ವೈನ್ ಶಾಪ್ ಸ್ಥಳಾಂತರಕ್ಕೆ ಬಡಾವಣೆಯ ಜನರ ಆಗ್ರಹ

0
71

ಕಲಬುರಗಿ: ಪ್ರಪ್ರಥಮ ಬಾರಿಗೆ ವಾರ್ಡ್ ನಂಬರ್ 53 ರಿಂದ ಮಹಾನಗರ ಪಾಲಿಕೆಯ ಸದಸ್ಯರು ಹಾಗೂ ಪೂಜ್ಯ ಮಹಾಪೌರರಾಗಿ ಆಯ್ಕೆಯಾದ ಉದಯನಗರ ಬಡಾವಣೆಯ ನಿವಾಸಿ ಶ್ರೀ ಯಲ್ಲಪ್ಪ ನಾಯ್ಕೋಡಿ ರವರಿಗೆ ಬಡಾವಣೆಯ ಜನರ ವತಿಯಿಂದ ಹಲವು ಅಭಿವೃದ್ಧಿ ಕಾರ್ಯಕ್ಕಾಗಿ ಮನವಿ ಸಲ್ಲಿಸಲಾಯಿತು .

ಸುಮಾರು ದಶಕದ ಬಡಾವಣೆಯಾದ ಈ ನಗರಕ್ಕೆ ಯಾವೊಬ್ಬ ಮಹಾನಗರ ಪಾಲಿಕೆ ಸದಸ್ಯರು ಕಣ್ಣೆತ್ತಿ ನೋಡಲಿಲ್ಲ ಇದು ನಮ್ಮ ದುರಾದೃಷ್ಟವೇ ಸರಿ, ಆದರೆ ಈ ಬಾರಿ ಆಯ್ಕೆಯಾದ ಮಹಾನಗರ ಪಾಲಿಕೆ ಸದಸ್ಯರು ಅಭಿವೃದ್ಧಿ ಹರಿಕಾರರು ಹಾಗೂ ಉದಯ ನಗರ ಬಡಾವಣೆಯನು ಸ್ಮಾರ್ಟ್ ನಗರವನ್ನಾಗಿ ಮಾಡುತ್ತೇನೆಂದು ಪಣ ತೊಟ್ಟವರು.

Contact Your\'s Advertisement; 9902492681

ನಮ್ಮ ಹಲವು ಬೇಡಿಕೆಗಳಾದ ರಸ್ತೆ, ಒಳಚರಂಡಿ ವ್ಯವಸ್ಥೆ, ದೀಪದ ಕಂಬಗಳು, ರಸ್ತೆ ದೀಪಗಳು, ಕುಡಿಯುವ ನೀರು ಸಮಸ್ಯೆ, ಶುದ್ಧ ನೀರಿನ ಘಟಕ ಸ್ಥಾಪನೆ ಮಾಡುವುದು, ಆದಷ್ಟು ಬೇಗನೆ 24*7 ನಲ್ಲಿ ನೀರನ್ನು ಸರಬರಾಜು ಮಾಡುವುದು, ಗಾರ್ಡನ್ ಸೌಂದರ್ಯೀಕರಣ ಹಾಗೂ ಹಿರಿಯರಿಗೆ ಕೊಡುವ ಆಸನ ವ್ಯವಸ್ಥೆ, ಮಕ್ಕಳಿಗೆ ಆಟ ಆಡುವವಸ್ಥೆ, ಉದಯ ನಗರ ಬಡಾವಣೆಯ ಕಮಾನ ಮಾಡುವುದು, ಹಾಗೂ ಪ್ರಮುಖವಾಗಿ ಉದಯ ನಗರ ಬಡಾವಣೆಗೆ ಹತ್ತಿಕೊಂಡಿರುವ ಮಾಯ ವನ್ ಶಾಪ್ ಸ್ಥಳಾಂತರ ಮಾಡಬೇಕೆಂದು ಒತ್ತಾಯಿಸಿದ್ದರು.

