ಗೌರ (ಕೆ) ಗ್ರಾಮದಲ್ಲಿ ಆರೋಗ್ಯ ತಪಾಸಣಾ ಶಿಬಿರ ಯಶಸ್ಚಿ

0
34

ಅಫಜಲಪುರ; ತಾಲೂಕಿನ ಗೌರ.ಕೆ ಗ್ರಾಮ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ. ಸರ್ವೋದಯ ಸಮಾಜ ಸೇವಾ ಸಂಸ್ಥೆ ಹಾಗೂ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಮಾಶ್ಯಾಳ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಿತು.

ಸರ್ವೋದಯ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕರಾದ ಫಾದರ್ ಲಾರೆನ್ಸ್ ಡಿ ಅಲ್ಮೇಡ್, ಸಸಿಗೆ ನೀರುರೆೆಯುವ ಮೂಲಕ ಸಮಗ್ರ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತಾನಾಡುತ್ತಿರುವಾಗ ಆವರು ಗ್ರಾಮದ ಜನರು ಆರೋಗ್ಯಕ್ಕೆ ಬಹಳ ಪ್ರಾಮುಖ್ಯತೆ ನೀಡಬೇಕು ಮಕ್ಕಳಿಂದ ಹಿಡಿದು ಹಿರಿಯ ವಯಸ್ಕರು ತಮ್ಮ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಆರೋಗ್ಯ ಇಲಾಖೆಯವರು ಗ್ರಾಮದಲ್ಲೆ ಬಂದು ನಿಮ್ಮ ಆರೋಗ್ಯ ತಪಾಸಣೆ ಮಾಡಲು ವೈದ್ಯರು ಮತ್ತು ಸಿಬ್ಬಂದಿಗಳಿಗೆ ಗ್ರಾಮದ ಜನರು ಪ್ರಶಂಸಿಸಬೇಕು . ಹಾಗೆ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

Contact Your\'s Advertisement; 9902492681

ವೇದಿಕೆ ಮೇಲೆ ಸಂಯೋಜಕರಾದ ಫಾದರ ರೋಷನ್ ಡಿಸೋಜಾ, ಸಹ ಸಂಯೋಜಕರಾದ ಫಾದರ್ ವಿಲಿಯಂ ಸೆಲ್ವರಾಜ್ ಸಿಬ್ಬಂದಿ ಸಿದ್ದು ನಾಟೀಕರ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ದಂತ ವೈದ್ಯಧಿಕಾರಿಗಳಾದ ಡಾ. ಆರಾಧನಾ ರಾಠೋಡ್, ಐಸಿಟಿಸಿ ಕೇಂದ್ರದ ಆಪ್ತ ಸಮಾಲೋಚಕರಾದ ರವಿ ಕುಮಾರ ಭುಲೆ೯. ಪ್ರಯೋಗ ಶಾಲಾತಂತ್ರಜ್ಞರಾದ ಗೌತಮ ಮೈಸಲಗಿ, ಎನ್.ಸಿ.ಡಿ ವಿಭಾಗದ ಸಮಾಲೋಚಕರಾದ ಶ್ರೀಮತಿ ಸುನಿತಾ ಕಂಬಳಿಮಠ, ನರ್ಸಿಂಗ್ ಅಧಿಕಾರಿಗಳಾದ ರಮೇಶ್ ಪಾಟೀಲ್, ಆರ್ ಕೆ ಎಸ್ ಕೆ ವಿಭಾಗದ ಆಪ್ತ ಸಮಾಲೋಚಕರಾದ ಶ್ರೀಮತಿ ಸುಜಾತಾ ಹಿರೇಮಠ ಅನ್ವರ್ ಪಾಷಾ, ಮೇಘಾ ಕುಲಕರ್ಣಿ ಸಿ. ಎಚ್.ಓ, ಸರ್ಕಾರಿ ಪ್ರಾಥಮಿಕ ಶಾಲೆಯ ಚೌವಾಣ್ ಸರ್ ಹಾಗೂ ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮೊದಲಿಗೆ ರವಿಕುಮಾರ್ ಭುರ್ಲೆ ಆರೋಗ್ಯದ ಮಹತ್ವ ಸಾಂಕ್ರಾಮಿಕ ರೋಗಗಳು ಹರಡುವ ಕುರಿತು ವೈಯಕ್ತಿಕ ಸ್ವಚ್ಛತೆಯ ಕುರಿತು ಹೆಚ್ಐವಿ/ ಏಡ್ಸ್, ಟಿಬಿ, ರೋಗಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.

ಸರ್ವೋದಯ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕರಾದ ಫಾದರ್ ಲಾರೆನ್ಸ್ ಇವರು ಸರ್ವೋದಯ ಸಮಾಜ ಸೇವಾ ಸಂಸ್ಥೆ ಬೆಳೆದು ಬಂದ ದಾರಿ ಸಂಸ್ಥೆಯ ಗುರಿ ಉದ್ದೇಶ ಹಾಗೂ ಸಂಸ್ಥೆಯು ಅಫಜಲಪೂರ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಂಡಿದ್ದು ಜನರ ಆರೋಗ್ಯದ ಕುರಿತು, ಮಕ್ಕಳ ಶಿಕ್ಷಣ ಮಟ್ಟದ ಕುರಿತು ಸುಧಾರಣೆ ತರುವಲ್ಲಿ ಸಕ್ರಿಯವಾದ ಪಾತ್ರವನ್ನು ವಹಿಸುತ್ತಿದೆ ಎಂದು ಹೇಳಿದರು.

ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಅಫಜಲಪೂರ ದಂತ ವೈದ್ಯಾದಿಕಾರಿಗಳಾದ ಡಾ. ಆರಾಧನಾ ರಾಥೋಡ್ ಬಾಯಿ ಆರೋಗ್ಯದ ಕುರಿತು, ಸ್ವಚ್ಛತೆಯ ಕುರಿತು ಪ್ರಧಾನ ಮಂತ್ರಿ ದಂತ ಭಾಗ್ಯದ ಕುರಿತು ವಿವರವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸುಮಾರು 91 ಜನರಿಗೆ ಎಚ್ಐವಿ/ಏಡ್ಸ್ ಸಿಫಿಲಿಸ್, ಟಿಬಿ, ಬಿಪಿ, ಶುಗರ್, ಸುಮಾರು 82 ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬಾಯಿ ಆರೋಗ್ಯದ ಹಾಗೂ ಹಲ್ಲುಗಳ ಪರೀಕ್ಷೆ ಮಾಡಲಾಯಿತು.

ಗೌರ. (ಕೆ) ಗ್ರಾಮದ ಜನರು ಹಾಗೂ ಶಾಲಾ ವಿದ್ಯಾರ್ಥಿಗಳು. ಶಿಕ್ಷಕರು. ಆರೋಗ್ಯ ತಪಾಸಣಾ ಶಿಬಿರ ಯಶಸ್ಚಿಗೊಳಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here