ಸ್ಪರ್ಧಾ ಮನೋಭಾವನೆಯೊಂದಿಗೆಉನ್ನತಗುರಿ ಹೊಂದಿ: ವಿ.ಎಸ್. ಹಿರೇಮಠ್

0
75

ಕಲಬುರಗಿ: ಪ್ರಸ್ತುತ ಸಂದರ್ಭದಲ್ಲಿಎಲ್ಲ ಸೌಲಭ್ಯಗಳು ಲಭ್ಯವಿದ್ದು, ಅವುಗಳನ್ನು ಸದುಪಯೋಗ ಮಾಡಿಕೊಂಡು ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸಿಕೊಳ್ಳುವುದರೊಂದಿಗೆ ಉನ್ನತಗುರಿ ಹೊಂದಬೇಕುಎಂದು ನಿವೃತ್ತ ಪ್ರಿನ್ಸಿಪಾಲ್ ಹಾಗೂ ಹಿರಿಯ ಪ್ರಾಧ್ಯಾಪಕ ವಿ.ಎಸ್. ಹಿರೇಮಠ್‍ಅವರುಕರೆ ನೀಡಿದರು.

ಗುರುವಾರ ನಗರದ ಹೊಸ ಜೇವರ್ಗಿರಸ್ತೆಯಲ್ಲಿರುವಯಾತ್ರಿಕ್‍ಕಟ್ಟಡದಲ್ಲಿನಎಂ.ಎನ್. ದೇಸಾಯಿಕಾಲೇಜಿನಲ್ಲಿ ಐಸಿಐಸಿಐ ಬ್ಯಾಂಕ್ ವತಿಯಿಂದ ಹಮ್ಮಿಕೊಂಡಉದ್ಯೋಗ ಮೇಳವನ್ನು ಸಸಿಗೆ ನೀರುಎರೆಯುವ ಮೂಲಕ ಉದ್ಘಾಟಿಸಿ ಮುಖ್ಯ ಅತಿಥಿಗಳಾಗಿ ಮಾತನಾಡಿದಅವರು, ಪದವಿಧರರು ಸಣ್ಣಪುಟ್ಟಗುರಿಯನ್ನು ಹೊಂದಬಾರದು.ಸಂಕುಚಿತ ಉದ್ದೇಶಗಳನ್ನು ಯಾವುದೇಕಾರಣಕ್ಕೂ ಇಟ್ಟುಕೊಳ್ಳಬಾರದು ಎಂದರು.

Contact Your\'s Advertisement; 9902492681

ಪ್ರಸ್ತುತ ಸಂದರ್ಭದಲ್ಲಿ ಕೇವಲ ಇಂಜನಿಯರ್ ಹಾಗೂ ವೈದ್ಯರಾಗಲು ಹೆಚ್ಚು ಆಸಕ್ತಿ ವಹಿಸಲಾಗುತ್ತದೆ. ಆದಾಗ್ಯೂ, ಇನ್ನೂ ಉಳಿದ ಕ್ಷೇತ್ರಗಳಲ್ಲಿಯೂ ಸಹ ಸಾಕಷ್ಟು ಉದ್ಯೋಗದ ವಕಾಶಗಳು ಇವೆ. ಆ ಕಡೆಗೆ ಹೆಚ್ಚು ಗಮನಹರಿಸಬೇಕು.ಸರ್ಕಾರಿ ನೌಕರಿಗಳು ಅತ್ಯಲ್ಪ. ನೂರು ಹುದ್ದೆಗಳು ಇದ್ದರೆ ಲಕ್ಷಗಂಟಲೇ ಅರ್ಜಿಗಳು ಬರುತ್ತವೆ. ಹಾಗಾಗಿ ಸರ್ಕಾರಿ ನೌಕರಿಗೆಕಾಯದೇಜಾಗತಿಕ ಪೈಪೋಟಿಯ ಹಿನ್ನೆಲೆಯಲ್ಲಿ ಖಾಸಗಿ ವಲಯದಲ್ಲಿಯೂ ಸಹ ಉತ್ತಮಉದ್ಯೋಗವನ್ನು ಪಡೆಯಲು ಸಾಧ್ಯವಿದೆಎಂದುಅವರು ಹೇಳಿದರು.

