ಸುರಪುರ: ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ(ಆರ್.ಸಿ.ಇ.ಪಿ) ಮುಕ್ತ ವ್ಯಾಪಾರ ಒಪ್ಪಂದ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ನಗರದ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಅನೇಕ ರೈತ ಹೋರಾಟಗಾರರು ಮಾತನಾಡಿ,ಕೇಂದ್ರ ಸರಕಾರ ದೊಡ್ಡ ಕೈಗಾರಿಕಾ ಆರ್ಥಿಕತೆ ಹೊಂದಿರುವ ಚೀನಾ ಜಪಾನ್ ಕೋರಿಯಾ ಆಸ್ಟ್ರೇಲಿಯಾದಂತ ಹದಿನೈದು ದೇಶಗಳೊಂದಿಗೆ ಆರ್.ಸಿ.ಇ.ಪಿ ಒಪ್ಪಂದದ ಮಾತುಕತೆ ನಡೆಸಿದೆ,ಇದರಿಂದ ಭಾರತದ ಕೃಷಿ ವಲಯದ ಮೇಲೆ ದೊಡ್ಡ ಹೊಡೆತ ಬೀಳಲಿದೆ.ಆದ್ದರಿಂದ ಈ ಒಪ್ಪಂದದಲ್ಲಿ ಕರಷಿಯನ್ನು ಹೊರಗಿಡುವಂತೆ ಆಗ್ರಹಿಸಿದರು.
ಅಲ್ಲದೆ ಮೊನ್ನೆ ಮುಖ್ಯಮಂತ್ರಿಗಳು ನೆರೆ ವೀಕ್ಷಣೆಗೆ ಬಂದಾಗ ಬೆಳೆ ನಾಶವಾಗಿ ಭೂ ಸಾಗುವಳಿ ಮಾಡಿಕೊಳ್ಳಲು ಪ್ರತಿ ಎಕರೆಗೆ ಐವತ್ತು ಸಾವಿರ ಪರಿಹಾರ ನೀಡುವಂತೆ ಮನಿವ ಮಾಡಲಾಗಿದೆ.ಕೂಡಲೆ ಪರಿಹಾರ ಧನ ಬಿಡುಗಡೆಗೊಳಿಸಬೇಕು. ಬೇಸಿಗೆ ಬೆಳೆಗೆ ನೀರು ಬಿಡುವ ಕುರಿತು ಶೀಘ್ರವೆ ಘೋಷಣೆ ಮಾಡಬೇಕು ಹಾಗು ಅನೇಕ ಭಾಗದಲ್ಲಿನ ಕಾಲುವೆಗಳು ಹಾಳಾಗಿದ್ದು ದುರಸ್ಥಿಗೊಳಿಸಬೇಕು. ಈಗಾಗಲೇ ಅನೇಕ ರೈತರ ಸಾಲ ಮನ್ನಾ ಆಗಿದ್ದರು ವಾಣಿಜ್ಯ ಬ್ಯಾಂಕುಗಳವರು ರೈತರಿಗೆ ಸರಿಯಾಗಿ ಮಾಹಿತಿ ನೀಡದೆ ವಂಚಿಸುತ್ತಿದ್ದಾರೆ,ಎಲ್ಲಾ ಬ್ಯಾಂಕುಗಳಿಗೆ ರೈತರಿಗೆ ಮಾಹಿತಿ ನೀಡಲು ಸೂಚಿಸಬೇಕು.ಹಳ್ಳಿಗಳಲ್ಲಿ ಸರಿಯಾದ ವಿದ್ಯೂತ್ ಪುರೈಕೆ ಇಲ್ಲದೆ ರೈತರು ತೊಂದರೆ ಪಡುವಂತಾಗಿದೆ.ಆದ್ದರಿಂದ ಕನಿಷ್ಟ ೧೨ ತಾಸು ವಿದ್ಯೂತ್ ನೀಡಬೇಕು.ಮಳೆಗಾಲದಿಂದ ಗ್ರಾಮೀಣ ಪ್ರದೇಶದಲ್ಲಿನ ರಸ್ತೆಗಳು ಹಾಳಾಗಿದ್ದು ದುರಸ್ಥಿಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ನಂತರ ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನರ ಮೂಲಕ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಬಾವಿ,ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಮಹಾದೇವಮ್ಮ ಬೇವಿನಾಳಮಠ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವುಶರಣ ಸಾಹುಕಾರ,ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ದೇವಿಂದ್ರಪ್ಪ ಪತ್ತಾರ,ತಾಲ್ಲೂಕು ಅಧ್ಯಕ್ಷ ಹಣಮಂತ್ರಾಯ ಮಡಿವಾಳ,ಚಂದ್ರಕಲಾ ಭಾಗೂರ,ತಿಪ್ಪಣ್ಣ ಜಂಪಾಅ,ಪರಮಣ್ಣ ಮೇಟಿ,ಶಿವಲಿಂಗಯ್ಯ ಬೇವಿನಾಳಮಠ,ಸಾಹೇಬಗೌಡ ಮದಲಿಂಗನಾಳ,ಚಾಂದಪಾಶ ಮಾಲಗತ್ತಿ,ಪಂಚಾಕ್ಷರಿ ಹಿರೇಮಠ,ವೆಂಕಟೇಶ ಬಳಿಚಕ್ರ,ರುದ್ರಯ್ಯ ಮೇಟಿ,ಬಸವರಾಜ ಮಾಲಗತ್ತಿ,ಬಸವರಾಜ ಬೂದಿಹಾಳಗೋವಿಂದ ಪತ್ತಾರ,ಶರಣಮ್ಮ ಬೂದಿಹಾಳ,ವೆಂಕಟೇಶ ಕುಪಗಲ್,ವೆಂಟೇಶ ಹವಲ್ದಾರ ಸೇರಿದಂತೆ ಅನೇಕರಿದ್ದರು.