ಆಳಂದ ತಾಲ್ಲೂಕಿನಲ್ಲಿ ಸುಭಾಷ್ ಗುತ್ತೇದಾರ ಅವರಿಂದ ವಿವಿಧ ಕಾಮಗಾರಿಕ್ಕೆಗೆ ಚಾಲನೆ

0
51

ಆಳಂದ: ತಾಲೂಕಿನ ಹಡಲಗಿ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ೨೦೧೯-೨೦ ಸಾಲಿನ ಸಾಮಾಜಿಕ ವಲಯದ ಸಾಮಾನ್ಯ ಅನುದಾನದಲ್ಲಿ ೨೦ ಲಕ್ಷ ರೂ ವೆಚ್ಚದ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ೨ ಕೋಣೆಗಳ ನಿರ್ಮಾಣ ಕಾಮಗಾರಿಗೆ ಶಂಕು ಸ್ಥಾಪನೆ ನೇರವೇರಿಸಿ ಮಾತನಾಡಿದರು.

ದೇಶದ ಭವಿಷ್ಯವು ತರಗತಿಯ ಕೋಣೆಗಳಲ್ಲಿ ಅಡಕವಾಗಿದೆ ಅದಕ್ಕಾಗಿ ಶಿಕ್ಷಕರು ತಮ್ಮ ಸಾಮರ್ಥ್ಯವನ್ನು ಧಾರೆಯೆರೆದು ಮಕ್ಕಳಲ್ಲಿನ ಜ್ಷಾನವನ್ನು ಜಗತ್ತಿಗೆ ಪರಿಚಯಿಸಬೇಕು ಈ ನಿಟ್ಟಿನಲ್ಲಿ ಸರ್ಕಾರವು ಶಾಲೆಗಳ ಮೂಲ ಸೌಕರ್ಯಕ್ಕಾಗಿ ಹೆಚ್ಚಿನ ಅನುದಾನ ಒದಗಿಸುತ್ತಿದೆ ಎಂದರು.

Contact Your\'s Advertisement; 9902492681

ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರಪ್ಪ ನೇಡರಗಿ ಪ್ರಾಸ್ತಾವಿಕ ಮಾತನಾಡಿ, ಶಾಸಕರ ಪರಿಶ್ರಮದಿಂದ ತಾಲೂಕಿನಲ್ಲಿ ಹೆಚ್ಚು ಶಾಲಾ ಕೋಣೆಗಳು ಮಂಜೂರಾಗಿವೆ. ಶಿಕ್ಷಕರ ಕೊರತೆ ನಿಗಿಸುವಲ್ಲಿಯೂ ಅವರು ಶ್ರಮಿಸುತ್ತಿದ್ದಾರೆ ಅದಕ್ಕಾಗಿ ಸರ್ಕಾರದ ಮೇಲೆ ಒತ್ತಡ ತಂದು ೨೦೦ ಜನ ಅತಿಥಿ ಶಿಕ್ಷಕರು ನೇಮಕವಾಗುವಂತೆ ಮಾಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಗೆ ಜಮೀನು ನೀಡಿದ ಭೂದಾನಿ ಸಿದ್ದಾರಾಮ ಭೈರಾಮಡಗಿ, ತಾ.ಪಂ ಸದಸ್ಯ ಸಾತಲಿಂಗಯ್ಯ ಮಠಪತಿ, ಸತೀಶ್ ಕುಲಕರ್ಣಿ, ಶ್ರಾವಣಕುಮಾರ ತಮ್ಮನ, ಚಂದ್ರಕಾಂತ ಅತನೂರ, ಶಿವಾನಂದ ಜೋಗನ, ಯಲ್ಲಾಲಿಂಗ ಕಲಾಲ, ಚಂದ್ರಕಾಂತ ಸಾಣಕ, ಮಲ್ಲಿನಾಥ ಹಳ್ಳೆ ಅಧ್ಯಕ್ಷತೆ ವಹಿಸಿದ್ದರೆ, ಸಾನಿಧ್ಯವನ್ನು ಶಾಂತೇಶ್ವರ ಮಠದ ಶಾಂತಬಸವ ಶಿವಾಚಾರ್ಯರು ವಹಿಸಿದ್ದರು.

ಆಳಂದ ತಾಲೂಕಿನ ಜಮಗಾ (ಆರ್) ತಾಂಡಾದಲ್ಲಿನ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಸುಭಾಷ್ ಆರ್ ಗುತ್ತೇದಾರ ಚಾಲನೆ ನೀಡಿದರು. ಮಲ್ಲಿನಾಥ ಕಂದಗೂಳೆ ಶ್ರೀನಾಥ ಮೂಲಗೆ, ಅಧಿಕಾರಿ ಈರಣ್ಣ ಸೇರಿದಂತೆ ಇತರರು ಇದ್ದರು.

