ಭಾರತ ಭವ್ಯತೆ ಪ್ರತಿಪಾದಕ ವಿವೇಕಾನಂದರು: ಎ.ಕೆ.ರಾಮೇಶ್ವರ

0
17

ಕಲಬುರಗಿ: ಋಷಿ ಮುನಿಗಳಿಂದ ಕೂಡಿದ ಭಾರತ ಪರಂಪರೆಯಲ್ಲಿ ಸ್ವಾಮಿ ವಿವೇಕಾನಂದರು ಬಂದವರು
ಯುವಕರ ಕೆಚ್ಚೆದೆಯನ್ನು ಎಚ್ಚರಿಸಿ ವರ್ಗ,ವರ್ಣ,ಲಿಂ ಗ ತಾರತ್ಯಮ್ಮ ಅಳಿಸಿ,ದಾರಿದ್ರ್ಯತನ ಬಿಡಿಸಿದವರು ಅವರು ಭಾರತದ ಭವ್ಯತೆಯನ್ನು ಪ್ರತಿಪಾದಕರು ಎಂದು ಹಿರಿಯ ಸಾಹಿತಿ ಎ.ಕೆ.ರಾಮೇಶ್ವರ ಅಭಿಮತ ವ್ಯಕ್ತಪಡಿಸಿದರು.

ಸ್ವಾಮಿ ವಿವೇಕಾನಂದ ಪ್ರಸಾರ ಕೇಂದ್ರ ಬೆಂಗಳೂರು ಮತ್ತು ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕ ಆಶ್ರಯದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಫರಹತಾಬಾದನ ಲ್ಲಿ ಜರುದಿದ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡಿ ದರು.ಭಾರತದ ಗುಲಾಮಗಿರಿತನ,ಬಡತನವನ್ನು ಮೀರಿ ಬೆಳೆದ ಅವರು ವೀರ ಸನ್ಯಾಸಿ,ಆಧ್ಯಾತ್ಮ ದೈವಿ ಪುರುಷರೆಂದರು.

Contact Your\'s Advertisement; 9902492681

‌ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ.ಇಂದುಮ ತಿ ಪಾಟೀಲ ವಹಿಸಿ ಅಮೇರಿಕಾದಲ್ಲಿ ಭಾರತ ಸಂಸ್ಕೃತಿ ಬಿತ್ತಿದ ವಿವೇಕರ ಆಶಾಕಿರಣ ಜಗತ್ತಿಗೆ ಮೂಡಲಿ ಎಂದರು.

ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ.ಶಶಿಕಾಂತ ಪಾಟೀಲ, ಸಮಾಜ ಶಾಸ್ತ್ರ ಪ್ರಾಧ್ಯಾಪಕ ಡಾ.ರವೀಂದ್ರ ಕುಮಾರ ಭಂಡಾರಿ, ಪ್ರೊ.ಭೀಮಣ್ಣ ಎಚ್.ರಾಸಣಗಿ,ಡಾ.ಗಾಂಧೀ ಜಿ ಮೊಳಕೇರಿ ಮಾತನಾಡಿದರು.

ಶಿವುಬಾಯಿ ಪ್ರಾರ್ಥನೆ ಸ್ವಾಗತವನ್ನು ಭೀಮಣ್ಣ ಎಚ್. ಕೋರಿದರು.ವೇದಿಕೆಯ ಅಧ್ಯಕ್ಷ ಡಾ.ಗವಿಸಿದ್ಧಪ್ಪ ಪಾಟೀಲರು ಪ್ರಾಸ್ತಾವಿಕ ನುಡಿ ಆಡಿದರು.ಪ್ರಧಾನ ಕಾರ್ಯದರ್ಶಿ ಡಾ.ಸಿದ್ಧಪ್ಪ ಹೊಸಮನಿ ನಿರೂಪಿಸಿದ ರು.ಸಂಘಟನಾ ಕಾರ್ಯದರ್ಶಿ ಡಾಕಪ್ಪ ಮೋತಿಲಾಲ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here