ಕಲಬುರಗಿ: ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಲ್ಲಿ ಸ್ವಚ್ಛತೆಯ ಸೇವೆ ಅಭಿಯಾನದಡಿ ಸ್ವಭಾವ ಸ್ವಚ್ಛತೆ-ಸಂಸ್ಕಾರ ಸ್ವಚ್ಛತೆ ಎಂಬ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ. ಶರಣಬಸಪ್ಪ ಕ್ಯಾತನಾಳ ರವರು ಸ್ವಚ್ಛಗೊಳಿಸುವ ಮೂಲಕ ಮತ್ತು ಸಸಿಗಳನ್ನು ನಡೆಸಿ ಚಾಲನೆ ನೀಡಿದರು.
ಇದೆ ಸಂದರ್ಭದಲ್ಲಿ ಜಿಲ್ಲಾ ಕಾಲರ ನಿಯಂತ್ರಣ ಆಧಿಕಾರಿಗಳು ಡಾ.ವಿವೇಕಾನಂದ ರೆಡ್ಡಿ , ಜಿಲ್ಲಾ ಕುಷ್ಠರೋಗ ಕಾರ್ಯಕ್ರಮ ಆಧಿಕಾರಿಗಳು ಡಾ.ರಾಜಕುಮಾರ ಕುಲ್ಕರ್ಣಿ. ಜಿಲ್ಲಾ ಎನ್ ವಿಬಿಡಿಸಿಪಿ ಅಧಿಕಾರಿಗಳು ಡಾ.ಬಸವರಾಜು ಗುಳಗಿ, ಜಿಲ್ಲಾ ಸಹಾಯಕ ಆಡಳಿತಾಧಿಕಾರಿಗಳು ಪಿಪಿ ನಾಯಕ್ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಸೋಮು ರಾಠೋಡ. ಹಾಗೂ ಆಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಜಿಲ್ಲೆಯ ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿಯೂ ಕೂಡ ಸ್ವಚ್ಛತೆಯ ಸೇವೆ ಅಭಿಯಾನ ಕಾರ್ಯಕ್ರಮ ಮಾಡಲಾಯಿತ್ತು.