ್ದಾರೆ.
ನಗರದ ಪಬ್ಲಿಕ ಗಾರ್ಡನ ಹತ್ತಿರದ ಯಾತ್ರಿಕ ನಿವಾಸದಲ್ಲಿ ಸರ್ವಸದಸ್ಯರ ಸಭೆಯಲ್ಲಿ ಸೆ. 8 ರಂದು ಸಮಯ 11 ಗಂಟೆಗೆ ಕಾರ್ಯಕ್ರಮ ಜರುಗಲಿದ್ದು, ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ತರಗತಿಗಳಲ್ಲಿ ಪ್ರಥಮ ಬಹುಮಾನ ರೂ.2000/- ದ್ವೀತಿಯ ಬಹುಮಾನ ರೂ.1500/- ತೃತಿಯ ಬಹುಮಾನ ರೂ.1000/- ನೀಡಿ ಪುರಸ್ಕರಿಸಲಾಗುವುದು, ಉಳಿದವರಿಗೆ ಸಮಾದಾನಕರ ಬಹುಮಾನ ನೀಡಲಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರೋಗ್ಯ ಸಹಾಯಕ ವೃಂದವರು 85% ಕ್ಕಿಂತ ಹೆಚ್ಚಿನ ಅಂಕ ಪಡೆದ ಅಂಕಪಟ್ಟಿಯ ಪ್ರತಿ ಹಾಗೂ ಎರಡು ಭಾವ ಚಿತ್ರಗಳನ್ನು ಸೆ. 5ರವರೆಗೆ 5 ಗಂಟೆಯ ಒಳಗಾಗಿ ಸಂಘದ ಕಚೇರಿಗೆ ತಲುಪಿಸುವಂತೆ ಕೋರಿದ್ದು, ಹೆಚ್ಚಿನ ಮಾಹಿತಿಗಾಗಿ ಮೋ.ನಂ. 9480462958 – 8970746498 ಸಂಪರ್ಕಿಸಬಹುದು.