ಕಲೆ ಮತ್ತು ವಾಣಿಜ್ಯ ಶಾಸ್ತ್ರದಲ್ಲಿ ಪದವಿ ಪಡೆದವರಿಗಂತೂ ವಿಫುಲ ಅವಕಾಶಗಳಿವೆ. ಸಾಕಷ್ಟು ಅಧ್ಯಯನ ಮಾಡಬೇಕು.ಇರುವಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ಐಎಎಸ್ ಮತ್ತುಕೆಎಎಸ್‍ಉತ್ತೀರ್ಣರಾಗುವ ಮೂಲಕ ತಹಸಿಲ್ದಾರ್, ಜಿಲ್ಲಾಧಿಕಾರಿಗಳಾಗುವ ಹಾಗೆ ಪ್ರಯತ್ನ ಮಾಡಬೇಕುಎಂದುಅವರು ಸಲಹೆ ಮಾಡಿದರು.

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿಉತ್ತೀರ್ಣರಾಗಿಒಂದು ವೇಳೆ ತಹಸಿಲ್ದಾರ್ ಆಗಿ ಕಾರ್ಯನಿರ್ವಹಿಸಿದರೆ ವೈದ್ಯರು, ಇಂಜಿನಿಯರರುತಮ್ಮಅಧೀನದಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ.ಹಾಗಾಗಿ ಕಲೆ ಮತ್ತು ವಾಣಿಜ್ಯ ವಿಭಾಗಗಳನ್ನು ಕಡಿಮೆಎಂದು ಪರಿಗಣಿಸಬಾರದುಎಂದು ಹೇಳಿದ ಅವರು, ಈ ಹಿಂದೆ ಶೈಕ್ಷಣಿಕ ಸೌಲಭ್ಯಗಳಿಲ್ಲದೇ ಇದ್ದರೂ ಸಹ ವಿಜ್ಞಾನಿಗಳಾಗಿದ್ದಾರೆ.ಅದಕ್ಕೆ ಮಾಜಿರಾಷ್ಟ್ರಪತಿಡಾ.ಅಬ್ದುಲ್ ಕಲಾಂ ಅವರೇ ನಿದರ್ಶನವಾಗಿದ್ದಾರೆ.

ಗ್ರಂಥಾಲಯದಲ್ಲಿ ಪುಸ್ತಕ ಓದಿ ಜ್ಞಾನದ ಭಂಡಾರವನ್ನು ಹೊಂದಿದ್ದರು. ವಿಜ್ಞಾನಿಯಾಗಿ, ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಂಥವರಿಂದ ನೀವೆಲ್ಲ ಸ್ಪೂರ್ತಿ ಪಡೆಯಬೇಕುಎಂದುಅವರು ಕಿವಿಮಾತು ಹೇಳಿದರು.
ಖಾಸಗಿ ವಲಯದಲ್ಲಿ ಸಾಕಷ್ಟು ಉದ್ಯೋಗವಕಾಶಗಳು ಇವೆ. ಅಂತಹ ಕೈಗಾರಿಕೆಗಳಲ್ಲಿ ನೀವು ಆಯ್ಕೆಯಾದರೆ ಪ್ರತಿ ತಿಂಗಳು ಲಕ್ಷಗಂಟಲೇ ವೇತನ ಪಡೆಯಬಹುದಾಗಿದೆ.ಯಾವುದಕ್ಕೂ ನಿರ್ಲಕ್ಷ್ಯತೆ, ಬೇಸರ ಹಾಗೂ ಅಸಮಾಧಾನ ಹೊಂದದೇ ಓದಿನೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗುವ ಮೂಲಕ ಒಂದು ಒಳ್ಳೆಯ ಹುದ್ದೆಗೆ ಹೋಗಿ ಎಂದುಅವರು ತಿಳಿಸಿದರು.

