ನಿಗಮದಿಂದ ಸೌಲಭ್ಯ ಒದಗಿಸಿ

0
177

ಕಲಬುರಗಿ: ಕ್ರೈಸ್ತರ ಅಭಿವೃದ್ಧಿ ನಿಗಮವನ್ನು ಸಿಎಂ ಸಿದ್ದರಾಮಯ್ಯ ಘೋಷಿಸಿ 100 ಕೋಟಿ ರೂ. ಮೀಸಲು ಇಟ್ಟರೂ ಸಮುದಾಯಕ್ಕೆ ಸೌಲಭ್ಯ ಸಿಗುತ್ತಿಲ್ಲ. ಆದ್ದರಿಂದ ತಕ್ಷಣವೇ ರಾಜ್ಯ, ಜಿಲ್ಲಾ ಮಟ್ಟದಲ್ಲಿ ಕಮಿಟಿ ರಚಿಸಿ ಕೈಸ್ತರಿಗೆ ಲಾಭ ದೊರಕಿಸಿಕೊಡಲು ಸಚಿವ ಸಂಪುಟದಲ್ಲಿ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಕ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಗೆ ಕಲ್ಯಾಣ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಆಯಂಡ್ ಪಾಸ್ಟರ್ಸ ಫೆÇೀರಂ ಮನವಿ ಸಲ್ಲಿಸಿ ಆಗ್ರಹಿಸಿದೆ.

ಕ್ರೈಸ್ತ ಸಮುದಾಯ ಪ್ರವರ್ಗ-1 ಹಾಗೂ ಪ್ರವರ್ಗ-3(29) ನೋಂದಣಿ ಆಗಿದೆ. ಆದರೆ, ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಮಾರು ಕ್ರೈಸ್ತರು ದಲಿತ ಕುಟುಂಬದಿಂದ ಕೈಸ್ತತ್ವವನ್ನು ಸ್ವೀಕಾರ ಮಾಡಿ ಅವರಿಗೆ ನೀಡಬೇಕಾದ ಕ್ಯಾಟಗರಿ-1 ಜಾತಿ ಪ್ರಮಾಣ ಪತ್ರ ತಿರಸ್ಕರಿಸಲಾಗಿದೆ. ಈ ಸಮಸ್ಯೆಯನ್ನು ಪರಿಹರಿಸಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೆಥೋಡಿಸ್ಟ್ ಸಭೆಯಿಂದ ಶಿಕ್ಷಣ ಹಾಗೂ ವೈದ್ಯಕೀಯ ಬಡ ಹಾಗೂ ಹಿಂದುಳಿದ ವರ್ಗದ ಕುಟುಂಬದವರಿಗೆ ನೀಡಿರುತ್ತಾರೆ.

Contact Your\'s Advertisement; 9902492681

ಆದರೆ, ಈಗ ನಮ್ಮದೇ ಮೆಥೋಡಿಸ್ಟ್ ಧರ್ಮಗುರು ಈ ಆಸ್ತಿಗಳು ತಮ್ಮ ಸ್ವಂತ ಲಾಭಕ್ಕಾಗಿ ಮಾರಾಟ ಅಥವಾ ಲೀಜ್‍ಗೆ ನೀಡಲು ಸಂಚು ನಡೆಸುತ್ತಾ ಇದ್ದಾರೆ. ಆದಕಾರಣ ಕೈಸ್ತರ ಆಸ್ತಿಗಳನ್ನು ರಕ್ಷಣೆಗೆ ವಿಶೇಷ ಕಾನೂನು ಜಾರಿಗೆ ತರಬೇಕು. ಕೈಸ್ತರ ಅಂತ್ಯಸಂಸ್ಕಾರಕ್ಕೆ ಸೂಕ್ತ ಸ್ಥಳಗಳನ್ನು ಸರಕಾರದಿಂದ ಒದಗಿಸಿಕೊಡಬೇಕು. ಕ್ರಿಸ್ ಮಸ್ ಹಬ್ಬವನ್ನು ಪ್ರತಿ ಜಿಲ್ಲೆಯಲ್ಲಿ ಸರಕಾರ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಆಚರಿಸಲು ಅವಲಾಶ ಮಾಡಿಕೊ ಡಬೇಕೆಂಬುದು ಸೇರಿದಂತೆ ಅನೇಕ ಬೇಡಿಕೆ ಗಳನ್ನು ಈಡೇರಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಕಾರ್ಯದರ್ಶಿ ಸಾಮ್ಯು ವೆಲ್ ಸಂಧ್ಯರಾಜ, ಶಿರೋಮಣಿ, ಪರಶು ರಾಮ, ಮನಮೋಹನ್ ಸಾಮ್ಯುವೆಲ್, ಸುಧಿರ್ ಎಸ್.ಕೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here