ಕ್ರೀಡಾಪಟುಗಳಿಗೆ ಪ್ರೋತ್ಸಾಹ ಅತ್ಯವಶ್ಯಕ: ಶಾಸಕ ಅಲ್ಲಮಪ್ರಭು ಪಾಟೀಲ

0
37

ಕಲಬುರಗಿ: ಕರ್ನಾಟಕರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ ಹಾಗೂ ಕರ್ನಾಟಕರಾಜ್ಯಆರೋಗ್ಯ ಮತ್ತುಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಸಂಘದ ಸಹಯೋಗದಲ್ಲಿ ನಗರದಕನ್ನಡ ಭವನದಲ್ಲಿ ಕರ್ನಾಟಕರಾಜ್ಯ ಸರಕಾರಿ ನೌಕರರರಜ್ಯ ಮಟ್ಟದಕ್ರೀಡಾಕೂಟದಲ್ಲಿ ವಿಜೇತರಾದ 25 ನೌಕರ ಬಾಂಧವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕಲಬುರಗಿದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ ರವರು ನೆರವೇರಿಸಿ ಮಾತನಾಡುತ್ತ, ಯಾವುದೇ ಸ್ಪರ್ದೇ, ಕ್ರೀಡೆಯಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಅಭಿನಂದಿಸಿ ಸ್ಪೂರ್ತಿತುಂಬುವ ಕೆಲಸ ಮಾಡಿದಾಗಅವರ ಮನೋಸ್ಥೈರ್ಯ ಹೆಚ್ಚಾಗಿ ಇನ್ನು ಹೆಚ್ಚಿನ ಸಾಧನೆ ಮಾಡಲು ಸಹಾಯಕವಾಗುತ್ತದೆ, ಅಂತಹ ಕೆಲಸ ಮಾಡಿದಎರಡು ಸಂಘಟನೆಗಳಿಗೆ ಅಭಿನಂದನೆ ತಿಳಿಸಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿಗೌರವ ಸನ್ಮಾನಿತರಾಗಿ ಪಾಲ್ಗೊಂಡ ಕಲಬುರಗಿ ನಗರದ ಪೋಲಿಸ್ ಆಯುಕ್ತರಾದ ಶರಣಪ್ಪ ಢಗೆರವರು ವಿಶೇಷ ಸತ್ಕಾರ ಸ್ವೀಕರಿಸಿ, ಶಿಕ್ಷಕರ ವೃತ್ತಿಅತ್ಯಂತ ಶ್ರೇಷ್ಠ ವೃತ್ತಿ, ಶಿಕ್ಷಕರನ್ನು ಅಂತರಾಳದಿಂದ ನಮಸ್ಕರಿಸುತ್ತೇನೆಎಂದರು.ಇಂದಿನ ದಿನದಲ್ಲಿ ಪಾಲಕರು ಮಕ್ಕಳಿಗೆ ಹಣ, ದುಬಾರಿ ವಸ್ತುಗಳನ್ನು ಕೊಡುವ ಬದಲುಅವರಿಗೆ ಪಾಲಕರುತಮ್ಮಅಮೂಲ್ಯ ಸಮಯ ನೀಡಬೇಕು ಹಾಗೂ ಇಂದಿನ ಸಮಾಜದಲ್ಲಿ ಸಂಪತ್ತಿಗಿಂತಆರೋಗ್ಯ ಬಹುಮುಖ್ಯ, ನಾವು ಪ್ರತಿನಿತ್ಯ ವ್ಯಾಯಾಮ ಹಾಗೂ ಕ್ರೀಡೆಯಲ್ಲಿತೊಡಗುವ ಮೂಲಕ ಆರೋಗ್ಯವಂತರಾಗಿರಬೇಕೆಂದು ಹೇಳಿದರು.

ಪ್ರಾಸ್ತಾವಿಕವಾಗಿ ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ  ಮಹೇಶ ಹೂಗಾರರವರು ಮಾತನಾಡಿದರು.

ಕಾರ್ಯಕ್ರಮದಅಧ್ಯಕ್ಷತೆಯನ್ನುಆರೋಗ್ಯಇಲಾಖೆಯ ನೌಕರರ ಸಂಘದ ಜಿಲ್ಲಾಅಧ್ಯಕ್ಷರಾದ ಶ್ರೀ ಚಂದ್ರಕಾಂತ ಏರಿ ವಹಿಸಿದ್ದರು. .ಮುಖ್ಯ ಅತಿಥಿಗಳಾಗಿ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಅಂಬಾರಾಯರುದ್ರ ವಾಡಿ, ಉಪ ನಿರ್ದೇಶಕರಾದ ಡಾ.ಶರಣಬಸಪ್ಪಗಣಜಲಖೇಡ, ಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಶರಣಬಸಪ್ಪ ಕ್ಯಾತನಾಳ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಸೂರ್ಯಕಾಂತ ಮದಾನೆ, ಜಿಲ್ಲಾಕನ್ನಡ ಸಾಹಿತ್ಯ ಪರಿಷತ್‍ ಅಧ್ಯಕ್ಷರಾದ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಸರಕಾರಿ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಬಸವರಾಜ ಬಳೂಂಡಗಿ, ಸರಕಾರಿ ಮಹಿಳಾ ಪಾಲಿಟೆಕ್ನಿಕ್‍ಕಾಲೇಜಿನ ಹಿರಿಯ ಉಪನ್ಯಾಸಕರಾದ ಎಂ.ಬಿ.ಪಾಟೀಲ ರವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ನೌಕರರ ಸಂಘದ ಪ್ರತಿನಿಧಿಗಳು ಪಾದಾಧಿಕಾರಿಗಳು, ಸರಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನುಡಾ.ಭುವನೇಶ್ವರಿ ಹಳ್ಳಿಖೇಡ ನಡೆಸಿಕೊಟ್ಟರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here