ಬಡಾವಣೆಯ ಮಹಿಳೆಯರು ಹಾಗೂ ಚಿಕ್ಕ ಮಕ್ಕಳರ ಬಹುದೊಡ್ಡ ಬೇಡಿಕೆಯಾಗಿದೆ ಯಾಕೆಂದರೆ ಸಾಕಷ್ಟು ಬಾರಿ ಅಬಕಾರಿ ಅಧಿಕಾರಿಗಳಿಗೆ ಮನವಿ ಕೊಟ್ಟರು ಅವರು ಯಾವ ಕಾರ್ಯ ಚಟುವಟಿಕೆ ಮಾಡಿರುವುದು ತುಂಬಾ ನೋವು ತಂದಿರುತ್ತದೆ, ಕುಡಿದ ಮದ್ದಿನಲ್ಲಿ ಸಾಕಷ್ಟು ತೊಂದರೆಯನ್ನು ಬಡಾವಣೆ ಜನರು ಅನುಭವಿಸುತ್ತಾ ಬಂದಿರುತ್ತಾರೆ, ಎಲ್ಲಿ ಬೇಕಾದರೂ ಕುಡಿದ ಅಮಲಲ್ಲಿ ಮೂತ್ರ ವಿಸರ್ಜನೆ ಮಾಡುವುದು, ಕೆಟ್ಟ ಕೆಟ್ಟ ಪದಗಳಿಂದ ಮಾತನಾಡುವುದು ನಮ್ಮ ಬಡಾವಣೆಯ ಹೆಣ್ಣು ಮಕ್ಕಳಿಗೆ ಹಾಗೂ ಚಿಕ್ಕ ಮಕ್ಕಳಿಗೆ ತುಂಬಾ ಮುಜುಗರ ಉಂಟು ಮಾಡುತ್ತಿದೆ. ಆದ ಕಾರಣ ಈ ಮಾಯ ವೈನ್ ಶಾಪ್ವ ವನ್ನು ಉದಯನಗರ ಬಡಾವಣೆಯಿಂದ ಸ್ಥಳಾಂತರ ಮಾಡಬೇಕೆಂದು ಮನವಿ ಮೂಲಕ ಅಗ್ರಹಿಸಿದ್ದಾರೆ.

ಮನಿವನ್ನು ಸ್ವೀಕರಿಸಿದ ಮಹಾಪೌರರು ನಿಮ್ಮ ಈ ನಾಯುತವಾದ ಬೇಡಿಕೆಯನ್ನು ಪ್ರಮಾಣಿಕವಾಗಿ ಮಾಡುವೆ, ನಿಮ್ಮ ಆಶೀರ್ವಾದದಿಂದ ನಾನು ಮಹಾಪೂರರಾಗಿರುವೆ, ಉದಯನಗರ ಬಡಾವಣೆಯ ಅಭಿವೃದ್ಧಿಯೇ ನನ್ನ ಪ್ರಥಮ ಕರ್ತವ್ಯವಾಗಿರುತದೆ, ಹಾಗೂ ಶತಾಯಗತಾಯ ಈ ಬಡಾವಣೆ ಮಾದರಿ ಬಡಾವಣೆಯಾಗಿ ಮಾಡುವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಡಾವಣೆಯ ಹಿರಿಯರಾದ ಟಿ. ದೇವೇಂದ್ರಪ್ಪ, ಮನೋಹರ್ ಪ್ಯಾಟಿ, ಮಹಾಂತೇಶ್ ಸ್ವಾಮಿ, ಅಕ್ಕ ಮಹಾದೇವಿ ಕಿರಣಗಿ, ಉಲ್ಲಾಸ್ ಕುಲಕರ್ಣಿ, ಈಶಯ್ಯ ಸ್ವಾಮಿ, ಗುರುರಾಜ ಕುಲಕರ್ಣಿ ಹಾಗೂ ಇನ್ನಿತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here