ಇನ್ನೋರ್ವ ಮುಖ್ಯಅತಿಥಿ ಪತ್ರಕರ್ತ ಬಸವರಾಜ್ ಚಿನಿವಾರ್‍ಅವರು ಮಾತನಾಡಿ, ಕಳೆದ 20 ವರ್ಷಗಳ ಹಿಂದೆಇದ್ದ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ಸಾಕಷ್ಟು ಬದಲಾವಣೆಇದೆ.ಈಗ ಎಲ್ಲರೀತಿಯ ಸೌಲಭ್ಯಗಳು ಇವೆ. ಸಾರಿಗೆ, ಶಿಕ್ಷಣ, ಆರೋಗ್ಯ ಸೇರಿದಂತೆಎಲ್ಲರೀತಿಯ ಮೂಲಭೂತ ಸೌಲಭ್ಯಗಳು ಇವೆ. ಹಾಗಾಗಿ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಇಲ್ಲ. ಹಾಗಾಗಿ ಗುರಿ ಹೊಂದಿ ಓದಬೇಕು.ಒಂದು ವೇಳೆ ಗುರಿ ಸಾಧಿಸದೇ ಹೋದಲ್ಲಿಕೌಶಲ್ಯ ಹೊಂದಿದ್ದನ್ನೇ ವೃತ್ತಿಯನ್ನಾಗಿ ಮಾಡಿಕೊಳ್ಳುವ ಮೂಲಕ ಸಮಾಜದಲ್ಲಿಉತ್ತಮ ನಾಗರಿಕರಾಗಬೇಕುಎಂದುಕರೆ ನೀಡಿದರು.

ಯಾವುದೇಕಾರಣಕ್ಕೂ ದುರಭ್ಯಾಸಗಳಿಗೆ ಒಳಗಾಗಬಾರದು.ಕೆಟ್ಟ ಆಲೋಚನೆಗಳನ್ನು ಮಾಡಬಾರದು.ಅನಾರೋಗ್ಯಕರಟೀಕೆ, ಟಿಪ್ಪಣೆಗಳಿಗೆ ಕಿವಿಕೊಡಬಾರದು.ಕೀಳರಿಮೆಗೆ ಅವಕಾಶ ಕೊಡಬಾರದು.ಒಳ್ಳೆಯ ಧ್ಯೇಯದೊಂದಿಗೆ, ಒಳ್ಳೆಯ ವಿಚಾರಗಳೊಂದಿಗೆ, ಒಳ್ಳೆಯ ಆಲೋಚನೆಯೊಂದಿಗೆ ಓದಿನಲ್ಲಿತೊಡಗಬೇಕುಎಂದುಅವರು ಹೇಳಿದರು.

ಉದ್ಘಾಟನೆ ನೆರವೇರಿಸಿದ ಅಟಲ್ ಬಿಹಾರಿ ವಾಜಪೇಯಿ ಫೌಂಡೇಶನ್ನಿನಅರುಣರೆಡ್ಡಿ ಶಿವಪೂರ್ ಅವರು ಮಾತನಾಡಿ, ನಗರದಲ್ಲಿಉತ್ತಮ ಶಿಕ್ಷಣ ಸಂಸ್ಥೆಯನ್ನುಅಧ್ಯಕ್ಷ ಸಂದೀಪ್‍ದೇಸಾಯಿಅವರು ಹುಟ್ಟುಹಾಕಿದ್ದಾರೆ.ಈಗಾಗಲೇ ಅನೇಕರುಉದ್ಯೋಗ ಮೇಳದಲ್ಲಿ ಆಯ್ಕೆಯಾಗಿದ್ದಾರೆ.ಕನಿಷ್ಠ 40 ಅಭ್ಯರ್ಥಿಗಳು ಉದ್ಯೋಗ ಪಡೆದುಕೊಂಡಿದ್ದಾರೆ.ಇದು ಸಣ್ಣ ಮಾತಲ್ಲಎಂದರು.