ತಾಲೂಕಿನ ಜಮಗಾ (ಆರ್) ತಾಂಡಾದಲ್ಲಿ ಲೋಕೋಪಯೋಗಿ ಇಲಾಖೆಯ ಎಸ್‌ಸಿಪಿ ಯೋಜನೆಯ ೫ ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಸುಭಾಷ್ ಆರ್ ಗುತ್ತೇದಾರ ಚಾಲನೆ ನೀಡಿದರು. ಬಳಿಕ ಮಾತನಾಡಿ ಗ್ರಾಮಗಳಲ್ಲಿ ಸಂಪರ್ಕ ವ್ಯವಸ್ಥೆ ಬಲಪಡಿಸಿಕೊಳ್ಳಲು ನೀಲನಕ್ಷೆ ರೂಪಿಸಿಕೊಳ್ಳಲಾಗುತ್ತಿದೆ ಎಂದರು.

ಸಾರಿಗೆ, ಶಿಕ್ಷಣ, ಆರೋಗ್ಯ, ವಸತಿ ಸಮಾಜದ ಮೂಲಭೂತ ಅವಶ್ಯಕತೆಗಳಾಗಿವೆ ಅವುಗಳನ್ನು ಕ್ಷೇತ್ರದ ಜನತೆಗೆ ತಲುಪಿಸಲು ಅಧಿಕಾರಿಗೆ ಸೂಚಿಸಿದ್ದೇನೆ. ನಿಗದಿತ ಅವಧಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಲಭ್ಯವಾಗುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ರಾಜ್ಯ ಸರ್ಕಾರ ಯಡಿಯೂರಪ್ಪವನರ ನೇತೃತ್ವದಲ್ಲಿ ಸುಭದ್ರವಾಗಿದೆ. ಹೆಚ್ಚಿನ ಅನುದಾನವನ್ನು ತಂದು ಗ್ರಾಮಗಳ ಅಭಿವೃದ್ಧಿಗೆ ಪ್ರಯತ್ನಿಸುತ್ತೆನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಂಡಲ ಬಿಜೆಪಿ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ, ಮುಖಂಡರಾದ ಶ್ರೀನಾಥ ಮೂಲಗೆ, ಬಾಬು ಮೂಲಗೆ, ಪಂಡಿತ ಪವಾರ, ರಮೇಶ ಪವಾರ, ಶಿವಾಜಿ ರಾಠೋಡ, ಲಕ್ಮಣ ಚವ್ಹಾಣ, ಎಇಇ ಈರಣ್ಣ ಸೇರಿದಂತೆ ಇತರರು ಇದ್ದರು.

ಜಗತ್ತಿನ ಪ್ರತಿ ಶಾಲೆಯ ತರಗತಿಯ ಕೋಣೆಗಳು ಜೀವಂತ ದೇವಾಲಯಗಳಿದ್ದಂತೆ ಅವುಗಳನ್ನು ಅತ್ಯಂತ ಜವಾಬ್ದಾರಿಯಿಂದ, ಗೌರವದಿಂದ ಕಾಪಾಡುಕೊಳ್ಳುವುದು ಸಮಾಜದಲ್ಲಿರುವವರ ಕರ್ತವ್ಯವಾಗಿದೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಅಭಿಪ್ರಾಯಪಟ್ಟರು.

ಆಳಂದ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಪಣ ತೊಟ್ಟಿದ್ದು ತಮ್ಮ ಅಧಿಕಾರವಧಿಯಲ್ಲಿ ತಾಲೂಕಿನ ಮೂಲೆ ಮೂಲೆಯಲ್ಲಿ ಅಭಿವೃದ್ಧಿ ಕೈಗೊಳ್ಳುವುದು ತಮ್ಮ ಆದ್ಯತೆಯಾಗಿದೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಹೇಳಿದರು. ಶುಕ್ರವಾರ ತಾಲೂಕಿನ ಹಡಲಗಿ ಗ್ರಾಮದಲ್ಲಿ ಲೋಕೊಪಯೋಗಿ ಇಲಾಖೆಯ ಲೆಕ್ಕಶೀರ್ಷಿಕೆಯ ೩೦೫೪ ರ ಅನುದಾನದಲ್ಲಿ ಗ್ರಾಮದ ಮಾದಿಗ ಓಣಿಯಲ್ಲಿ ೧೫ ಲಕ್ಷ ರೂ.ಗಳ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಸರ್ಕಾರದ ಯೋಜನೆಗಳು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ರಾಜ್ಯ ಸರ್ಕಾರದಲ್ಲಿ ನಮ್ಮದೇ ಪಕ್ಷದ ಸರ್ಕಾರ ಅಧಿಕಾರದಲ್ಲಿರುವುದರಿಂದ ಹೆಚ್ಚಿನ ಅನುದಾನದ ಭರವಸೆ ಇಟ್ಟುಕೊಂಡಿದ್ದೇನೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಸತೀಶ್ ಕುಲಕರ್ಣಿ, ಶ್ರಾವಣಕುಮಾರ ತಮ್ಮನ, ಚಂದ್ರಕಾಂತ ಅತನೂರ, ಶಿವಾನಂದ ಜೋಗನ, ಯಲ್ಲಾಲಿಂಗ ಕಲಾಲ, ಚಂದ್ರಕಾಂತ ಸಾಣಕ, ಜೆಇ ಚಂದ್ರಕಾಂತ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here