ಅರಕೇರಾ ಕೆ: ರಾಷ್ಟ್ರೀಯ ಪೋಷಣ ಅಭಿಯಾನ ಆರೋಗ್ಯ ಮೇಳ

0
20

ಸುರಪುರ:ತಾಲೂಕಿನ ಅರಕೇರಾ ಕೆ ಗ್ರಾಮ ಪಂಚಾಯತಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ ವತಿಯಿಂದ ರಾಷ್ಟ್ರೀಯ ಪೋಷಣ ಅಭಿಯಾನ ಅಂಗವಾಗಿ ಆರೋಗ್ಯ ಮೇಳ ಕಾರ್ಯಕ್ರಮ ನಡೆಸಲಾಗಿದೆ.
ಕಾರ್ಯಕ್ರಮ ಉದ್ಘಾಟಿಸಿದ ಗ್ರಾಮ ಪಂಚಾಯತಿ ಅಧ್ಯಕ್ಷೆ ದೀಪಮ್ಮ ಅವರು ಮಾತನಾಡಿ,ಪೋಷಣ ಅಭಿಯಾನದ ಮೂಲಕ ಗರ್ಭೀಣಿ ಮಹಿಳೆಯರು ಹಾಗೂ ಮಕ್ಕಳ ಬೆಳವಣಿಗೆಗೆ ಉತ್ತಮವಾದ ಯೋಜನೆ ಇದ್ದು ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳ ಬೇಕು ಎಂದರು.

ಮಹಿಳಾ ಮೇಲ್ವಿಚಾರಕಿ ಚಂದ್ರಲೀಲಾ ಬಿಲ್ಲವ್ ಮಾತನಾಡಿ,ರಾಷ್ಟ್ರೀಯ ಪೋಷಣ ಅಭಿಯಾನ ಒಂದು ತಿಂಗಳ ಕಾಲ ಈ ಅಭಿಯಾನ ನಡೆಸಲಾಗುತ್ತಿದ್ದು,ಇದರ ಮೂಲಕ ಗರ್ಭೀಣಿ ಮಹಿಳೆಯರು ಹಾಗೂ ಮಕ್ಕಳಲ್ಲಿನ ಅಪೌಷ್ಠಿಕತೆಯನ್ನು ಹೋಗಲಾಡಿಸಲು ಅಭಿಯಾನದ ಮೂಲಕ ತಿಳಿಸಲಾಗುವುದು ಹಾಗೂ ಸರಕಾರ ಈ ಯೋಜನೆಯಿಂದ ಗರ್ಭೀಣಿ ಮಹಿಳೆಯರಿಗೆ ಪೌಷ್ಟಕಾಂಶಯುಕ್ತ ಆಹಾರ ಧಾನ್ಯಗಳನ್ನು ನೀಡಲಾಗುತ್ತದೆ.ಅಲ್ಲದೆ ಸರಕಾರದ ಇನ್ನೂ ಅನೇಕ ಯೋಜನೆಗಳಿಂದ ಮಕ್ಕಳಲ್ಲಿನ ಅಪೌಷ್ಠಿಕತೆಯನ್ನು ನಿವಾರಣೆಗೊಳಿಸಲಾಗುತ್ತಿದ್ದು,ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳ ಬೇಕು ಎಂದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಭಾಗವಹಿಸಿದ ಮಹಿಳೆಯರ ಹಾಗೂ ಮಕ್ಕಳ ಆರೋಗ್ಯ ತಪಾಸಣೆಯನ್ನು ಮಾಡಲಾಯಿತು.ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಪದ್ಮಾವತಿ,ಅಂಗನವಾಡಿ ಕಾರ್ಯಕರ್ತೆಯರಾದ ಮಂಜುಶ್ರೀ,ಈಶ್ವರಮ್ಮ,ರೇಣುಕಾ,ಆಶಾ ಕಾರ್ಯಕರ್ತೆ ಶಾಂತಾಬಾಯಿ,ರಂಗಪ್ಪ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here