ಕಲಬುರಗಿ: ದಕ್ಷಿಣ ಮತಕ್ಷೇತ್ರದ ತಾಜ್ ಸುಲ್ತಾನಪುರ ಗ್ರಾಮದಲ್ಲಿ ಸಮಾಜ ಕಲ್ಯಾಣದ ಅನುದಾನದ ಅಡಿಯಲ್ಲಿ ಸುಮಾರು ಅಂದಾಜು 12 ಲಕ್ಷ ರೂ.ವೆಚ್ಚದ್ ಅಂಬೇಡ್ಕರ್ ಭವನ ಅಭಿವೃದ್ಧಿ ಕಾಮಗಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಅಡಿಗಲ್ಲು ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ಕಣ್ಣಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸಂತೋಷ್ ಪಾಟೀಲ್ ದಣ್ಣೂರ, ಸಂಜುಕುಮಾರ ಜವಳಕರ್, ಸುನೀಲಕುಮಾರ ಮದನಕರ್, ವಜ್ರಮನಿ, ಪ್ರಥಮ ದರ್ಜೆ ಗುತಿಗೇದಾರ ಜಿಲಾನಿ ಮಕಾಸಿ ಸೇರಿದಂತೆ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮದ ಮುಖಂಡರು, ಯುವ ಮುಖಂಡರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.