ಶೌಚಾಲಯ ನಿರ್ಮಾಣದಲ್ಲಿ ಭಾರಿ ಗೋಲಮಾಲ್: ದಲಿತ ಸಂಘರ್ಷ ಸಮಿತಿ ಆರೋಪ

0
63

ಶಹಾಪುರ: ತಾಲ್ಲೂಕಿನ ಅಣಬಿ ಸಗರ್ ಹುರುಸಗುಂಡಗಿ ಹಾಗೂ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ಶೌಚಾಲಯ ನಿರ್ಮಾಣದಲ್ಲಿ ಭಾರಿ ಪ್ರಮಾಣದ ಗೋಲ್ಮಾಲ್ ಆಗಿದೆ ಎಂದು ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ತಾಲ್ಲೂಕು ಪಂಚಾಯಿತಿ ಕಚೇರಿ ಎದುರುಗಡೆ ಧರಣಿ ನಡೆಸಿದರು.

ಕೆಲವೊಂದು ಮೇಲ್ಜಾತಿ ವರ್ಗದವರು ಪರಿಶಿಷ್ಟ ಪಂಗಡದ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಶೌಚಾಲಯವನ್ನು ನಿರ್ಮಿಸಿಕೊಂಡಿದ್ದಾರೆ ಅಂಥವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಪ್ರತಿಭಟನೆಯಲ್ಲಿ ಆಗ್ರಹಿಸಿದರು.

Contact Your\'s Advertisement; 9902492681

ತಪ್ಪಿತಸ್ಥ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಕೂಡಲೇ ಸೂಕ್ತ ಕ್ರಮ ಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಉಪ ಪ್ರಧಾನ ಸಂಚಾಲಕ ನಾಗಣ್ಣ ಬಡಿಗೇರ್, ಭೀಮರಾಯ, ಹಣಮಂತ ಹುಲಕಲ್, ರಾಯಪ್ಪ, ಈಶ್ವರ ರೋಜಾ, ಬಸವರಾಜ ಮಾಡಗಿ, ಅನಿಲ್ ಕುಮಾರ್,ಸಂಜಯ್ ಮುಂಡಾಸ್, ಬಸಲಿಂಗಪ್ಪ ಕರ್ಕಳ್ಳಿ ,ಭೀಮರಾಯ, ಪರಶುರಾಮ ಪೂಜಾರಿ, ಧರ್ಮಣ್ಣ ಅಯ್ಯಾಳಪ್ಪ ರಸ್ತಾಪುರ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here