ಕರ್ಜಗಿ ನೇತೃತ್ವದಲ್ಲಿ ಶೈಕ್ಷಣಿಕ ಸುಧಾರಣಾ ಸಮಿತಿ ರಚನೆ ಕಾಂಗ್ರೆಸ್ ಸರ್ಕಾರದ ದಿವಾಳಿಗೆ ಸಾಕ್ಷಿ: ಅರ್ಜುನ್ ಭದ್ರೆ ಕಿಡಿ

0
41

ಕಲಬುರಗಿ: ಕಲ್ಯಾಣ ಕರ್ನಾಟಕದ ಭಾಗದಲ್ಲಿ ಸತತವಾಗಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ಹಿಂದುಳಿಯುತ್ತಿದ್ದು, ಈ ಭಾಗದಲ್ಲಿ ಶೈಕ್ಷಣಿಕ ಸುಧಾರಣೆಗಾಗಿ ಸಮಿತಿ ರಚನೆ ಮಾಡಿ ಆ ಸಮಿತಿಗೆ ಗುರುರಾಜ್ ಕರ್ಜಗಿಯವರನ್ನು ಅಧ್ಯಕ್ಷ ಮಾಡಿದ್ದು ಕಾಂಗ್ರೆಸ್ ಸರ್ಕಾರದ ಸೈದ್ಧಾಂತಿಕ ದಿವಾಳಿತನವನ್ನು ಎತ್ತಿ ತೋರಿಸುತ್ತದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಅರ್ಜುನ್ ಭದ್ರೆ ಅವರು ಆಕ್ರೋಶ ಹೊರಹಾಕಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರುರಾಜ್ ಕರ್ಜಗಿಯವರು ಕಾಲೇಜುಗಳಲ್ಲಿ ಆಯೋಜಿಸುವ ಸೆಮಿನಾರ್‍ಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಿದ್ಧಾಂತಗಳನ್ನು ವಿದ್ಯಾರ್ಥಿಗಳ ತಲೆಗೆ ತುಂಬುವವರನ್ನು ಶಿಕ್ಷಣ ತಜ್ಞ ಎನ್ನುಲು ಸಾಧ್ಯವೇ?, ಹಿಂದುತ್ವ ಮತ್ತು ಕೋಮು ದ್ವೇಷವನ್ನು ಬಿತ್ತರಿಸುವ ವಿಕ್ರಮ್ ಸಂವಾದ ಸಾಮಾಜಿಕ ಜಾಲತಾಣಗಳೊಂದಿಗೆ ಕರ್ಜಗಿಯವರು ಗುರುತಿಸಿಕೊಂಡವರು. ಆಗಾಗ ಸುದ್ದಿವಾಹಿನಿಗಳಲ್ಲಿ ಕುಳಿತು ಸನಾತನ ಧರ್ಮ ಹಿಂದುತ್ವದ ಪ್ರವಚನಗಳನ್ನು ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.

Contact Your\'s Advertisement; 9902492681

ಮಕ್ಕಳ ಶೈಕ್ಷಣಿಕ ಸುಧಾರಣೆ ಕೆಲಸ ಮಾಡುವ ನೆಪದಲ್ಲಿ ಮಕ್ಕಳ ಓದು, ಅಧ್ಯಯನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮನುವಾದಿ, ಕೋಮುವಾದಿ ಸಿದ್ದಾಂತಗಳನ್ನು ತುಂಬಲು ಕಾಂಗ್ರೆಸ್ ಸರ್ಕಾರವೇ ಅವಕಾಶ ಮಾಡಿಕೊಟ್ಟಿದೆ ಎಂದು ಹರಿಹಾಯ್ದ ಅವರು, ಗುರುರಾಜ್ ಕರ್ಜಗಿಯವರನ್ನು ಶಿಕ್ಷಣ ತಜ್ಞರೆಂದು ಒಪ್ಪಲು ಸಾಧ್ಯವಿಲ್ಲ. ಮೌಡ್ಯ ಪ್ರತಿಪಾದಕ ಮತ್ತು ಅಪ್ಪಟ ಸನಾತನಿ. ಅಂತಹ ವ್ಯಕ್ತಿಯನ್ನು ಮಕ್ಕಳ ಬೌದ್ದಿಕತೆ ಮತ್ತು ಭವಿಷ್ಯ ರೂಪಿಸುವ ಶೈಕ್ಷಣಿಕ ಸುಧಾರಣೆ ಸಮಿತಿಗೆ ಮುಖ್ಯಸ್ಥರನ್ನಾಗಿ ನೇಮಿಸಿರುವುದು ಸರ್ಕಾರದ ಆತ್ಮಹತ್ಯಾಕಾರಿ ಕೆಲಸ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಸಂವಿಧಾನ ಪ್ರಣೀತ ಸಂಸ್ಥೆಗಳು ವಿಶೇಷವಾಗಿ ಸರ್ಕಾರಗಳು ಕಾನೂನು ಬದ್ಧವಾಗಿ ನಡೆದುಕೊಳ್ಳುವುದು ಅದರ ಕರ್ತವ್ಯ. ಯಾವುದೇ ಅಭಿವೃದ್ಧಿ ಕೆಲಸದಲ್ಲೂ ಅಭಿವೃದ್ಧಿ ಮಾಡುವ ಸಮಿತಿಗಳಲ್ಲೂ ಸಮಾಜದ ಪ್ರತಿಯೊಬ್ಬರ ಪಾಲುದಾರಿಕೆ ಬಹಳ ಮುಖ್ಯ. ಅದರಲ್ಲೂ ಶೈಕ್ಷಣಿಕ ಕ್ಷೇತ್ರದ ಪ್ರತಿಯೊಂದು ಹಂತದಲ್ಲಿ ಸಾಂಸ್ಕøತಿಕ ಹಂತದಲ್ಲಿಯೇ ಎಲ್ಲರನ್ನೂ ಒಳಗೊಳ್ಳುವುದು ಅಗತ್ಯವಾಗಿದೆ. ಇಂತಹ ಅಗತ್ಯವಾದ ಸಂದರ್ಭದಲ್ಲಿ ತಳ ಸಮುದಾಯವನ್ನು ಕಂಡುಕಾಣದಂತೆ ನಿರ್ಲಕ್ಷ್ಯ ಮಾಡುತ್ತ ಬರಲಾಗುತ್ತಿದೆ ಎಂದು ಅವರು ಟೀಕಿಸಿದರು.

