ಡಿ. 26 ಖಗೋಳದಲ್ಲೊಂದು ವಿಸ್ಮಯ ಜರುಗಲಿದೆ: ಬ್ರೆಕ್‌ಥ್ರೂ ಸೈನ್ಸ್ ಸೋಸೈಟಿಯ ಸದಸ್ಯ,ರಶ್ಮೀ

0
67

ಕಲಬುರಗಿ: ಡಿಸೆಂಬರ್ 26 ರಂದು ಖಗೋಳದಲ್ಲೊಂದು ವಿಸ್ಮಯ ಜರುಗಲಿದೆ. ಸೂರ್ಯ ಹಾಗೂ ಭೂಮಿಯ ನಡುವೆ ಚಂದ್ರ ಹಾದು ಹೋಗಲಿದ್ದು, ಸೂರ್ಯಗ್ರಹಣ ಜರುಗಲಿದೆ. ನಿಸರ್ಗದ ಈ ವಿಸ್ಮಯವನ್ನು ನೀವು ನಮ್ಮ ನಗರ ಕಲಬುರಗಿಯಲ್ಲಿ ನೋಡಬಹುದಾಗಿದೆ. ಬ್ರೆಕ್‌ಥ್ರೂ ಸೈನ್ಸ್ ಸೋಸೈಟಿಯು ಎಲ್ಲೆಡೆ ಶಾಲೆ, ಕಾಲೇಜು, ಉದ್ಯಾನವನಗಳಲ್ಲಿ, ವಿವಿದ ಏರಿಯಾಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ವಿಚಾರ ಸಂಕೀರ್ಣಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಬ್ರೆಕ್‌ಥ್ರೂ ಸೈನ್ಸ್ ಸೋಸೈಟಿಯ ಸದಸ್ಯ,ರಶ್ಮೀ ತಿಳಿಸಿದ್ದಾರೆ.

ನಗರದ MAM Pu College  And Sparkles International School   ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಡಾ. ಅಶೋಕ ಜೀವಣಗಿ, ನಿವೃತ್ತ ಪ್ರಾಂಶುಪಾಲರು. ವ್ಹಿ.ಜಿ ಮಹಿಳಾ ವಿದ್ಯಾಲಯ ಮಾತನಾಡುತ್ತ, ಪ್ರಕೃತಿಯ ಈ ವಿಸ್ಮಯವನ್ನು, ವಿಜ್ಞಾನದ ಅನೇಕ ಆವಿಷ್ಕಾರಗಳಿಗೆ ಅನುಕೂಲವಾದ ಈ ಸಂದರ್ಭಕ್ಕೆ ಎಲ್ಲರೂ ಸಾಕ್ಷಿಯಾಗಬೇಕು. ಮಕ್ಕಳು, ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರೆನ್ನದೆ ಎಲ್ಲ ನಾಗರೀಕರೂ ಈ ವಿಸ್ಮಯವನ್ನು ಸವಿಯಬೇಕು ಎಂದು ಕರೆ ನೀಡಿದರು.

Contact Your\'s Advertisement; 9902492681

ಸೂರ್ಯ ಗ್ರಹಣವನ್ನು ಬರೀ ಕಣ್ಣಿನಿಂದ ನೋಡುವುದು ಅಪಾಯಕಾರಿ. ಆದ್ದರಿಂದ ಬ್ರೆಕ್‌ಥ್ರೂ ಸೈನ್ಸ್ ಸೋಸೈಟಿ ಈ ಸಂದರ್ಭದಲ್ಲಿ ಸನ್ ಫಿಲ್ಟರ್ (Sun Filter)  ಗಳನ್ನು ತರುತ್ತಿದೆ. ಇವು ಉತ್ತಮ ಗುಣಮಟ್ಟದ Polymer ಪದಾರ್ಥದಿಂದ ಮಾಡಲಾಗಿದು ೧೦೦೦ oaks Opticles, USA   ಇದನ್ನು ತರಿಸಿಕೊಳ್ಳಲಾಗಿದೆ.

ಇದರ ಬೆರೆ ೧೫/- ರೂಪಾಯಿಯಾಗಿದ್ದು ಇದರೊಂದಿಗೆ ಬ್ರೆಕ್‌ಥ್ರೂ ಸೈನ್ಸ್ ಸೋಸೈಟಿ ಇಂಗ್ಲೀಷ್‌ನಲ್ಲಿ ಪುಸ್ತಕಗಳನ್ನು ತಂದಿದೆ, ಇದರ ಬೆರೆ ೧೦/- ರೂಗಳಿದ್ದು ಇವುಗಳನ್ನು ಸದರಿ ಸೂರ್ಯ ಗ್ರಹಣದಲ್ಲಿ ಬಳಸಿಕೊಳ್ಳುವುದರ ಮೂಲಕ ವಿಸ್ಮಯವನ್ನು ಕಣ್ತುಂಬಿಕೊಳ್ಳಬೇಕೆಂದು ಬ್ರೆಕ್‌ಥ್ರೂ ಸೋಸೈಟಿ ನಾಗರಿಕರಲ್ಲಿ ಮನವಿ ಮಾಡುತ್ತದೆ. ಇವುಗಳನ್ನು ಪಡೆಯಲು 9986854835,  9353137787 ಸಂಪರ್ಕಿಸಬುದಾಗಿದೆ.

ಈ ಸಂದರ್ಭದಲ್ಲಿ ಸ್ಪಾರ್ಕಲ್ ಶಾಲೆಯ ರೂಬಿ ಎ.ಕೆ, ಎಂ.ಎಂ ಪಿ.ಯು ಕಾಲೇಜಿನ ಉಪಾಧ್ಯಕ್ಷರಾದ ಸಂಗಮೇಶ್ ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here