ರಾಷ್ಟ್ರ ಕವಿ ಕುವೆಂಪು ಯುಗದ ಕವಿ, ಜಗದ ಕವಿ : ಸತ್ಯಂಪೇಟೆ

0
139

ಕಲಬುರಗಿ: ಆದಿ ಅನಾದಿ ಕಾಲದಿಂದ ಬಂದಿದ್ದ ಅಜ್ಞಾನ, ಮತ ಮೌಢ್ಯ ಸಂಪ್ರದಾಯಗಳ ವಿರುದ್ಧ ತಮ್ಮ ಬರವಣಿಗೆ ಮೂಲಕ ಸಮರ ಸಾರಿದ್ದ ರಾಷ್ಟ್ರಕವಿ ಕುವೆಂಪು ಅವರ ಬದುಕು ಮತ್ತು ಬರಹ ಅನುಕರಣೀಯ ಎಂದು ಪತ್ರಕರ್ತ-ಸಾಹಿತಿ ಶಿವರಂಜನ್ ಸತ್ಯಂಪೇಟೆ ಅಭಿಪ್ರಾಯಪಟ್ಟರು.

ಎಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಪರ ಸಂಘಟನೆಗಳ ಒಕ್ಕೂಟ) ವತಿಯಿಂದ ಇಲ್ಲಿನ ಗೋಕುಲ ನಗರದ ಬಸವ ಕಾನ್ವೆಂಟ್ ಶಾಲೆಯಲ್ಲಿ ವಿಶ್ವ ಮಾನವ ರಾಷ್ಟ್ರಕವಿ ಕುವೆಂಪು ಅವರ 115ನೇ ಜನ್ಮ ದಿನದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಾಹಿತಿಗಳಿಗೆ ಕುವೆಂಪು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಕುವೆಂಪು ಅವರ ಬದುಕು ಬರಹ ಕುರಿತು ಮಾತನಾಡಿದ ಅವರು, ಕುವೆಂಪು ಅವರು ಯುವಕರಿಗೆ ನಿರಂಕುಶಮತಿಗಳಾಗಿ ಎಂದು ಹೇಳುವ ಮೂಲಕ ವಿಚಾರ ಕ್ರಾಂತಿಗೆ ಆಹ್ವಾನ ನೀಡಿದರು ಎಂದು ತಿಳಿಸಿದರು.

Contact Your\'s Advertisement; 9902492681

ಮುಖ್ಯ ಅತಿಥಿಯಾಗಿದ್ದ ಬ್ರಹ್ಮಪುರ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಸಾವಿತ್ರಿ ಪಿ. ತಾವರಖೇಡ ಮಾತನಾಡಿ, ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳಸಿಕೊಳ್ಳಬೇಕು ಎಂದು ಕರೆ ನೀಡಿದರು. ಮಹಾನಗರ ಪಾಲಿಕೆ ಸದಸ್ಯ ಪ್ರಭುಲಿಂಗ ಹಾದಿಮನಿ, ಜೆಸ್ಕಾಂ ಇಲಾಖೆ ಮಹಿಳಾ ಪೊಲೀಸ್ ಪೇದೆ ಸವಿತಾ ಪೂಜಾರಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಇದೇವೇಳೆಯಲ್ಲಿ ಮಾಧ್ತಮ ಕ್ಷೇತ್ರದ ಸಾಹಿತಿಗಳಾದ ಡಾ. ಶಿವರಾಮ ಅಸುಂಡಿ ಹಾಗೂ ಸಂಗಮನಾಥ ರೇವತಗಾಂವ ಅವರಿಗೆ ಕುವೆಂಪು ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಚಾಲಕ ಹಾಗೂ ಜಿಲ್ಲಾ ಅಧ್ಯಕ್ಷ ಮಂಜುನಾಥ ನಾಲವಾರಕರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಭಾರತಿ ನಿರೂಪಿಸಿದರು. ಸುಷ್ಮಾ ಸ್ವಾಗತಿಸಿದರು, ಜಿಲ್ಲಾ ಕಾರ್ಯಾಧ್ಯಕ್ಷರಾದ ಪ್ರಹ್ಲಾದ ಹಡಗೀಲಕರ್, ನಗರಧ್ಯಕ್ಷ ಚರಣರಾಜ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಜು ಮಾಳಾ ಕಪನೂರು, ಜಿಲ್ಲಾ ಉಪಾಧ್ಯಕ್ಷ ಪ್ರದೀಪ ಬಾಚನಳ್ಳಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here