ಬಸವಕಲ್ಯಾಣ: 40ನೇ ಶರಣಕಮ್ಮಟ ಅನುಭವಮಂಟಪ ಉತ್ಸವ-2019 ನಿಮಿತ್ಯ ಲಿಂ. ಸುಶೀಲಾದೇವಿ ಡಾ. ಬಿ.ವ್ಹಿ. ಪಟೇಲರ್ ಆರನೇ ಸ್ಮರಣಾರ್ಥ ಬಸವಕಲ್ಯಾಣದ ಅನುಭವ ಮಂಟಪ ಪರಿಸರದಲ್ಲಿ ರಾಜ್ಯಮಟ್ಟದ ಬಸವಣ್ಣನವರ ವಚನಗಳ ಕಂಠಪಾಠ ಸರ್ಧೆ ಉದ್ಘಾಟನೆ ನೇರವೆರಿತು.
ಅನುಭವ ಮಂಟಪ ಅಧ್ಯಕ್ಷರಾಧ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದೇವರು ದಿವ್ಯಸನ್ನಿಧಾನವಹಿಸಿ ಮಕ್ಕಳಲ್ಲಿ ವಚನಗಳ ಪ್ರಜೆÐ ಮೂಡಿಸಲು ಈ ಸ್ಪರ್ಧೆ ಸಹಕಾರಿಯಾಗಲಿದೆ. ಈ ಸಲ ಮುಂಬೈನಗರದಿಂದ ಸ್ಪರ್ಧೆಯಲ್ಲಿ ಭಾಗವಹಿಸಲು ಆಗಮಿಸಿದ್ದು ಖುಷಿ ತಂದಿದೆ. ಈಗ ಇದು ಅಂತರಾಷ್ಟ್ರಿಯ ಸ್ಪರ್ಧೆ ಎಂಬತಾಗಿದೆ ಎಂದು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.
ಪೂಜ್ಯರಾದ ಸ್ವಾಮಿಗಳು, ಜಯದೇವ ಸ್ವಾಮಿಗಳು ಸಂಗಮೇಶ್ವರ ಸ್ವಾಮಿಗಳು, ಶರಣೆ ಸತ್ಯಕ್ಕ ನೇತೃತ್ವವಹಿಸಿದರು. ಬಸವಕಲ್ಯಾಣದ ಮಾಜಿ ಶಾಸಕ ಮಾರುತಿರಾವ ಮೂಳೆ ದೀಪ ಬೆಳಗಿಸಿ ಸ್ಪರ್ಧೆ ಉದ್ಘಾಟಿಸಿದರು. ಯುವ ಮುಖಂಡ ಶರಣುನ ಸಲಗರ ಬಸವಗುರು ಪೂಜೆ ನೆರವೇರಸಿದರು ಶಿವರಾಜ ನರಶೆಟ್ಟಿ “ ಶರಣ ಮಾರ್ಗ” ಮಾಸ ಪತ್ರಿಕೆಯ ವಿಷೇಶ ಸಂಚಿಕೆ ಲೋಕಾರ್ಪಣೆ ಮಾಡಿದರು. ಮಹಾಂತೇಶ ತೋರಣಗಟ್ಟಿ ಬೆಳಗಾವಿ ವಿ.ಎಮ್. ಹಿರೇಮಠ ಮುಂಬೈ ಮುಂತಾದವರು. ಅಥಿತಿಗಳಾಗಿ ಭಾಗವಹಿಸಿದರು.
ಬಸಮ್ಮ ಮಠದ ಬೆಳಗಾವಿ ವಚನ ಪ್ರಾರ್ಥನೆ ಮಾಡಿದರು ದೇವೇಂದ್ರ ಬರಗಾಲೆ ಸ್ವಾಗತಿಸಿದರು ವೀರಣ್ಣ ಕುಂಭಾರ ನಿರೂಪಿಸಿದರು. ಬಾಬು ಬೆಲ್ದಾಳ ವಂದಿಸಿದರು.
ಸ್ಪರ್ಧೆ ಸುಗಮವಾಗಿ ನಡೆಯಲು ಎಳು ಟೇಬಲಗಳ ಕೌಂಟರ್ ಮಾಡಿ ಅವುಗಳಿಗೆ ಚನ್ನಬಸವ, ಅಲ್ಲಮಪ್ರಭು, ಅಕ್ಕನಾಗಮ್ಮ, ಮರುಶಂಕರದೇವರು, ಮೋಳಿಗೆ ಮಾರಯ್ಯ, ಗಂಗಾಬಿಕೆ, ಅಕ್ಕಮಹಾದೇವಿ ಎಂದು ಹೇಸರಿಡಲಾಗಿತ್ತು. ನಿರ್ಣಾಯಕರಾಗಿ ವಿಶ್ವನಾಥಪ ಬಿರಾದಾರ ಮಲ್ಲಮ್ಮ ಆರ್. ಪಾಟೀಲ, ಎಂ. ಬಂಡೆಪ್ಪ, ಮಹಾದೇವಪ್ಪಾ ಇಜಾರೆ, ನಾಗಮ್ಮ ಭೂರೆ, ಲಕ್ಷ್ಮಿಬಾಯಿ ಪಾಟೀಲ, ಚಂದ್ರಪ್ಪ ಗುಂಗೆ, ಪ್ರಕಾಶ ಕೋರೆ, ನಿರ್ಮಲಾ ಕುಂದಗೋಳ, ಜೈರಾಜ ನಿಂಬೂರೆ, ಶಿವರಾಜ ನಿರ್ಣಾ, ಮಾರುತಿ ಲಾಧಾ, ಕಾರ್ಯನಿರ್ವಹಿಸಿದರು. ರಾಜ್ಯದ ನಾನಾ ಜಿಲ್ಲೆಗಳಿಂದ ಓಟ್ಟು 51 ಸ್ಫರ್ಧಾಳುಗಳು ಭಾಗವಹಿಸಿದ್ದು. ವಿಶೇಷವಾಗಿತ್ತು.
ನಿರ್ಣಾಯಕರ ತೀರ್ಪಿನಂತೆ ವಿಜೇತರಾದವರು
ಪ್ರಥಮ – ಬಸಮ್ಮ ಗುರಯ್ಯ ಮಠದ ( ಬೆಳಗಾವಿ) – ವಚನಗಳ ಸಂಖ್ಯೆ 509, ದ್ವಿತೀಯ ಮಹಾಲಕ್ಷ್ಮಿ ರಾಜು ಕುಂದಗೋಳ (ಬೆಳಗಾವಿ) ವಚನಗಳ ಸಂಖ್ಯೆ 375, ತೃತೀಯ – ಚನ್ನಬಸವಣ್ಣ ಸಾಧಕರು, ಬಸವಗಿರಿ ಬೀದರ– ವಚನಗಳ ಸಂಖ್ಯೆ 288.
ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಮಾಣಪತ್ರ ನೀಡಲಾಯಿತು. ವಿಜೇತರಿಗೆ ಅನುಭವ ಮಂಟಪ ಉತ್ಸವ– 2019ರಲ್ಲಿ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು ಎಂದು ತಿಳಿಸಲಾಯಿತು.