ಗುತ್ತಿಗೆ ಕಾರ್ಮಿಕರನ್ನು ಖಾಯಂ ಕಾರ್ಮಿಕರೆಂದು ಪರಿಗಣಿಸಬೇಕು: ವಿ.ಜಿ. ದೇಸಾಯಿ

0
95

ಕಲಬುರಗಿ/ಸೇಡಂ: ಕಾರ್ಮಿಕರು ಬಹಳ ಅತಂತ್ರದಲ್ಲಿ ಬದುಕುತ್ತಿದ್ದಾರೆ. ಸರಕಾರ ಹೊರಗುತ್ತಿಗೆ ಕಾರ್ಮಿಕರನ್ನು ಯಾವ ಕ್ಷಣದಲ್ಲಾದರೂ ಕೆಲಸದಿಂದ ತೆಗೆದುಹಾಕುತ್ತಾರೆ ಎಂಬ ಅಂಜಿಕೆಯಿಂದ ದಿನ ಕಳೆಯುತ್ತಿದ್ದಾರೆ.  ಕೇಂದ್ರ ಸರಕಾರವಾಗಲಿ, ರಾಜ್ಯ ಸರಕಾರವಾಗಲಿ ಕಾರ್ಮಿಕರ ಬಗ್ಗೆ ಕಾಳಜಿಯನ್ನು ವಹಿಸುತ್ತಿಲ್ಲ. ಪ್ರತಿ ಹಂತದಲ್ಲೂ ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ಗುತ್ತಿಗೆ ಪದ್ದತಿ ಬಹಳ ಅನೈತಿಕವಾದದ್ದು, ಕಾರ್ಮಿಕರಿಗೆ ಸೇರಬೇಕಾದ ನಿಜವಾದ ವೇತನ ಅವರ ಕೈಗೆ ಸೇರುವುದಿಲ್ಲ. ಅವರಿಗೆ ಯಾವುದೇ ರೀತಿಯ ಸೌಲಭ್ಯಗಳನು ಸಿಗುತ್ತಿಲ್ಲ. ಸರಕಾರವು ಅವರ ದುಡಿತಕ್ಕೆ ತಕ್ಕ ಪ್ರತಿಫಲ ನೇರವಾಗಿ ನೀಡಬೇಕು. ಗುತ್ತಿಗೆ ಕಾರ್ಮಿಕರನ್ನು ಖಾಯಂ ಕಾರ್ಮಿಕರೆಂದು ಪರಿಗಣಿಸಬೇಕು ಎಂದು  ಸಂಘದ ಜಿಲ್ಲಾ ಅಧ್ಯಕ್ಷರಾದ ವಿ.ಜಿ. ದೇಸಾಯಿ ಆಗ್ರಹಿಸಿದರು.

ಸೇಡಂ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘದಿಂದ ಆಯೋಜಿಸಿದ ತಾಲ್ಲೂಕು ಮಟ್ಟದ ಗುತ್ತಿಗೆ ನೌಕರರ ಸಮಾವೇಶವನ್ನು ಉದ್ದೇಶಿ ಮಾತನಾಡಿದರು.