ಒಂದು ಶಿಕ್ಷಣ ಸಂಸ್ಥೆಯನ್ನುಕಟ್ಟಿ ಬೆಳೆಸುವುದು ಸುಲಭವಲ್ಲ. ಆದಾಗ್ಯೂ, ಎಂ.ಎನ್. ದೇಸಾಯಿಕಾಲೇಜುಗುಣಮಟ್ಟದ ಶಿಕ್ಷಣವನ್ನು ಕೊಡುವುದರಜೊತೆಗೆಉನ್ನತ ಶಿಕ್ಷಣದಲ್ಲಿ ತನ್ನದೇಆದಛಾಪು ಮೂಡಿಸಿದೆ ಎಂದುಅವರು ಬಣ್ಣಿಸಿದರು.ಟಿವಿಎಸ್‍ಕಂಪೆನಿಯ ಮಾನವ ಸಂಪನ್ಮೂಲ ಅಧಿಕಾರಿ ಶ್ರೀನಿಧಿ ಅವರು ಮಾತನಾಡಿ, ವಿವಿಧ ಕಂಪೆನಿಗಳಲ್ಲಿ ಉದ್ಯೋಗದ ಅವಕಾಶಗಳಿವೆ. ಅದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದುಕರೆ ನೀಡಿದರು.

ವೇದಿಕೆಯ ಮೇಲೆ ಸಂಸ್ಥೆಯಅಧ್ಯಕ್ಷ ಸಂದೀಪ್‍ದೇಸಾಯಿ, ಕಾರ್ಯದರ್ಶಿ ಜಗನ್ನಾಥ್ ನಾಗೂರ್‍ಅವರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ನಾಗರಾಜ್ ಪಟ್ಟಣಕರ್, ಮಂಜುನಾಥ್ ಬನ್ನೂರ್, ಶಿವಶರಣಪ್ಪ ಪೂಜಾರಿ, ರಾಧಿಕಾಗುತ್ತೇದಾರ್, ರೇಷ್ಮಾರಾಠೋಡ್, ಕಾವೇರಿ ಭಾಸ್ಕರ್, ಶ್ರೀಮತಿ ನೀಲಮ್ಮ, ಆಫ್ರೀನ್ ಬೇಗಂ, ಶಿಲ್ಪಾ ಚೆಟ್ಟಿ, ಸಂತೋಷ್ ಲಷ್ಕರ್, ಶಿವರಾಜ್ ಹಾಗೂ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು.
ಆರಂಭದಲ್ಲಿ ವಿದ್ಯಾರ್ಥಿನಿ ಕು.ಮಮತಾತಂದೆಈರಪ್ಪಅವರು ಸ್ವಾಗತಿಸಿದರು.ಕು.ಅನುಷಾ ತಂದೆ ಹಣಮಂತರಾವ್‍ಅವರುಕಿರು ಪರಿಚಯ ಮಾಡಿದರು.ಪ್ರಾಧ್ಯಾಪಕಿ ಪಲ್ಲವಿ ಅವರು ಅತಿಥಿಗಳ ಸನ್ಮಾನ ನೆರವೇರಿಸಿದರು.ಇತಿಹಾಸ ಪ್ರಾಧ್ಯಾಪಕಿ ಶ್ರೀಮತಿ ಸುಜಾತಾಕುಲಕರ್ಣಿಅವರು ವಂದಿಸಿದರು. ವಿದ್ಯಾರ್ಥಿನಿ ರೇಣುಕಾತಂದೆ ಬಸಯ್ಯಸ್ವಾಮಿಅವರುಕಾರ್ಯಕ್ರಮ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here