ಯಾದಗಿರಿ; ಜಿಲ್ಲೆಯ ಸುರಪುರ ತಾಲೂಕಿನ ಮಾಣಿಕ್ಯಳ ದಲ್ಲಿ ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾದ ಯಾದಗಿರಿ ಜಿಲ್ಲಾ ನೂತನ ಪದಾಧಿಕಾರಿ ಗಳ ಆಯ್ಕೆ ಜಿಲ್ಲಾ ನೂತನ ಘಟಕ ರಚನೆ ಆದೇಶ ಪತ್ರ ವಿತರಣಾ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಅಧ್ಯಕ್ಷರಾದ ಬಿ.ಎಲ್ ಹನುಮಂತಪ್ಪನವರು ವಹಿಸಿಕೊಂಡಿದ್ದರು ಮೊದಲಿಗೆ ಬುದ್ಧ, ಬಸವ, ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಲಾಯಿತು. ನಂತರ ಜಿಲ್ಲೆಯಿಂದ ಆಗಮಿಸಿದ ಅಲೆಮಾರಿ ಸಮುದಾಯಗಳ ಪರಿಚಯವನ್ನು ಮಾಡಿಕೊಳ್ಳಲಾಯಿತು. ನಂತರ ಸಂವಿಧಾನ ಪೀಠಿಕೆಯ ಪ್ರಮಾಣ ವಚನವನ್ನು ರಾಜಶೇಖರ ಡೊಕ್ಕಹೊರ ದಾರವಡ ಜಿಲ್ಲಾ ಅಧ್ಯಕ್ಷರು ಬೋಧಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ನಾಗರಾಜ್ ಕಡೂರ್ ವಕೀಲರು ಪ್ರಾಸ್ತವಿಕವಾಗಿ ಮಾತನಾಡಿದರು. ನಂತರ ಜಿಲ್ಲೆಯ ನೂತನ ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ತಿಳಿಸಿದರು ಎಲ್ಲಾ ಸಮಾಜದವರ ಒಪ್ಪಂದದ ಮೇರೆಗೆ ಚರ್ಚಿಸಿ ತೀರ್ಮಾನಿಸಿ ಯಾದಗಿರಿ ಜಿಲ್ಲಾ ಅಲೆಮಾರಿ ಬುಡಕಟ್ಟು ಮಹಾಸಭಾ ಅಧ್ಯಕ್ಷರನ್ನಾಗಿ ರಾಜು ಆರ್ ದೊಡ್ನನಿ ಇವರನ್ನು ನೇಮಿಸಲಾಯಿತು ಅದೇ ರೀತಿಯಾಗಿ ವೆಂಕಟೇಶ್ ಕಟ್ಟಿಮನಿ ನಾಯ್ಕಲ ಇವರನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿ ಆದೇಶ ಪ್ರತಿಯನ್ನು ನೀಡಲಾಯಿತು.
ಸಭೆಯನ್ನು ಉದ್ದೇಶಿಸಿ ರಾಜ್ಯ ಅಧ್ಯಕ್ಷರಾದ ಶ್ರೀ ಬಿ ಎಲ್ ಹನುಮಂತಪ್ಪ ಇವರು ಮಾತನಾಡುತ್ತ ಅಲೆಮಾರಿ ಸಮುದಾಯಗಳು ಜಾತಿ ಪ್ರಮಾಣ ಪತ್‌ರಗಳ ಸಮಸ್ಯೆ ಇದೆ ಸರಕಾರ ಸೌಲಭ್ಯಗಳು ಸಿಗುತ್ತಿಲ್ಲ ಹಾಗೂ ವಸತಿ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲವಾದ್ದರಿಂದ ನಾವು ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಬದಲಾವಣೆಯಾಗಬೇಕಾಗಿದೆ ಆದ್ದರಿಂದ ಯಾವುದೇ ಸಮಸ್ಯೆಗಳು ಇದ್ದರೆ ಯಾದಗಿರಿ ಜಿಲ್ಲಾ ಘಟಕಕ್ಕೆ ಮಾಹಿತಿ ನೀಡಿ ಅಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ನಮ್ಮ ರಾಜ್ಯ ಘಟಕಕ್ಕೆ ಮಾಹಿತಿ ನೀಡಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹೇಳವ, ದೊಂಬರ ಶಿಳ್ಳೆಕ್ಯಾತ ಸುಡುಗಾಡು ಸಿದ್ದ, ಬುಡ್ಗ ಜಂಗಮ ಚಿನ್ನ ದಾಸರ, ಸಿಂದೋಳು, ಬೈಲ್ ಪತ್ತಾರ ಸಮುದಾಯದ ಮುಖಂಡರು ಇದ್ದರು.
ಈ ಕಾರ್ಯಕ್ರಮದಲ್ಲಿ ರಾಜ್ಯ ಜಂಟಿ ಕಾರ್ಯದರ್ಶಿಯಾದ ಸಿಂಹಾದ್ರಿ ಸಿಂಧನೂರು, ಲತಾ ಮೇಡಂ ಹುಸೇನಪ್ಪ ಗೊಂದಳ್ಳಿ, ತುಕಾರಾಮ, ನೆಹರು, ರವಿ ದೇವಾಪುರ,ಬಸಪ್ಪ ಸಾಬಣ್ಣ ದೊಡ್ಡಮನಿ, ಗೌಡಪ್ಪ ಚನ್ನದಾಸರ ಅನಂತ ಹನುಮನಾಳ ಮರಿಯಪ್ಪ ಸಾಬಣ್ಣ ಹಂಚಿನಾಳ ಯಲ್ಲಮ್ಮಗಂಡ ಗುಂಡಪ್ಪ ದೊಂಬರ್, ಮರಿಯಪ್ಪ ತಂದೆ ಸಾಬಣ್ಣ. ಶಿವಣ್ಣ ಮಾರುತಿ ತಂದೆ ನಿಂಗಪ್ಪ, ದೊಡ್ಡ ಮಾರಪ್ಪ, ಸಮುದಾಯದ ಹಿರಿಯ ಮುಖಂಡರು ಮಹಿಳೆಯರು ಭಾಗವಹಿಸಿದರು.
ವೆಂಕಟೇಶ ಕಟ್ಟಿಮನಿ ನಾಯ್ಕಲ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ನಿರೂಪಣೆ ಮಾಡಿದರೆ, ಜಿಲ್ಲಾ ಅಧ್ಯಕ್ಷ ರಾಜು ಆರ್ ದೊತ್ಮನಿ ವಂದಿಸಿ ಕಾರ್ಯಕ್ರಮ ಮುಕ್ತಾಯ ಮಾಡಿದರು.