SSLC ಪರೀಕ್ಷೆ ಫಲಿತಾಂಶ 625 ಕ್ಕೆ 625 ಅಂಕ ಪಡೆದ ಇಬ್ಬರು ವಿದ್ಯಾರ್ಥಿನಿಯರು

0
150

ಬೆಂಗಳೂರು:  ಸೃಜನಾ ಡಿ ಹಾಗೂ ನಾಗಾಂಜಲಿ SSLC ಪರೀಕ್ಷೆಯಲ್ಲಿ 625 ಅಂಕಗಳಿಗೆ 625 ಅಂಕ ಗಳಿಸಿವ ಮೂಲಕ ರಾಜ್ಯಕ್ಕೇ ಮೊದಲ ಸ್ಥಾನ ಪಡೆದಿದ್ದಾರೆ. ಇವರು. ಸೃಜನಾ ಡಿ ಆನೇಕಲ್ ವಾಸಿಯಾಗಿದ್ದು, ನಾಗಾಂಜಲಿ ಕುಮಟಾ ನಿವಾಸಿಯಾಗಿದ್ದಾರೆ.

ರಾಜ್ಯದಲ್ಲಿ ಒಟ್ಟು11 ವಿದ್ಯಾರ್ಥಿಗಳು 624 ಅಂಕ ಗಳಿಸಿದ್ದು, 43 ವಿದ್ಯಾರ್ಥಿಗಳು 621 ಅಂಕ ಪಡೆದಿದ್ದು, ಇಬ್ಬರು ವಿದ್ಯಾರ್ಥಿನಿಯರು ಅಂಕ ಪಡೆದೆ 2018-19 ಸಾಲಿನಲ್ಲಿ ದಾಖಲೆ ನಿರ್ಮಿಸಿದ್ದಾರೆ. ಅಲ್ಲದೇ ಕಲಬುರಗಿಯ ಎಸ್ ಆರ್ ಎನ್ ಮೆಹತಾ ಸ್ಕೂಲ್  ಆದಿತ್ಯ ಜೋಶಿ, 595 ಅಂಕ ಪಡೆದು ಶಾಲೆ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

Contact Your\'s Advertisement; 9902492681

ಈ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಹಾಗೂ ಮಂಡಳಿ ನಿರ್ದೇಶಕಿ ವಿ. ಸುಮಂಗಲಾ ರಿಸಲ್ಟ್ ಪ್ರಕಟಿಸಿ SSLC ಪರೀಕ್ಷೆಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳೇ ಚೂಣಿಯಲ್ಲಿದ್ದು, ಈ ಬಾರಿ ಶೇ. 73.7ರಷ್ಟು ಫಲಿತಾಂಶ ಬಂದಿದೆ. 1.8ರಷ್ಟು ಫಲಿತಾಂಶ ಹೆಚ್ಚಳವಾಗಿದೆಂದು ಮಾಹಿತಿ ನೀಡಿದ್ದರು.

ಜಿಲ್ಲಾವಾರು ಪಟ್ಟಿ

 

ಫಲಿತಾಂಶದ ಶೇಖಡವಾರದಲ್ಲಿ ಯಾದಗೀರಿ ಕೊನೆ ಸ್ಥಾನದಲ್ಲಿದ್ದು, ಹಾಸನ ಪ್ರಥಮ ಸ್ಥಾನಗಳಿಸಿದೆ. ಕಲಬುರಗಿ 30ನೇ ಸ್ಥಾನದಲ್ಲಿದ್ದು, ರಾಯಚೂರು 33ನೇ ಸ್ಥಾನಕ್ಕೆ ಜಾರಿದೆ.

ಮಾರ್ಚ್​ 21 ರಿಂದ ಏಪ್ರಿಲ್​ 4 ರವರೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆದಿತ್ತು.  34 ಶೈಕ್ಷಣಿಕ ಜಿಲ್ಲೆಗಳ 2,847 ಪರೀಕ್ಷಾ ಕೇಂದ್ರಗಳಲ್ಲಿ 4 ಸಾವಿರದ ಆರುನೂರ ಐವತ್ತೊಂದು ವಿಕಲಚೇತನ ವಿದ್ಯಾರ್ಥಿಗಳು ಸೇರಿ 8 ಲಕ್ಷದ 41 ಸಾವಿರದ 666 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here