ಮಾಶಾಸನ ಹೆಚ್ಚಳ, ವಿಕೋಪ ಪರಿಹಾರ ನಿಧಿಗೆ ಆಗ್ರಹಿಸಿ ರೈತರ ಪ್ರತಿಭಟನೆ

0
37

ಕಲಬುರಗಿ: ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಅತಿವೃಷ್ಟಿ ಹಾಗೂ ಅನಾವೃಷ್ಟಿ ಪರಿಹಾರವನ್ನು ಸಮರ್ಪಕವಾಗಿ ತಕ್ಷಣ ಬಿಡುಗಡೆ ಮಾಡುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಗುರುವಾರ ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರು ಪ್ರತಿಭಟನಾ ಪ್ರದರ್ಶನ ಹಮ್ಮಿಕೊಂಡಿದ್ದರು.

ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಹಾಗೂ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಂಡುರಂಗ್ ಮಾವಿನಕರ್, ಭೀಮಾಶಂಕರ್ ಮಾಡ್ಯಾಳ್, ಅಶೋಕ್ ಮ್ಯಾಗೇರಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೇಘರಾಜ್ ಕಠಾರೆ ಮುಂತಾದವರು ಪಾಲ್ಗೊಂಡಿದ್ದರು. ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿಯವರಿಗೆ ಮನವಿ ಪತ್ರ ಸಲ್ಲಿಸಿ, ಉದ್ಯೋಗಗಳನ್ನು ಸೃಷ್ಟಿಸಲು ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸುವಂತೆ, ಅಲ್ಲಿಯವರೆಗೆ ಕೇಂದ್ರ ಸರ್ಕಾರವು ಯುವ ಜನರಿಗೆ ನಿರುದ್ಯೋಗ ಭತ್ಯೆ ಕೊಡುವಂತೆ ಒತ್ತಾಯಿಸಿದರು.

Contact Your\'s Advertisement; 9902492681

ಕನಿಷ್ಠ ವೇತವನ್ನು ೧೮,೦೦೦ರೂ.ಗಳಿಗೆ ಹೆಚ್ಚಿಸುವಂತೆ, ದೊಡ್ಡ ಪ್ರಮಾಣದಲ್ಲಿ ಉದ್ಯೋಗದಿಂದ ಹೊರದೂಡಲ್ಪಟ್ಟ ನಿರುದ್ಯೋಗಿ ಕಾರ್ಮಿಕರಿಗೆ ಮಾಸಿಕ ವೇತನ ಕೊಡುವಂತೆ, ಸಾರ್ವಜನಿಕ ವಲಯದಲ್ಲಿ ಖಾಸಗೀಕರಣ ನಿಲ್ಲಿಸಿ, ರಕ್ಷಣಾ ಹಾಗೂ ಕಲ್ಲಿದ್ದಲು ವಲಯದಲ್ಲಿ ಶೇಕಡಾ ೧೦೦ರಷ್ಟು ವಿದೇಶಿ ನೇರ ಬಂಡವಾಳ ಹಿಂಪಡೆಯುವಂತೆ, ಬಿಎಸ್‌ಎನ್‌ಎಲ್ ಮತ್ತು ರೈಲ್ವೆ ಏರ್ ಇಂಡಿಯಾ ರಕ್ಷಣಾ ಸಾಮಗ್ರಿ ಉತ್ಪಾದನಾ ಉತ್ಪಾದನಾ ಕಾರ್ಖಾನೆಗಳ ಪ್ರಮಾಣ ಖಾಸಗೀಕರಣವನ್ನು ತಡೆಯುವಂತೆ ಅವರು ಆಗ್ರಹಿಸಿದರು.

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗವನ್ನು ಕನಿಷ್ಠ ವೇತನದೊಂದಿಗೆ ಎರಡುನೂರು ದಿನಗಳವರೆಗೆ ವಿಸ್ತರಿಸುವಂತೆ, ಹಳೆಯ ಬಾಕಿ ವೇತನವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಅವರು ಒತ್ತಾಯಿಸಿದರು.

ರೈತರು ಕೃಷಿ ಬಿಕ್ಕಟ್ಟಿನಿಂದ ಮತ್ತು ಸಾಲ ಬಾಧಿತ ಆತ್ಮಹತ್ಯೆಗಳಿಂದ ಪಾರಾಗಲು ತಕ್ಷಣ ಒಂದು ಬಾರಿ ಎಲ್ಲ ಸಾಲ ಮನ್ನಾ ಮಾಡುವಂತೆ, ಕೃಷಿ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಬೆಂಬಲ ಬೆಲೆ ನಿಗದಿಪಡಿಸಿ ಖಾತ್ರಿ ದೊರೆಯುವಂತೆ ಕ್ರಮ ವಹಿಸುವಂತೆ, ವೃದ್ದಾಪ್ಯ ವೇತನ ಹಾಗೂ ವಿಧವಾ ವೇತನ, ಅಂಗವಿಕಲ ಚೇತನ ಕನಿಷ್ಠ ೩೦೦೦ರೂ.ಗಳಿಗೆ ಹೆಚ್ಚಿಸುವಂತೆ ಅವರು ಆಗ್ರಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here