ಕಲಬುರಗಿ; ಕೇಂದ್ರ ಕಾರಾಗೃಹದಲ್ಲಿ 69 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮೊದಲಿಗೆ ಈ ಸಂಸ್ಥೆಯ ಮುಖ್ಯಸ್ಥರಾದ ಡಾ.ಅನಿತಾ ಆರ್. ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ರಾಷ್ಟ್ರ ದ್ವಜವನ್ನು ಹಾರಿಸಿ ಎಲ್ಲರಿಗೂ ಕನ್ನಡದ ಕಂಪನ್ನು ಮನೆ ಮನೆಗಳಲ್ಲಿ ಪಸರಿಸಿ ಬೆಳೆಯುವ ಮಕ್ಕಳಲ್ಲಿ ಮಾತೃ ನುಡಿಯ ಹಿರಿಮೆ ಹಾಗೂ ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎನ್ನುವುದರ ಮೂಲಕ ಕನ್ನಡದ ಕಂಪನ್ನು ಎಲ್ಲಾ ಕಡೆ ಹರಡಿಸಬೇಕೆಂದು ಕರೆ ನೀಡುವುದರ ಜೊತೆಗೆ ಕರ್ನಾಟಕವೆಂದು 50 ವರ್ಷ ನಾಮಕರಣಗೊಂಡ ಪೂರ್ಣಗೊಂಡ ಪ್ರಯುಕ್ತ ಕಾರಾಗೃಹದ ಎಲ್ಲಾ ಅಧಿಕಾರಿ/ಸಿಬ್ಬಂದಿಗಳಿಗೆ ಕನ್ನಡ ರಾಜ್ಯೋತ್ಸವ ಶುಭಾಶಯಗಳನ್ನು ತಿಳಿಸಿದರು.
ಕರ್ನಾಟವು 50 ವರ್ಷ ಪೂರ್ಣಗೊಂಡ ಪ್ರಯುಕ್ತ ವಿಶೇಷ ರೀತಿಯಲ್ಲಿ ಅರ್ಥಪೂರ್ಣವಾಗಿ ರಾಜ್ಯೋತ್ಸವವನ್ನು ಆಚರಿಸುವ ನಿಟ್ಟಿನಲ್ಲಿ ಕಾರಾಗೃಹದ ಅಧಿಕಾರಿ/ಸಿಬ್ಬಂದಿಗಳಿಂದ ಹಾಗೂ ಕೆ.ಎಸ್.ಐ.ಎಸ್.ಎಫ್. ಸಿಬ್ಬಂದಿಗಳಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.
ಶಿಬಿರದಲ್ಲಿ ಅಧಿಕಾರಿ/ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ನೀಡಿದರು. ಜಿಮ್ಸ್ ಆಸ್ಪತ್ರೆ (ರಕ್ತಧಾನ ನಿಧಿ ಸಂಸ್ಥೆ), ಕಲಬುರಗಿರವರ ವತಿಯಿಂದ ಆಗಮಿಸಿದ ಡಾ. ಮಮತಾ ವಿ. ಪಾಟೀಲ ರಕ್ತದಾನ ನೀಡಿದ ಅಧಿಕಾರಿ/ಸಿಬ್ಬಂದಿಗಳಿಗೆ ಅಭಿನಂದನೆಗಳನ್ನು ನೀಡಿದರು.
ಈ ಸಂಸ್ಥೆಯ ಸಹಾಯಕ ಆಡಳಿತಾಧಿಕಾರಿಯಾದ ಭೀಮಾಶಂಕರ್ ಡಾಂಗೆ, ಇವರು ಪ್ರಾರ್ಥನಾ ಗೀತೆಯೊಂದಿಗೆ ಕನ್ನಡದ ಕಂಪನ್ನು ತಮ್ಮ ಮಧುರವಾದ ಕಂಠದಿಂದ ಜೇನಿನ ಹನಿಯಷ್ಟು ಸಿಹಿ ಕೋಗಿಲೆಯ ದನಿಯಷ್ಟು ಸವಿಯಾದ ನಮ್ಮ ಕನ್ನಡ ನುಡಿ ಇದು ಎಲ್ಲರ ನುಡಿಯಾಗಿದೆ. ನುಡಿದರೆ ಮುತ್ತಿನ ಹಾರದಂತೆ ಇರುಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು ಎಂದು ತಮ್ಮ ಮಾತಿನಲ್ಲಿ ಕನ್ನಡದ ಸವಿಯನ್ನು ಕೊಂಡಾಡಿದರು.
ಈ ಸಂಸ್ಥೆಯ ಮುಖ್ಯಸ್ಥರಾದ ಡಾ. ಅನಿತಾ ಆರ್., ಮುಖ್ಯ ಅಧೀಕ್ಷಕರು, ಕೇಂದ್ರ ಕಾರಾಗೃಹ ಕಲಬುರಗಿ ಇವರು ರಕ್ತದಾನ ಮಹಾದಾನ ಇದನ್ನು ಪ್ರತಿಯೊಬ್ಬರು ನೀಡುವಂತೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅರಿವನ್ನು ನೀಡುವಂತೆ ಕರೆ ನೀಡುವುದರೊಂದಿಗೆ ರಕ್ತದಾನ ನೀಡುವವರಿಗೆ ಪ್ರೋತ್ಸಹವನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಸಹಾಯಕ ಅಧೀಕ್ಷಕರಾದ ಚನ್ನಪ್ಪ, ಕೇಂದ್ರ ಕಾರಾಗೃಹ, ಡಾ. ಆರ್ಚನಾ, ಡಾ. ಆನಂದ ಅಡಕಿ, ಕಛೇರಿ ಅಧೀಕ್ಷಕರಾದ ಗುರುಶೇಶ್ವರ ಶಾಸ್ತ್ರಿ, ಕೇಂದ್ರ ಕಾರಾಗೃಹ, ಸಂಸ್ಥೆಯ ಜೈಲರ್‍ಗಳಾದ ಸುನಂದ ವಿ., ಸಾಗರ ಪಾಟೀಲ್, ಎಲ್ಲಾ ಸಹಾಯಕ ಜೈಲರ್ ವೃಂದದವರು ಹಾಗೂ ಕಾರಾಗೃಹದ ಲಿಪಿಕ/ಕಾರ್ಯನಿರ್ವಾಹಕ ಅಧಿಕಾರಿ/ಸಿಬ್ಬಂದಿಗಳು ಮತ್ತು ಜಿಮ್ಸ್ ಆಸ್ಪತ್ರೆಯ ರಕ್ತದಾನ ನಿಧಿ ಸಿಬ್ಬಂದಿ ವರ್ಗದವರು ಭಾಗವಹಿಸಿದರು.
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಗೀತೆ ಮತ್ತು ನಾಡ ಗೀತೆಯನ್ನು ಕಾರಾಗೃಹದ ಎಲ್ಲಾ ಅಧಿಕಾರಿ/ಸಿಬ್ಬಂದಿಗಳೊಂದಿಗೆ ಹಾಡಲಾಯಿತು.
ಕನ್ನಡ ಮಾತೆಯಾದ ಭುವನೇಶ್ವರಿಗೆ ಜೈಕಾರ ಹಾಕುವುದರೊಂದಿಗೆ ಅತೀ ವಿಜೃಂಭಣೆಯೊಂದಿಗೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಈ ಸಂಸ್ಥೆಯ ಶಿಕ್ಷಕರಾದ ಶ್ರೀ ನಾಗಾರಾಜ ಮುಲಗೆ ನೆರವೇರಿಸಿದರು.