ಕನ್ನಡ ಭಾಷೆ ಅಭಿವೃದ್ಧಿ ಮತ್ತು ಸವಾಲುಗಳು” ವಿಷಯ ಕುರಿತು ಉಪನ್ಯಾಸ ಹಾಗೂ ಸನ್ಮಾನ ಕಾರ್ಯಕ್ರಮ ನಾಳೆ

0
197

ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್ ಉತ್ತರ ವಲಯ ಘಟಕದ ವತಿಯಿಂದ ೬೪ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ” ಕನ್ನಡ ಭಾಷೆ ಅಭಿವೃದ್ಧಿ ಮತ್ತು ಸವಾಲುಗಳು” ವಿಷಯ ಕುರಿತು ಉಪನ್ಯಾಸ ಹಾಗೂ ಸನ್ಮಾನ ಕಾರ್ಯಕ್ರಮ ಇದೇ ನವೆಂಬರ್ ೩೦ರಂದು ಬೆಳಗ್ಗೆ ೧೧ ಗಂಟೆಗೆ ಮಹಾತ್ಮ ಬಸವೇಶ್ವರ ನಗರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ಉತ್ತರ ವಲಯದ ಕಾರ್ಯದರ್ಶಿ ಜಿ.ಜಿ. ವಣಿಕ್ಯಾಳ ಹಾಗೂ ಆನಂದ ಕಪನೂರ ತಿಳಿಸಿದ್ದಾರೆ.

ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಸ್ಗರ ಚುಲಬುಲ್, ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಪತ್ರಕರ್ತ- ಲೇಖಕ ಶಿವರಂಜನ್ ಸತ್ಯಂಪೇಟೆ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ಖ್ಯಾತ ಉದ್ಯಮಿ ಮಲ್ಲಯ್ಯ ಗುತ್ತೇದಾರ, ಕಾಂಗ್ರೆಸ್ ಪಕ್ಷದ ಯುವ ಮುಖಂಡ ವಿಜಯಕುಮಾರ ಜಿ.‌ರಾಮಕೃಷ್ಣ ಅತಿಥಿಗಳಾಗಿ ಆಗಮಿಸಲಿದ್ದು, ಪ್ರಾಚಾರ್ಯ ಅರುಣಕುಮಾರ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಕಸಾಪ ಉತ್ತರ ವಲಯ ಅಧ್ಯಕ್ಷ ಲಿಂಗರಾಜ ಸಿರಗಾಪುರ, ಕನ್ನಡ ಹೋರಾಟಗಾರ ಗುರು ಬಂಡಿ ಉಪಸ್ಥಿತರಿರಲಿದ್ದಾರೆ ಎಂದು ಹೇಳಿದ್ದಾರೆ.

ಇದೇವೇಳೆಯಲ್ಲಿ ಬಸವರಾಜ ಚೇಂಗಟಾ, ಚಂದ್ರು ಹಿರೇಮಠ, ಭೀಮಾಶಂಕರ ಫಿರೋಜಾಬಾದ, ನಾಗರಾಜ ಹೂವಿನಳ್ಳಿ,‌ಮನಿಷ ಪಾಟೀಲ, ನಾಗರಾಜ ಸ್ವಾದಿ, ನೂರ್ ಫಾತಿಮಾ ಅನ್ಸಾರಿ, ರೇಷ್ಮಾ ಬೇಗಂ ಅವರನ್ನು ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here