8 ರಂದು `ಬುದ್ಧ ಗಂಟೆಯ ಸದ್ದು’ ಕೃತಿ ಬಿಡುಗಡೆ

0
31

ಕಲಬುರಗಿ, ಸೆ.4 – ಹಿರಿಯ ಕತೆಗಾರ ಮಹಾಂತೇಶ್ ನವಲಕಲ್ ಅವರ ಹೊಸ ಕಥಾ ಸಂಕಲನ ಬುದ್ಧ ಗಂಟೆಯ ಸದ್ದು’ ಇದೆ ಸೆಪ್ಟಂಬರ್ 8 ರಂದು ಬೆಳಿಗ್ಗೆ 11 ಕ್ಕೆ ನಗರದ ಕನ್ನಡ ಸಾಹಿತ್ಯ ಪರಿಷತ್ ಅವರಣದಲ್ಲಿರುವ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಮುದಾಯ ಅಧ್ಯಕ್ಷ ಡಾ.ದತ್ತಾತ್ರೇಯ ಇಕ್ಕಳಕಿ ಹಾಗು ಕಾರ್ಯದರ್ಶಿ ಡಾ.ಶ್ರೀಶೈಲ ಘೂಳಿ ತಿಳಿಸಿದ್ದಾರೆ.

ಸಮುದಾಯ ಕಲಬುರ್ಗಿ ಮತ್ತು ಪಲ್ಲವ ಪ್ರಕಾಶನ ಸಹಯೋಗದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕಾಲೇಜು ಶಿಕ್ಷಣ ಇಲಾಕೆಯ ಉಪ ನಿರ್ದೇಶಕರಾದ ಶಿವಶರಣಪ್ಪ ಮುಳೆಗಾಂವ ಪುಸ್ತಕ ಬಿಡುಗಡೆ ಮಾಡುವರು. ಸಂಸ್ಕøತಿ ಚಿಂತಕ ಪ್ರೊ.ಆರ್.ಕೆ.ಹುಡಗಿ ಅಧ್ಯಕ್ಷತೆ ವಹಿಸುವರು.

Contact Your\'s Advertisement; 9902492681

ಕೇಂದ್ರೀಯ ವಿವಿ ಕನ್ನಡ ಪ್ರಾಧ್ಯಾಪಕ, ಲೇಖಕ ಡಾ.ವಿಕ್ರಮ ವಿಸಾಜಿ ಪುಸ್ತಕ ಕುರಿತು ಮಾತನಾಡುವರು. ಬಿ.ಆರ್.ಬುದ್ಧಾ, ಡಾ.ಅಪ್ಪಗೆರೆ ಸೋಮಶೇಖರ, ಡಾ.ಅಶೋಕ ಶೆಟಗಾರ, ರಮೇಶ ಮಾಡಿಯಾಳಕರ್ ಮುಖ್ಯ ಅತಿಥಿಗಳಾಗಿರುವರು. ಡಾ.ಮೀನಾಕ್ಷಿ ಬಾಳಿ ಪ್ರಾಸ್ತಾವಿಕ ಮಾತನಾಡುವರು. ಡಾ.ಪಲ್ಲವ ವೆಂಕಟೇಶ ಹಾಗೂ ಮಹಾಂತೇಶ ನವಲಕಲ್ ಉಪಸ್ಥಿತಿರುವರು.

ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ನುಡಿಸಾರಥ್ಯವಿದ್ದು, ಸಂದೀಪ ಮಾಳಗೆ, ಕಲ್ಯಾಣಿ ಬಜಂತ್ರಿ, ಮೇಘಾ ಚಿಚಕೋಟಿ ಅವರಿಂದ ಜನಪದ ಹಾಡುಗಳ ಪ್ರಸ್ತುತಿ ಇದೆ. ಡಾ.ಪ್ರಭು ಖಾನಾಪುರೆ, ಬಸಣ್ಣ ಸಿಂಗೆ, ಮಾರುತಿ ಗೋಖಲೆ, ಡಾ.ಅರುಣ ಜೋಳದಕೂಡ್ಲಿಗಿ, ರವೀಂದ್ರ ಶಾಬಾದಿ ಸೇರಿದಂತೆ ಅನೇಕರು ಭಾಗವಹಿಸುವರು ಎಂದು ಸಮುದಾಯ ಅಧ್ಯಕ್ಷ ಡಾ.ದತ್ತಾತ್ರೇಯ ಇಕ್ಕಳಕಿ ಹಾಗು ಕಾರ್ಯದರ್ಶಿ ಡಾ.ಶ್ರೀಶೈಲ ಘೂಳಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here