ಉತ್ತರ ಪ್ರದೇಶ: ಹತ್ಯೆ ಪ್ರಕರಣವೊಂದರ ವಿಚಾರಣಾಧೀನ ಖೈದಿಯನ್ನು ಕೋರ್ಟ್ ನಲ್ಲಿ ಜಡ್ಜ್ ಎದುರೇ ಗುಂಡಿಕ್ಕಿ ಹತ್ಯೆ ಮಾಡಲಾದ ಘಟನೆ ಉತ್ತರ ಪ್ರದೇಶದ ಬಿಜನೌರ್ ನಲ್ಲಿ ಮಂಗಳವಾರ ನಡೆದಿದೆ. ಘಟನೆಯಲ್ಲಿ ಖೈದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇತರೆ ಇಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ನಂತರ ಮೂವರು ದಾಳಿಕೋರರನ್ನು ಪೊಲೀಸರು ಬಂಧಿಸಿದ್ದಾರೆ. ಗಾಯಗೊಂಡ ನ್ಯಾಯಾಲಯ ಮೊಹರಿರ್ ಮನೀಶ್ ಅವರನ್ನು ಮೀರತ್‌ಗೆ ಚಿಕಿತ್ಸೆಗಾಗಿ ದಾಖಲಿಸಿಲಾಗಿದೆ. ಸ್ಥಳದಲ್ಲೇ ಸಿಕ್ಕಿಬಿದ್ದ ಆರೋಪಿ ಅಪ್ರಾಪ್ತ ವಯಸ್ಕ ಎಂದು ಹೇಳಲಾಗುತ್ತಿದ್ದು, ಬಿಜ್ನೋರ್‌ನ ದಿವಂಗತ ಬಿಎಸ್‌ಪಿ ನಾಯಕ ಹಾಜಿ ಎಹ್ಸಾನ್ ಅವರ ಪುತ್ರ ಎಂದು ಗುರುತಿಸಲಾಗಿದ್ದು, ತನ್ನ ತಂದೆಯ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಅವನು ತನ್ನ ಇಬ್ಬರು ಸಹಚರರೊಂದಿಗೆ ಈ ಘಟನೆಯನ್ನು ನಡೆಸಿದ್ದಾನೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಈ ಘಟನೆಯ ನಂತರ, ನ್ಯಾಯಾಲಯದಲ್ಲಿ ಹಾಜರಿದ್ದ ಎಲ್ಲ ಜನರು ತಮ್ಮ ಪ್ರಾಣ ಉಳಿಸಲು ಓಡಿಹೋಗಬೇಕಾಯಿತು. ಇಡೀ ಪ್ರದೇಶದಲ್ಲಿ ಕೋಲಾಹಲ ಉಂಟಾಯಿತು.
28 ರಂದು ಬಿಜ್ನೋರ್‌ನ ನಜೀಬಾಬಾದ್ ಪಟ್ಟಣದಲ್ಲಿ ಗುಂಡು ಹಾರಿಸಿ ಬಹುಜನ ಸಮಾಜ ಪಕ್ಷದ ನಾಯಕ ಹಾಜಿ ಎಹ್ಸಾನ್ ಮತ್ತು ಅವರ ಸೋದರಳಿಯ ಶಾದಾಬ್ ಕೊಲ್ಲಲ್ಪಟ್ಟಿದ ಪ್ರತಿಕಾರವಾಗಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.