ಮಾತೃಭೂಮಿಯ ಸ್ಮರಣೆಯಲ್ಲಿ ಸೈನಿಕರಿಗೊಂದು ಸಲಾಂ’ ಅಭಿನಂದನಾ ಸಮಾರಂಭ

0
49

ಕಲಬುರಗಿ: ಭಾರತಾಂಬೆಯ ಹೆಮ್ಮೆಯ ಸುಪುತ್ರನಾಗಿ 40 ವರ್ಷಗಳ ಕಾಲ ಅವಿರತ ದೇಶ ಸೇವೆಗೈದು ಮರಳಿ ಸ್ವಗ್ರಾಮಕ್ಕೆ ಆಗಮಿಸುತ್ತಿರುವ ವೀರಯೋಧ ಸಿದ್ದರಾಮ ಹಣಮಂತರಾಯ ಮುನೋಳಿ ಇವರಿಗೆ ಆಳಂದ ತಾಲೂಕಿನ ಪಡಸಾವಳಿ ಗ್ರಾಮದ ಸಮಸ್ತ ನಿವಾಸಿಗಳಿಂದ ‘ಮಾತೃಭೂಮಿಯ ಸ್ಮರಣೆಯಲ್ಲಿ ಸೈನಿಕರಿಗೊಂದು ಸಲಾಂ’ ಎಂಬ ಅಭಿನಂದನಾ ಸಮಾರಂಭವನ್ನು ಸೆಪ್ಟೆಂಬರ್ 8 ರಂದು ಬೆಳಿಗ್ಗೆ 10 ಗಂಟೆಗೆ ಪಡಸಾವಳಿ ಗ್ರಾಮದ ಶ್ರೀ ಶಿವಲಿಂಗೇಶ್ವರ ಸಂಸ್ಥಾನ ಹಿರೇಮಠದಲ್ಲಿ ಆಯೋಜಿಸಲಾಗಿದೆ.

ಪಡಸಾವಳಿ ಮತ್ತು ಡೋಣಗಾಂವ ಹಿರೇಮಠ ಸಂಸ್ಥಾನದ ಡಾ. ಶಂಭುಲಿಂಗ ಶಿವಾಚಾರ್ಯರು, ಅಚಲೇರಿ ವಿರಕ್ತಮಠದ ಬಸವರಾಜೇಂದ್ರ ಮಹಾಸ್ವಾಮಿಗಳು, ನಿರಗುಡಿ ಹವಾ ಮಲ್ಲಿನಾಥ್ ಮಹಾರಾಜರು, ಚಿಣಮಗೇರಾ ಮಹಾಂತೇಶ್ವರ ಮಠದ ವೀರ ಮಹಾಂತ ಶಿವಾಚಾರ್ಯರು, ಮಾದನ ಹಿಪ್ಪರಗಾದ ಶಿವಲಿಂಗೇಶ್ವರ ವಿರಕ್ತಮಠದ ಅಭಿನವ ಶಿವಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸುವರು.

Contact Your\'s Advertisement; 9902492681

ಅಭಿನಂದನಾ ಸಮಾರಂಭದ ಅಧ್ಯಕ್ಷತೆಯನ್ನು ಆಳಂದ ಸೈನಿಕರ ಅಭಿವೃದ್ಧಿ ಸಂಘದ ಅಧ್ಯಕ್ಷ ಸಿದ್ಧಲಿಂಗ ಆರ್ ಮಲಶೆಟ್ಟಿ ವಹಿಸುವರು. ಮುಖ್ಯ ಅತಿಥಿಗಳಾಗಿ ಆಳಂದ ತಾಲೂಕಿನ ಮಾಜಿ ಶಾಸಕ ಸುಭಾಷ ಆರ್. ಗುತ್ತೇದಾರ ಪಾಲ್ಗೊಳ್ಳುವರು.

ವಿಶೇಷ ಆಹ್ವಾನಿತರಾಗಿ ಮಾಜಿ ಸೈನಿಕರಾದ ರೇವಣಸಿದ್ದಪ್ಪ ಬೇತಾಳೆ, ಕಲ್ಲಪ್ಪ ಘಾಳೆ, ಶಾಂತಮಲ್ಲಪ್ಪ ಪಾಟೀಲ, ಲಕ್ಷ್ಮಣ ಜಾದವ್, ಸಚಿನ್ ಘಾಳೆ, ಬಾಬು ಜುಬ್ರೆ, ಚಂದ್ರಕಾಂತ್ ಯಳಮೇಲಿ ಸೇರಿದಂತೆ ಮಲ್ಲಯ್ಯ ಮಠಪತಿ, ತಿಪ್ಪಣ್ಣ ಕುಂಬಾರ, ಶಿವಲಿಂಗಪ್ಪ ಪಾಟೀಲ, ಅಪ್ಪಾಸಾಹೇಬ್ ತೀರ್ಥೆ, ನರಸಪ್ಪ ಜಮಾದಾರ ಪಾಲ್ಗೊಳ್ಳುವರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here