ಸರ್ಕಾರದಿಂದ ನೇಮಕಗೊಂಡ ವಿವಿಧ ಅಕ್ಯಾಡೆಮಿಗಳ ಸದಸ್ಯರುಗಳ ಪಟ್ಟಿಯಲ್ಲಿ ಕಲ್ಯಾಣ ಕರ್ನಾಟಕದವರು ಬಹಳ ಕಡಿಮೆ ಎಂಬುದು ಬೇರೆ ಹೇಳಬೇಕಾಗಿಲ್ಲ. ರಂಗಾಯಣದ ನೇಮಕದಲ್ಲಿ ದಲಿತರಿಗೆ ಅನ್ಯಾಯವಾಗಿದೆ. ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ ಸಾಧಕರ ಆಯ್ಕೆಗೆ ಸರ್ಕಾರ ತಜ್ಞರ ಸಮಿತಿಯನ್ನು ರಚನೆ ಮಾಡಿ 48 ಸದಸ್ಯರನ್ನು ಆಯ್ಕೆ ಮಾಡಿದೆ. ಅಲ್ಲಿಯೂ ಕೂಡ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಮೂಲ ಅಸ್ಪøಶ್ಯರನ್ನು ಬದಿಗೆ ಸರಿಸಲಾಗಿದೆ. ಇಂತಹ ವಿಷಯಗಳಲ್ಲಿ ಬಿಜೆಪಿ ಪಕ್ಷದವರು ದಲಿತ ವಿರೋಧಿ ನೀತಿಅನುಸರಿಸುವುದು ಸಹಜ. ಅವರು ದಲಿತರಿದ್ದರು, ಆರ್‍ಎಸ್‍ಎಸ್‍ಗೆ ಸನಿಹ ಇದ್ದವರಿಗೆ ಮಾತ್ರ ನೇಮಕ ಮಾಡುತ್ತಾರೆ. ಆದಾಗ್ಯೂ, ಕಾಂಗ್ರೆಸ್ ಪಕ್ಷದವರು ದಲಿತರನ್ನು ಕಡೆಗಣಿಸುತ್ತಿರುವುದು ಕಂಡು ಬರುತ್ತಿದೆ ಎಂದು ಅವರು ಅಸಮಾಧಾನವನ್ನು ವ್ಯಕ್ತಪಡಿಸಿದರು.

ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಸಉಧಾರಣೆಗೆ ಸಮಿತಿಯಲ್ಲಿ ಯಾವೊಬ್ಬ ದಲಿತ ಶಿಕ್ಷಣ ತಜ್ಞರನ್ನು ನೇಮಕ ಮಾಡದೇ ಇರುವುದು ಸಾಮಾಜಿಕ ನ್ಯಾಯದ ಉಲ್ಲಂಘನೆಯಾಗಿದೆ. ಗುರುರಾಜ್ ಕರ್ಜಗಿಯವರು ಮೂಲತ: ಸಂಘ ಪರಿವಾರದ ನಂಟಿನವರು. ಶೈಕ್ಷಣಿಕವಾಗಿ, ಸಾಮಾಜಿಕವಾಗಿ ದೇಶ ಬೆಳೆಯಬೇಕಾದರೆ ಭಾರತದ ಕಣ್ಣುಗಳಾದ ಅಂಬೇಡ್ಕರ್- ಗಾಂಧಿ ಇಬ್ಬರೂ ಬೇಕು. ಇಬ್ಬರ ದೃಷ್ಟಿಕೋನ ಇಟ್ಟುಕೊಂಡು ನಡೆದರೆ ಎಲ್ಲ ಯೋಜನೆಗಳು ಯಶಸ್ವಿಯಾಗುತ್ತವೆ. ಈಗ ಹಾಗೆ ಆಗುತ್ತಿಲ್ಲ ಎಂದು ಅವರು ಹೇಳಿದರು.

ಅಂಬೇಡ್ಕರ್ ಅವರ ದೃಷ್ಟಿಕೋನ ಇಲ್ಲ. ಶಿಕ್ಷಣ ತಜ್ಞರನ್ನು ಸಮಿತಿಯಲ್ಲಿ ಸೇರ್ಪಡೆ ಮಾಡುವುದು ಅಗತ್ಯವಾಗಬೇಕು. ಸರ್ಕಾರ ಅಥವಾ ಸಂಸ್ಥೆಗಳಲ್ಲಿ ಅಧ್ಯಕ್ಷ ಹಾಘೂ ಸದಸ್ಯರನ್ನು ನೇಮಕ ಮಾಡುವಾಗ ಸಾಮಾಜಿಕ ನ್ಯಾಯವನ್ನು ಕಡ್ಡಾಯವಾಗಿ ಪಾಲಿಸುವುದು ಅಗತ್ಯವಾಗಿದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ್ ಖನ್ನಾ, ಸೂರ್ಯಕಾಂತ್ ಆಜಾದಪೂರ್, ಕಪೀಲ್ ಸಿಂಗೆ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here