ಜೇವರ್ಗಿಯ 6 ಆರೋಗ್ಯ ಕೇಂದ್ರಗಳಿಗೆ ಕಾಯಕಲ್ಪ ಪ್ರಶಸ್ತಿ ಪ್ರದಾನ

0
335

ಜೇವರ್ಗಿ: ಸ್ವಚ್ಛತೆ ಮತ್ತು ನೈರ್ಮಲ್ಯದಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದ ಗವ್ಹಾರ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆತಾಲೂಕಿನ ಆರುಆರೋಗ್ಯ ಕೇಂದ್ರಗಳಿಗೆ ರಾಜ್ಯ ಸರಕಾರ ಕಾಯಕಲ್ಪ ಪ್ರಶಸ್ತಿ ನೀಡಿ ಗೌರವಿಸಿತು.

ಬೆಂಗಳೂರಿನ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಆವರಣದಲ್ಲಿ ಬುಧವಾರ ನಡೆದ ೨೦೧೮-೧೯ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮಲು ಅವರು ಜೇವರ್ಗಿ ತಾಲೂಕ ವೈದ್ಯಾಧಿಕಾರಿ ಡಾ.ಸಿದ್ದು ಪಾಟೀಲ ಅವರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.

Contact Your\'s Advertisement; 9902492681

ಜನವರಿ ೨೦೧೯ರಲ್ಲಿ ದೆಹಲಿಯಿಂದ ಆಗಮಿಸಿದ ತಂಡ ಕಲಬುರಗಿ ಜಿಲ್ಲೆಯ ೯೮ ಸರಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳು, ಸ್ವಚ್ಛತೆ, ನೈರ್ಮಲ್ಯ, ತ್ಯಾಜ್ಯ ವಿಲೇವಾರಿ, ತುರ್ತು ಸಂದರ್ಭಗಳ ನಿಯಂತ್ರಣ, ಜನರಿಗೆ ಸೇವೆ ಸೇರಿದಂತೆ ಈ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ರೋಗಿಗಳಿಂದಲೂ ಮಾಹಿತಿ ಸಂಗ್ರಹಿಸಲಾಗಿತ್ತು. ಅದರಲ್ಲಿ ಜೇವರ್ಗಿ ತಾಲೂಕಿನ ಆರು ಸರಕಾರಿ ಆಸ್ಪತ್ರೆಗಳು ಆಯ್ಕೆಯಾಗಿರುವುದು ರಾಜ್ಯದಲ್ಲಿಯೇ ಇದೇ ಮೊದಲು ಎನಿಸಿದೆ.

ಅದರಲ್ಲಿಯೂ ತಾಲೂಕಿನ ಗಂವ್ಹಾರ ಆರೋಗ್ಯ ಕೇಂದ್ರ, ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದರೆ, ಹೈಕ ವಿಭಾಗದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಉಳಿದಂತೆ ಮಳ್ಳಿ, ಯಡ್ರಾಮಿ, ಜೇವರ್ಗಿ, ಜೇರಟಗಿ, ಇಜೇರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಹ ಕಾಯಕಲ್ಪ ಪ್ರಶಸ್ತಿಗೆ ಆಯ್ಕೆಯಾಗಿವೆ. ಪ್ರಶಸ್ತಿ ಬಂದಿರುವುದು ಇಡೀ ತಾಲೂಕಿನ ಜನತೆಗೆ ಹೆಮ್ಮೆಯ ವಿಷಯವಾಗಿದ್ದು, ನಮ್ಮ ತಾಲೂಕಿನ ಆರೋಗ್ಯ ಕೇಂದ್ರಗಳು ಗುರುತಿಸಿ, ನಮಗೆ ಪ್ರಶಸ್ತಿ ನೀಡಿರುವುದು ಇನ್ನಷ್ಟು ಜವಾಬ್ದಾರಿ ಹೆಚ್ಚಿಸಿದೆ ಎಂದು ತಾಲೂಕ ವೈದ್ಯಾಧಿಕಾರಿ ಡಾ.ಸಿದ್ದು ಪಾಟೀಲ ತಿಳಿಸಿದರು.

ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಆಯುಕ್ತರಾದ ಪಂಕಜಕುಮಾರ ಪಾಂಡೆ, ಪ್ರದಾನ ಕಾರ್ಯದರ್ಶಿ ಜಾವೇದ್ ಅಕ್ತರ್, ಮಿಷನ್ ನಿರ್ದೇಶಕ ಸಜ್ಜನಶೆಟ್ಟಿ,ತಾಲೂಕಿನ ವೈದ್ಯಾಧಿಕಾರಿಗಳಾದ ಡಾ.ಉಮೇಶ ಶರ್ಮಾ, ಡಾ.ಸಂದೀಪ, ಡಾ.ಚನ್ನವೀರ, ಡಾ.ಅಪರ್ಣಾ, ಡಾ.ರಾಜು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here