ಎಂ.ಬಿ.ಬಿ.ಎಸ್. ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ

0
51

ಕಲಬುರಗಿ; ಡಾ. ಪಿ.ಎಸ್. ಶಂಕರ ಪ್ರತಿμÁ್ಠನವು 2024-29ನೇ ಬ್ಯಾಚ್‍ನಲ್ಲಿ ಎಂ.ಬಿ.ಬಿ.ಎಸ್. ಕೋರ್ಸ್‍ಗೆ ಪ್ರವೇಶ ಪಡೆದಿರುವ ಅರ್ಹ ವಿದ್ಯಾರ್ಥಿಗಳಿಂದ 54 ತಿಂಗಳ ಅವಧಿಗೆ ಅಂದರೆ ಕೋರ್ಸ್ ಅಂತ್ಯದವರೆಗೆ ಒದಗಿಸಲಾಗುವ ಮಾಸಿಕ ರೂ. 1500 ವಿದ್ಯಾರ್ಥಿವೇತನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ.

ಕಲಬುರಗಿ ನಗರದಲ್ಲಿ ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಪ್ರತಿμÁ್ಠನದ ಕಾರ್ಯದರ್ಶಿ, ಪೆÇ್ರ. ನರೇಂದ್ರ ಬಡಶೇಷಿ, ನವೆಂಬರ್-2024ರಿಂದ ಎಂ.ಬಿ.ಬಿ.ಎಸ್. ಕೋರ್ಸ್‍ಗೆ ಸೇರುವ ವಿದ್ಯಾರ್ಥಿಗಳು ಮತ್ತು 2024ರ ಏಪ್ರಿಲ್‍ನಲ್ಲಿ ನಡೆದ ಪರೀಕ್ಷೆಗಳಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದವರು ಪ್ರತಿμÁ್ಠನ ನೀಡುವ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ತಿಳಿಸಿದ್ದಾರೆ. ಪ್ರತಿ ವರ್ಷ ಪ್ರತಿμÁ್ಠನವು 10 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾಸಿಕ ವಿದ್ಯಾರ್ಥಿವೇತನವನ್ನು ನೀಡುತ್ತಿದೆ ಮತ್ತು ಇದು 23 ನೇ ವರ್ಷ ಪ್ರತಿμÁ್ಠನವು ವೈದ್ಯಕೀಯ ಕೋರ್ಸ್‍ಗಳನ್ನು ಅನುಸರಿಸುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತಿದೆ ಎಂದಿದ್ದಾರೆ.

Contact Your\'s Advertisement; 9902492681

ಗ್ರಾಮೀಣ ಹಿನ್ನೆಲೆಯುಳ್ಳ, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದಿರುವ, ಆರ್ಥಿಕವಾಗಿ ಹಿಂದುಳಿದ ಹಾಗೂ ಬಡ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಆಯ್ಕೆ ಸಂದರ್ಭದಲ್ಲಿ ಆದ್ಯತೆ ನೀಡಲಾಗುವುದು. ವಿದ್ಯಾರ್ಥಿ ವೇತನವನ್ನು ಕರ್ನಾಟಕದ ಯಾವುದೇ ಭಾಗದಲ್ಲಿ ಅಧ್ಯಯನ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ಮಾತ್ರ ನೀಡಲಾಗುವುದು ಎಂದು ಪೆÇ್ರ. ಬಡಶೇಷಿ ತಿಳಿಸಿದ್ದಾರೆ.

ಆಸಕ್ತ ಅರ್ಜಿದಾರರು ತಮ್ಮ ಕೈಬರಹದಲ್ಲಿ ತಮ್ಮ ಕುಟುಂಬದ ಆರ್ಥಿಕ ಹಿಂದುಳಿದಿರುವಿಕೆಯನ್ನು ಸಂಪೂರ್ಣವಾಗಿ ಮತ್ತು ವಿವರವಾಗಿ ಬಿಳಿಹಾಳೆಯಲ್ಲಿ ಬರೆದು, ವಿದ್ಯಾರ್ಥಿವೇತನಕ್ಕಾಗಿ ನಿಗದಿತ ಅರ್ಜಿಯೊಂದಿಗೆ ಸಲ್ಲಿಸಬೇಕು. ಅರ್ಜಿಯನ್ನು ಪ್ರತಿμÁ್ಠನದ ಅಧಿಕೃತ ವೆಬ್‍ಸೈಟ್ www.psshankarpratistan.in ನಿಂದ ಡೌನ್‍ಲೋಡ್ ಮಾಡಿ ಮತ್ತು ಕಳುಹಿಸಬಹುದು. ಅಕ್ಟೋಬರ್ 10, 2024 ರಂದು ಅಥವಾ ಅದಕ್ಕೂ ಮೊದಲು ತಲುಪಲು ಪ್ರತಿμÁ್ಠನದ ಈ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬಹುದು. ಅರ್ಜಿಯೊಂದಿಗೆ ವಿದ್ಯಾರ್ಥಿಗಳು ಪಿ.ಯು.ಸಿ. ಮಾಕ್ರ್ಸ್ ಕಾರ್ಡ್ ಮತ್ತು ನೀಟ್ ಪರೀಕ್ಷೆಗಳ ಮಾಕ್ರ್ಸ್ ಕಾರ್ಡ್‍ನ ಫೆÇೀಟೋ ಪ್ರತಿಗಳನ್ನು ಕಳುಹಿಸಬೇಕು. ವಿದ್ಯಾರ್ಥಿಗಳು ತಮ್ಮ ಭರ್ತಿ ಮಾಡಿದ ಅರ್ಜಿಗಳನ್ನು ವೈದ್ಯಕೀಯ ಕಾಲೇಜುಗಳ ಪ್ರಾಂಶುಪಾಲರ ಮೂಲಕ ಅಥವಾ ನೇರವಾಗಿ ಈ ಕೆಳಗೆ ನಮೋದಿಸಿದ ವಿಳಾಸಕ್ಕೆ ಕಳುಹಿಸಬಹುದು. ಈ ಕುರಿತು ಹೆಚ್ಚಿನ ವಿವರಗಳಿಗಾಗಿ ಅಥವಾ ಯಾವುದೇ ಸ್ಪಷ್ಟೀಕರಣಗಳಿಗಾಗಿ 9448813514/9480149723. ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಬಹುದು ಎಂದು ತಿಳಿಸಿದ್ದಾರೆ.

ಭರ್ತಿ ಮಾಡಿದ ಅರ್ಜಿಗಳನ್ನು ಪೆÇ್ರ. ನರೇಂದ್ರ ಬಡಶೇಷಿ, ಕಾರ್ಯದರ್ಶಿ, ಡಾ. ಪಿ. ಎಸ್. ಶಂಕರ ಪ್ರತಿμÁ್ಠನ, ಮನೆ ಸಂಖ್ಯೆ 1-11-21-ಇ, ಖೂಬಾ ಪ್ಲಾಟ್, ಕಲಬುರಗಿ-585102. ಮೊಬೈಲ್ ಸಂಖ್ಯೆ 9448813514 ಇವರಿಗೆ ಕಳುಹಿಸಬೇಕು ಎಂದು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here