ಯುವ ಜನಾಂಗದಲ್ಲಿ ಕನಸುಗಳು  ದೊಡ್ಡದಾಗಿರಲಿ: ಡಾ. ಪಂಡಿತ ನರಸಿಂಹಲು ವಡವಾಟಿ

0
67
ಕಲಬುರಗಿ: ಮನುಷ್ಯನ ಹತ್ತಿರ ಕನಸುಗಳು ದೊಡ್ಡ ದೊಡ್ಡದಾದಾಗ ಮಾತ್ರ ಅವನಲ್ಲಿ ಛಲ ಬರಲು ಸಾಧ್ಯವಾಗುತ್ತದೆ ಎಂದು ರಾಯಚೂರಿನ ಅಂತರರಾಷ್ಟ್ರೀಯ ಕ್ಲಾರಿಯೋನೇಟ್ ವಾದಕ ಡಾ. ಪಂಡಿತ ನರಸಿಂಹಲು ವಡವಾಟಿ ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಡಾ. ಬಿ. ಆರ್ ಅಂಬೇಡ್ಕರ್ ಭವನದಲ್ಲಿ ಅಂತರ ಮಹಾವಿದ್ಯಾಲಯ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ ದೊಡ್ಡವರು ಹೇಳಿರುವ ಮಾತುಗಳು ವಿದ್ಯಾರ್ಥಿಗಳು ಚಾಚು ತಪ್ಪದೇ ಪಾಲಿಸಿಕೊಂಡು ಬಂದರೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಲ್ಲಿ ವಿನಯತನ ಒಳ್ಳೆಯತನ ಗುರು ಹಿರಿಯರನ್ನು ಗೌರವಿಸುವ ಮನೋಭಾವ ಇರಬೇಕು. ದೇಶದ ಬಗ್ಗೆ ಪ್ರೀತಿ ಅನುಕಂಪ ಇರಲಿ. ಒಬ್ಬರೊಬ್ಬರಿಗೆ ಪ್ರೀತಿಸುವ ಮನಸ್ಸು ಎಲ್ಲರಲ್ಲೂ ಬೆಳೆಯಬೇಕು ಎಂದು ಅವರು ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರಭಾರಿ ಕುಲಪತಿ ಪ್ರೊ. ಪರಿಮಳಾ ಅಂಬೇಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಗುಲ್ಬರ್ಗ ವಿಶ್ವವಿದ್ಯಾಲಯದ ವ್ಯಾಪ್ತಿಗೆ 490 ಕಾಲೇಜುಗಳು ಇವೆ. ಅದರಲ್ಲಿ ಬರೀ 25 ರಿಂದ 30 ಕಾಲೇಜುಗಳು ಭಾಗವಹಿಸುತ್ತಿರುವುದು ತುಂಬಾ ದುಃಖರ ಎನಿಸುತ್ತದೆ. ವಿದ್ಯಾರ್ಥಿಗಳಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು.
ಮುಂದಿನ ದಿನಗಳಲ್ಲಿ ಆದರೂ ಈ ಯುವಜನೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕಾಗಿದೆ ಎಂದು ಅವರು ಹೇಳಿ, ಮಾಧ್ಯಮಗಳು ವಿಶ್ವವಿದ್ಯಾಲಯದ ಬಗ್ಗೆ ಬಹಳ ಕಾಳಜಿಯಿಂದ ಶೈಕ್ಷಣಿಕವಾಗಿ ಆರ್ಥಿಕವಾಗಿ ಎಲ್ಲ ರೀತಿಯಿಂದಲೂ ಅದ್ಭುತವಾಗಿ ವರದಿ ಮಾಡುತ್ತಿವೆ ಎಂದು ಮಾಧ್ಯಮ ಬಗ್ಗೆ ಗೌರವ ಭಾವನೆ ತೋರಿಸಿದರು.
ಕುಲಸಚಿವ ಪ್ರೊ. ಸಿ ಸೋಮಶೇಖರ್, ಮೌಲ್ಯಮಾಪನ ಕುಲಸಚಿವ ಪ್ರೊ ಸಂಜೀವಕುಮಾರ ಕೆ. ಎಂ ವಿತ್ತಾಧಿಕಾರಿ ಡಾ. ಬಿ. ವಿಜಯ. ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಡಾ. ಕೆ ಸಿದ್ದಪ್ಪ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here