ಕಲಬುರಗಿ ನೆಲದ ಗಟ್ಟಿ ದನಿ ಡಾ. ಚೆನ್ನಣ್ಣ ನಡೆದು ಬಂದ ದಾರಿ

0
499

ನೂತನ ಶಹಾಬಾದ ತಾಲ್ಲೂಕಿನ ಶಂಕರವಾಡಿಯ ಸಾಬಮ್ಮ ಧೂಳಪ್ಪ ವಾಲೀಕಾರ ದಂಪತಿಯ ಪುತ್ರರಾದ ಇವರು ಶಹಾಬಾದನಲ್ಲಿ ಎಚ್.ಎಸ್.ಸಿ. ಕಲಬುರಗಿಯ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಪದವಿ, ಧಾರವಾಡ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದರು.

ಹೈದರಾಬಾದ್ ಕರ್ನಾಟಕಸ ಗ್ರಾಮ ದೇವತೆಗಳ ಜಾನಪದೀಯ ಅಧ್ಯಯನ ಎಂಬ ವಿಷಯ ಕುರಿತು ಮಹಾಪ್ರಬಂದ ರಚಿಸಿ ಪಿಎಚ್.ಡಿ ಪದವಿ ಪಡೆದಿದ್ದರು.

Contact Your\'s Advertisement; 9902492681

ಸೇವಾ ವಿವರ: ಸೇಡಂ ತಾಲ್ಲೂಕಿನ‌ ಮುಧೋಳ, ಆಳಂದ ತಾಲ್ಲೂಕಿನ ಕಡಗಂಚಿ, ರಾಯಚೂರಿನ ಹಮ್ದರ್ದ ಪ್ರೌಢಶಾಲಾ ಶಿಕ್ಷಕರಾಗಿ, ರಾಯಚೂರಿನ ಲಕ್ಷ್ಮೀ ವೆಂಕಟೇಶ ದೇಸಾಯಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಗುಲ್ಬರ್ಗ ವಿವಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕರಾಗಿ (೧೯೮೭-೨೦೦೩) ಸೇವೆ ಸಲ್ಲಿಸಿ ನಿವೃರತ್ತರಾಗಿದ್ದರು.

ಸಾಹಿತ್ಯ ಕೃಷಿ- ಮಹಾಕಾವ್ಯಗಳು ವ್ಯೂ ಮಾವ್ಯೋಮಾ, ಸುನೀತಂಗಳ ಸುಕಾವ್ಯಾಮೃತ, ಸುನೀತಂಗಳ ಸೌದಿವ್ಯಾ ಮೃತ, ಬೌದ್ಧತ್ವದ ಮಹಾ ಬ್ರಹ್ಮಾಂಡಾಮೃತ.

ಕವನ ಸಂಕಲನ: ಮರದ ನೀರಿನ ಗಾಳಿ, ಹಾಡಕ್ಕಿ ಹಾಗೂ ಇತರ ಪದಗಳು, ಬಂಡೆದ್ದ ದಲಿತರ ಬೀದಿ ಹಾಡುಗಳು, ಐದು ಸಮಾಜವಾದಿ ಕಾವ್ಯಗಳು, ವಾಲೀಕಾರನ ಮುನ್ನೂರು ಮೂರು ವಚನಗಳು, ಕರಿ ತಲಿ ಮಾನವನ ಜಿಪದ ಸೇರಿದಂತೆ ೧೧ ಕವನ ಸಂಕಲನ.

ಕಥಾ ಸಂಕಲನ: ಕಪ್ಪು ಕಥೆಗಳು, ಬೋಧಿ ವೃಕ್ಷದ ಹೂಗಳು, ಹೆಪ್ಪುಗಟ್ಟಿದ ಸಮುದ್ರ, ಕುತ್ತದಲ್ಲಿ ಕುತ್ತವರ ಕಥೆಗಳು

ನಾಟಕಗಳು: ಟೊಂಕದ ಕೆಳಗಿನ ಜನ, ಜೊಗತಿ, ತಥಾಗತನ ಬೆಳಂಬಳಗು, ಅಗ್ನಿರಾಜ, ಸೇರಿದಂತೆ ೧೨ ನಾಟಕಗಳು.

ಕಾದಂಬರಿ: ಬೆಳ್ಯ, ಒಂದು ಹೆಣ್ಣಿನ ಒಳ ಜಗತ್ತು, ಕೋಟೆ ಬಾಗಿಲು, ಗ್ರಾಮ ಭಾರತ, ಹುಲಿಗೆಮ್ಮ
ಡಪ್ಪಿನಾಟಗಳು, ಜಾನಪದ ಸಂಪ್ರಬಂಧ ಸೇರಿದಂತೆ ಒಟ್ಟು ಒಟ್ಟು ೫೦ಕ್ಕೂ ಹೆಚ್ಷು ಕೃತಿಗಳನ್ನು ಹೊರ ತಂದಿದ್ದರು.

ತೀರಾ ಇತ್ತೀಚೆಗೆ ಬುದ್ಧನ ಕುರಿತು ಮತ್ತೆ ಎರಡು ಮಹಾ ಕಾವ್ಯಗಳನ್ನು ರಚಿಸಿದ್ದರು. ಅವುಗಳ ಮುಖಪುಟ ಬಂದಿವೆ. ಆ ಪುಸ್ತಗಳು ಲೋಕಾರ್ಪಣೆ ಆಗುವ ಮುನ್ನವೇ ಅವರು ಈ ಲೋಕವನ್ನು ತ್ಯಜಿಸಿ ರುವುದು ದುರ್ವಿದಿ ಎನ್ನದೆ ವಿಧಿ ಇಲ್ಲ!
ಬಸವಣ್ಣನ ಕುರಿತು ಮಹಾ ಕಾವ್ಯವೊಂದನ್ನು ಬರೆಯಬೇಕೆಂದುಕೊಂಡಿದ್ದ ಅವರು ಈಗಾಗಲೇ ನೂರು ಪುಟಗಳ ಡಿಕ್ಟೇಶನ್ ಕೂಡ ಮಾಡಿದ್ದರಂತೆ!

ಮಾಹಿತಿ ಸಂಗ್ರಹ: ಶಿವರಂಜನ್ ಸತ್ಯಂಪೇಟೆ

ಚಿರ ನಿದ್ರೆಗೆ ಜಾರಿದ ಡಾ. ಚೆನ್ನಣ್ಣ ವಾಲೀಕಾರ

ಬಂಡಾಯ ಸಾಹಿತಿ ಡಾ. ಚನ್ನಣ್ಣ ವಾಲೀಕಾರ ಆರೋಗ್ಯ ಸ್ಥಿರ:  ಗಣ್ಯರು, ಸಾಹಿತಿಗಳು ಆಸ್ಪತ್ರೆಗೆ ದೌಡು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here