ಕಲಬುರಗಿ: ಚಿಂಚೋಳ್ಳಿ ತಾಲ್ಲೂಕಿನಲ್ಲಿ ಕರ್ನಾಟಕ ನೀರಾವರಿ ನಿಗಮ ನಿಯಮಿತ, ಗುಲ್ಬರ್ಗಾ ನೀರಾವರಿ ಯೋಜನೆ ವಲಯ ವ್ಯಾಪ್ತಿಯಲ್ಲಿ ಬರುವ ಮುಲ್ಲಾಮುರಿ ಕೆಳದಂಡೆ ಯೋಜನೆಯಡಿಯಲ್ಲಿ 124 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಕಾಲುವೆ ನವೀಕರಣ ಕಾಮಗಾರಿಯು ಅತ್ಯಂತ ಕಳಪೆ ಹಾಗೂ ಭ್ರಷ್ಟಚಾರದಿಂದ ನಡೆಯುತ್ತಿದೆ ಎಂದು ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿಗಳಿಗೆ ತನಿಖೆ ನಡೆಸಿ ಕ್ರಮ ಕೈಗೊಳಲ್ಲು ಆಗ್ರಹಿಸಿದ್ದಾರೆ.
ಕಾಲುವೆ ನವೀಕರಣ ಕಾಮಗಾರಿಯನ್ನು 2014-15ರಲ್ಲಿ 18 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಕಾಮಗಾರಿ ಪೂರ್ಣಗೊಂಡು ಕೆವಲ ಮೂರು ವರ್ಷಗಳು ಮಾತ್ರ ಆಗಿರುತ್ತದೆ. ಆದರೆ ಸದರಿ ಕಾಮಗಾರಿಯನ್ನು ಒಳಗೊಂಡಂತೆ ಕಾಲುವೆ ನವೀಕರಣ ಕಾಮಗಾರಿಗಾಗಿ ಈಗ 124 ಕೊಣ, ರೂ. ಮಂಜೂರಾಗಿ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಕಾಮಗಾರಿಯು ಅರ್ಧದಷ್ಟು ಮುಗಿದಿರುತ್ತದೆ ತಿಳಿಸಿದರು
ಇದೆಲ್ಲವನ್ನು ಗಮನಿಸಿದಾಗ 2014-15 ರಲ್ಲಿ ನಡೆದ ಕಾಮಗಾರಿಯೂ ಕೂಡ ಅತ್ಯಂತ ಕಳಪೆ ಗುಣಮಟ್ಟದ ಕಾಮಗಾರಿಯಾಗಿದ್ದು, ಸರಿಯಾದ ರೀತಿಯಲ್ಲಿ ಗುಣಮಟ್ಟ ಪರಿಶೀಲಿಸದೇ ಭ್ರಷ್ಟಚಾರ ವೆಸಗಿರುವುದು ಸ್ಪಷ್ಟವಾಗುತ್ತದೆ. ಅಷ್ಟೆ ಅಲ್ಲದೆ ಪುನಃ ಅದೇ ಕಾಮಗಾರಿ ಸೇರಿಸಿ, 124 ಕೋಟಿ ರೂ. ವೆಚ್ಚದಲ್ಲಿ ಪ್ರಸ್ತುತ ನಿರ್ಮಾಣ ಮಾಡಲಾಗುತ್ತಿರುವ ಕಾಲುವೆ ನವೀಕರಣ ಕಾಮಗಾಯು ಕೂಡ ಅತ್ಯಂತ ಕಳಪೆ ಹಾಗೂ ಅವ್ಯವಹಾರದಿಂದ ಕೂಡಿದೆ ಎಂದು ಅನೇಕ ದೂರುಗಳು ಬಂದಿರುತ್ತವೆ ಎಂದು ಹೇಳಿದ್ದಾರೆ.
ಅಲ್ಲದೇ ಈ ಹಿಂದೆ ನಡೆದ ಕಾಮಗಾರಿಯೂ ಕಳಪೆ ಗುಣಮಟ್ಟದ ಕಾಮಗಾರಿ ಯಾಗಿದೆ ಎಂದು ತಿಳಿದರೂ ಕೂಡ, ಯಾವುದೇ ಕ್ರಮ ಕೈಗೊಳ್ಳದೇ ಮತ್ತೆ ಅಂದಾಜು ಪಟ್ಟಿ ತಯಾರಿಸಿ ಮರು ಕಾಮಗಾರಿ ಕೈಗೊಳ್ಳುವುದರ ಮೂಲಕ ಭ್ರಷ್ಟಚಾರಕ್ಕೆ ಅನುಕೂಲ ಮಾಡಿಕೊಟ್ಟಾಂತಾಗಿದೆ. ಆದುದರಿಂದ ಕಾಮಗಾರಿಯ ಗುಣ ಮಟ್ಟ ಪರಿಶೀಲನೆಗೆ ಸಮಿತಿಯೊಂದನ್ನು ರಚಿಸಿ ಕೂಲಂಕುಶವಾಗಿ ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಸರ್ಕಾರದ ಹಣ ಈರೀತಿಯಾಗಿ ದುರ್ಬಳಕೆ ಆಗುವುದನ್ನು ತಪ್ಪಿಸಬೇಕೆಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ತನಿಖೆಗೆ ಒತ್ತಾಯಿಸಿದ್ದಾರೆ.