ಉತ್ತಮ ವಿದ್ಯಾರ್ಥಿಗಳಿಂದ ಶ್ರೇಷ್ಠ ನಾಗರಿಕರಾಗಲು ಸಾಧ್ಯ

0
40

ಕಲಬುರಗಿ: ಇಂದಿನ ವಿದ್ಯಾರ್ಥಿಗಳೆ, ನಾಳಿನ ನಾಗರಿಕರು. ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು. ಉತ್ತಮವಾದ ಶಿಕ್ಷಣ, ಸಂಸ್ಕಾರ, ಮಾನವೀಯ ಮೌಲ್ಯಗಳು, ರಾಷ್ಟ್ರಪ್ರೇಮದಂತಹ ಗುಣಗಳನ್ನು ವಿದ್ಯಾರ್ಥಿ ದೆಸೆಯಿಂದಲೇ ಅಳವಡಿಸಿಕೊಂಡು ನಿಶ್ಚಿತವಾದ ಗುರಿಯೊಂದಿಗೆ ಸತತ ಪ್ರಯತ್ನ ಮಾಡಿ ಉನ್ನತವಾದ ಸಾಧನೆ ಮಾಡುವುದರ ಜೊತಗೆ ಶ್ರೇಷ್ಠ ನಾಗರಿಕರಾಗಲು ಸಾಧ್ಯವಿದೆಯೆಂದು ಉಪನ್ಯಾಸಕ, ಚಿಂತಕ ಪ್ರೊ.ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.

ಅವರು ನಗರದ ಆಳಂದ ರಸ್ತೆಯಲ್ಲಿನ ’ಎಂ.ಎಂ.ಎನ್ ಟ್ಯೂಟೋರಿಯಲ್ಸ್’ನಲ್ಲಿ, ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ’ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ದಿನಾಚರಣೆ;ಯ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡುತ್ತಿದ್ದರು. ಮೇರು ವ್ಯಕ್ತಿತ್ವ ಹೊಂದಬೇಕಾದರೆ ಅಹಂಕಾರ, ಕೋಪ, ಅಸೂಯೆದಂತಹ ಗುಣಗಳನ್ನು ತ್ಯಜಿಸಬೇಕು.ಜಾತಿ,ವರ್ಗಗಳಿಗೆ ಆದ್ಯತೆಯನ್ನು ನೀಡದೆ, ಮಾನವೀಯತೆಗೆ ಪ್ರಾಧಾನ್ಯತೆಯನ್ನು ನೀಡಬೇಕು.ಎಂತಹ ಸಂದರ್ಭಗಳಲ್ಲಿಯೂ ಪ್ರಜ್ಞಾಪೂರ್ವಕವಾಗಿಯೇ ವರ್ತಿಸಬೇಕು.ಸುಖ ಹಾಗೂ ದುಖಃಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಹೊಂದಿರಬೇಕು.ಪರಸ್ಪರ ಪ್ರೀತಿ,ಸ್ನೇಹ,ಸಹಬಾಳ್ವೆಯಿಂದ ಜೀವನ ಸಾಗಿಸಬೇಕಾದದ್ದು ಅವಶ್ಯಕವಾಗಿದೆಯೆಂದು ನುಡಿದರು.

Contact Your\'s Advertisement; 9902492681

ಮಾನವ ಹುಟ್ಟಿ ತನ್ನ ಜೀವನಕ್ಕಾಗಿಯೇ ಸ್ವಾರ್ಥತೆಯಲ್ಲಿ ಬದುಕಿದರೇ ಬದುಕಿಗೆ ಅರ್ಥವಿಲ್ಲ. ಬದಲಿಗೆ ಸಮಾಜಕ್ಕೆ ಕೈಲಾದಷ್ಟು ಏನಾದರೂ ಕೊಡುಗೆಯನ್ನು ನೀಡಬೇಕು. ಜೀವನದಲ್ಲಿ ಉನ್ನತವಾದ ಸಾಧನೆಯನ್ನು ಮಾಡುವ ಮೂಲಕ, ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕಾಗಿದೆಯೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ನರಸಪ್ಪ ಬಿರಾದಾರ ದೇಗಾಂವ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ವಿದೇಶ ಸಂಸ್ಕೃತಿಗೆ ಮಾರುಹೋಗಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಸುಂದರ ಜೀವನ ನಿರ್ಮಾಣ ಮಾಡಲು ಪ್ರಯತ್ನಿಸಬೇಕಾಗಿದೆಯೆಂದರು.

ವಿದ್ಯಾರ್ಥಿಗಳಾದ ಅರುಣ ಜುನೈದಿ, ಕೌಶಲ್ಯ ಕಾರ್ಯಕ್ರಮ ಉದ್ಘಾಟಿಸಿದರು.ಸಂಸ್ಥೆಯ ಮುಖ್ಯಸ್ಥ ಸಾಗರ ಬಂಗರಗಿ, ಸಹ ಶಿಕ್ಷಕರಾದ ಅಮರ ಬಂಗರಗಿ, ಚಂಪಾಕಲಾ ನೆಲ್ಲೂರೆ, ತುಕಾರಾಮ ಸಿಂಗೆ ಸೇರಿದಂತೆ ಸಂಸ್ಥೆಯ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here