ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಗರಣ ಮೋಸದ ಮರು ಮದುವೆ ಪ್ರೊತ್ಸಾಹ ಧನದ ಲೂಟಿ ಆಗುತ್ತಿರುವುದನ್ನು ಪ್ರಜಾವಾಣಿ ಪತ್ರಿಕೆ ಬೆಳಕು ಚಲ್ಲಿದೆ ಅಕ್ರಮ ಜಾಲ ಪತ್ತೆಯು ಮೈಸೂರ ಜಿಲ್ಲೇಯಲೆ ಅತಿ ಹೆಚ್ಚು ವರದಿಯಾಗಿದೆ ಎಂದು ಪ್ರಜಾವಾಣಿ ಪತ್ರಿಕೆ ಪ್ರಕಟಿಸಿದೆ.
ಪರಿಶಿಷ್ಟ ಜಾತಿ ವಿಧವೆಯರು ಮರುಮದುವೆಯಾದಲ್ಲಿ ಅವರಿಗೆ ಸರ್ಕಾರದಿಂದ ಸಿಗಬೇಕಾದ, 3 ಲಕ್ಷ ಪ್ರೋತ್ಸಾಹ ಧನವನ್ನು ಅಕ್ರಮ ಜಾಲವು ಕಬಳಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಯೋಜನೆಯನ್ನು ದುರ್ಬಳಕ್ಕೆ ಮಾಡುತ್ತಿರುವವರನ್ನು ಪತ್ತೆ ಮಾಡಿ ಸೂಕ್ತ ತನಿಖೆ ಮಾಡಿ ಕಾನೂನು ಕ್ರಮ ಜರಗಿಸಬೇಕು ಯೋಜನೆಯನ್ನು ಸಂಬಂಧಪಟ್ಟವರಿಗೆ ಮಾತ್ರ ತಲುಪಿಸಬೇಕು. ಆಕ್ರಮದ ಬಗ್ಗೆ ಪತ್ತೆ ಮಾಡಿ ಇರುವ ಲೋಪದೋಷಗಳು ಸರಿಪಡಿಸಬೇಕು.
ಸಂಭಂದ ಪಟ ಅಧಿಕಾರಿಗಳು ನಿಯಮಿತವಾಗಿ ಇಲಾಖೆಗೆ ಭೇಟಿ ನೀಡಿ ದಾಖಲೆ ಪರಿಶೀಲಿಸಿ ನಕಲಿ ಅರ್ಜಿಗಳಿಗೆ ಸ್ವೀಕರಿಸಿದವರು ಮತ್ತು ನಕಲಿ ಅರ್ಜಿಯಿಂದ ಯೋಜನೆ ಪಡೆದುಕೊಂಡವರ ವಿರುದ್ಧವೂ ಕಠಿಣ ಕಾನೂನು ಕ್ರಮ ಜರುಗಿಸಬೇಕು. ನಕಲಿ ವಿವಾಹ ತಡೆಗಟ್ಟಲು ಸರ್ಕಾರವು ಎಚೇತ್ತೀಕೋಳಬೇಕಾಗಿದೆ. ಈ ಯೋಜನೆಯನ್ನು ಅಧಿಕಾರಿಗಳು ದುರುಪಯೋಗ ಮಾಡಿ ದಲಿತರಿಗೆ ವಂಚನೆ ಮಾಡುತ್ತಿದಾರೆ. ಭ್ರಷ್ಟ ಅಧಿಕಾರಿಗಳನ್ನು ಕೋಡಲೆ ಅಮಾನತು ಮಾಡಬೇಕೆಂದು ಬಿವಿಎಸ್ ತಾಲೂಕು ಸಮಿತಿಯಿಂದ ವಿನಂತಿಸಿದೆ.