ಕಲಬುರಗಿ: ಚುನಾವಣೆ ಸಂದರ್ಭ ರಾಜಕೀಯ ನಾಯಕರ ಪರಸ್ಪರ ಕೆಸರೆರಚಾಟದ ಮಧ್ಯೆ ವಿರೋದ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ನಿಷೇದಿತ ಪದವಾದ ಹಜಾಮ ಎಂಬ ಪದವನ್ನು ಬಳಸಿರುವದು (ಕ್ಷೌರಿಕ )ಹಡಪದ ಸಮುದಾಯಕ್ಕೆ ಮಾಡಿರುವ ಅವಮಾನ ಆದರಿಂದ ಸಿದ್ದರಾಮಯ್ಯನವರು ಕೂಡಲೆ ಕ್ಷೌರಿಕ ಸಮುದಾಯಕ್ಕೆ ಬಹಿರಂಗವಾಗಿ ಕ್ಷಮೆ ಕೋರಬೆಂದು ಅವಿರಾಳ ಜ್ಞಾನಿ ಶ್ರೀಗುರು ಹಡಪದ ಅಪ್ಪಣ್ಣ ಸೇವಾ ಟ್ರಸ್ಟ್ (ರಿ.) ಕಲಬುರಗಿ. ಅಧ್ಯಕ್ಷರಾದ ಎಸ್.ಕೆ ತೆಲ್ಲೂರ ಆಗ್ರಹಿಸಿದ್ದಾರೆ.
ಮಾನ್ಯ ಸಿದ್ದರಾಮಯ್ಯನವರು ಜಾತ್ಯಾತೀತ, ಸಮಾಜವಾದಿ ನಾಯಕ ಮತ್ತು ತಳ ಸಮುದಾಯದಿಂದ ಬಂದಿದ್ದು ಕೆಳ ಸಮುದಾಯಗಳ ಜನರ ಭಾವನೆಗಳನ್ನು ಸಮೀಪದಿಂದ ಬಲ್ಲವರು ಅಲ್ಲದೆ ಈ ಹಿಂದೆ ಅವರ ಮುಖ್ಯಮಂತ್ರಿಯಾಗಿದ್ದಾಗ ಸ್ವತ ಅವರೇ ಹಜಾಮ ಎಂಬ ಪದವನ್ನು ತೆಗೆದು ಹಾಕಿದ್ದಾರೆ. ಅಂತಹ ಸಿದ್ದರಾಮಯ್ಯನವರು ಮಾತಿನ ಬರದಲ್ಲಿ ನಿಷೇದಿತ ಪದ ಬಳಕೆ ಮಾಡಿದಲ್ಲದೆ, ಕ್ಷಮೇಗೆ ಮೀನಾಮೇಶ ಎಣಿಸುತ್ತಿರುವದು ಅವರ ವ್ಯಕ್ತಿತ್ವಕ್ಕೆ ತಕ್ಕುದಾದದಲ್ಲ ಆದರಿಂದ ಕ್ಷೌರಿಕ ಸಮುದಾಯದ ಜನರ ಭಾವನೆಗಳೊಂದಿಗೆ ಆಟವಾಡದೆ ಕೂಡಲೇ ಮಾದ್ಯಮಗಳ ಮೂಲಕ ಬಹಿರಂಗವಾಗಿ ಕ್ಷಮೇ ಕೋರಬೇಕು ಇಲ್ಲವಾದಲ್ಲಿ ಸಮಾಜದ ಮುಂದಿನ ಉಗ್ರ ಹೋರಾಟಗಳನ್ನು ಎದುರಿಸಬೇಕಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಎಸ್.ಕೆ ತೆಲ್ಲೂರ, ಕಾರ್ಯದರ್ಶಿ ಗುರು ಹಡಪದ ಖಣದಾಳ, ರಾಜು ದುತ್ತರಗಾಂವ್, ಪ್ರಕಾಶ ಕಟ್ಟಿಮನಿ, ರಾಜು ಹನ್ನೂರ, ತಿಳಿಸಿದ್ದಾರೆ.