Contact Your\'s Advertisement; 9902492681

ನಂತರ ರಾಘವೇಂದ್ರ ಎಂ.ಜಿ ರವರು ಮಾತನಾಡುತ್ತಾ, ವಸತಿನಿಲಯ ಕಾರ್ಮಿಕರಿಗೆ ಸರಕಾರ ಕಡೆಗಣಿಸಬಾರದು, ಕಾರ್ಮಿಕರಿಗೆ ಪ್ರತಿ ತಿಂಗಳು ತಪ್ಪದೆ ವೇತನ ನೀಡಬೇಕು. ಸಮರ್ಪಕವಾಗಿ ಕಾರ್ಮಿಕರ ಭವಿಷ್ಯ ನಿಧಿ ( ಇ.ಪಿ.ಎಫ್ ) ಒದಗಿಸಬೇಕು. ಎಲ್ಲಾ ನೌಕರರಿಗೆ ಇ.ಎಸ್.ಐ ಕಾರ್ಡನ್ನು ಒದಗಿಸಬೇಕು. ಸೇವೆಯಲ್ಲಿರುವ ನೌಕರಿಗೆ ಹೊರಗುತ್ತಿಗೆ ನೇಮಕಾತಿ ಸಂಸ್ಥೆಯಿಂದ ನೇಮಕಾತಿ ಆದೇಶ ಪತ್ರ ಹಾಗೂ ಗುರುತಿನ ಚೀಟಿ ನೀಡಿ. ಬಾಕಿಯಿರುವ ವೇತನವನ್ನು ನೀಡಬೇಕು. ಗುತ್ತಿಗೆದಾರರಿಗೆ ಪ್ರತಿ ತಿಂಗಳು ೨ನೇ ತಾರಿಖಿನೊಳಗಾಗಿ ಹಾಜರಾತಿ ವಿವರಗಳನ್ನು ನೀಡಿ ಪ್ರತಿ ತಿಂಗಳು ಭವಿಷ್ಯ ನಿಧಿ ಪಾವತಿಯಾಗುವಂತೆ  ನೋಡಿಕೊಳ್ಳಬೇಕು. ಗುತ್ತಿಗೆ ನೌಕರರಿಗೆ ಖಾಯಂ ಮಾಡಬೇಕು, ಅಲ್ಲಿಯವರೆಗೂ  ಅವರ ಸೇವೆಯನ್ನು ನಿವೃತ್ತಿಯ ವರೆಗೂ ಮುಂದುವರೆಸಬೇಕು. ಎಂದು ಆಗ್ರಹಿಸಿದರು. ಸಮಾವೇಶದ ಅಧ್ಯಕ್ಷತೆಯನ್ನು  ಸಂಘದ ತಾಲೂಕಾ ಮುಖಂಡರಾದ ಬಸವರಾಜ ಹೆಚ್. ಹುಳಗೋಳ  ರವರು ವಹಿಸಿಕೊಂಡಿದ್ದರು. ವೇದಿಕೆ ಮೇಲೆ  ಶೇಖರ,ಮಹಮ್ಮದ ಜಹೀರ,  ಉಪಸ್ಥಿತರಿದ್ದರು.

ಸಮಾವೇಶದಲ್ಲಿ ನೂತನ ತಾಲೂಕಾ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕ ಸಂಘದ ಸೇಡಂ ತಾಲೂಕಾ ಸಮಿತಿಯ ಅಧ್ಯಕ್ಷರಾಗಿ ಬಸವರಾಜ ಹೆಚ್. ಹುಳಗೋಳ, ಉಪಾಧ್ಯಾಕ್ಷರಾಗಿ ನೇಮತ್, ಸುನೀಲ್ ಕಾರ್ಯದರ್ಶಿಗಳಾಗಿ ಅಶೋಕ ಅಂಬಲಗಿ, ಸಹಕಾರ್ಯದರ್ಶಿಗಳಾಗಿ ಶೇಖರ ಹಾಗೂ ಸದಸ್ಯರಾಗಿ ಪವನ, ಮಲ್ಲಮ್ಮ ರಂಜೋಳ, ವಿಮಲಾಬಾಯಿ, ಚಂದು, ಶಿವಮ್ಮ ಕೋಲಕುಂದ, ಸಾವಿತ್ರಮ್ಮ, ಸುಮಿತ್ರ, ಸರೋಜಾ, ಮಹಮ್ಮದ ಜಹೀರ, ಕಾಶಿಬಾಯಿ, ಶರಣಮ್ಮ, ಚಿತ್ರಶೇಖರ, ವಿಜಯಲಕ್ಷ್ಮಿ ಮಲಖೇಡ, ಪ್ರೇಮಾ, ಶಾರದಾ ರವರು ಆಯ್ಕೆಯಾಗಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here