ಮರಾಠಿ ಭಾಷಿಕರಾಗಿ ಕನ್ನಡದಲ್ಲಿ ಕೃತಿ ರಚಿಸಿದ್ದು ಅಮೋಘವಾಗಿದೆ: ಡಿವಯ್‌ಎಸ್‌ಪಿ ಶಿವನಗೌಡ ಪಾಟೀಲ

0
238

ಸುರಪುರ: ಕವಯಿತ್ರಿ ಪ್ರತಿಭಾ ದೇವಿದಾಸ ಅವರು ಮಾತೃ ಭಾಷೆ ಮರಾಠಿಯಾಗಿದ್ದರು ಕನ್ನಡ ಸಾಹಿತ್ಯ ಮತ್ತು ಭಾಷೆಯ ಮೇಲೆ ಅಭಿಮಾನ ಹೊಂದಿ ಕನ್ನಡ ಭಾಷೆಯಲ್ಲಿ ಕೃತಿ ರಚಿಸಿದ್ದು ಅಮೋಘವಾಗಿದೆ ಎಂದು ಸುರಪುರ ವಿಭಾಗದ ಡಿವಾಯ್‌ಎಸ್‌ಪಿ ಶಿವನಗೌಡ ಪಾಟೀಲ ಮಾತನಾಡಿದರು.

ನಗರದ ರಂಗಂಪೇಟೆಯ ಅಂಬಾ ಭವಾನಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಅರಳಿದ ಭಾವಗಳು ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿ,ಕನ್ನಡ ಭಾಷೆಯ ಮೇಲೆ ಅಪಾರವಾದ ಪ್ರೇಮ ಹೊಂದಿರುವ ಪ್ರತಿಭಾ ಮೇಡಂ ಅವರು ಇದೇ ರೀತಿಯಲ್ಲಿ ಮರಾಠಿ ಮತ್ತು ಹಿಂದಿಯಲ್ಲಿರುವ ಒಳ್ಳೊಳ್ಳೆ ಕೃತಿಗಳನ್ನು ಕನ್ನಡಕ್ಕೆ ತರ್ಜುಮೆಗೊಳಿಸಿ ಓದುಗರಿಗೆ ನೀಡುವ ಮೂಲಕ ಇನ್ನೂ ಉತ್ತಮ ಕೃತಿ ರಚಿಸುವಂತಾಗಲಿ ಎಂದರು.

Contact Your\'s Advertisement; 9902492681

ಕವಯಿತ್ರಿ ಪ್ರತಿಭಾ ಅವರು ಮಾತನಾಡಿ,ನನಗೆ ಕನ್ನಡ ಭಾಷೆಯ ಮೇಲೆ ಅಪಾರವಾದ ಅಭಿಮಾನ ಮತ್ತು ಪ್ರೀತಿಯಿದೆ.ಕನ್ನಡ ಸಾಹಿತ್ಯವು ಎಂಟು ಜ್ಞಾನಪೀಠ ಪಡೆದ ದೇಶದ ಬಹುದೊಡ್ಡ ಭಾಷೆಯಾಗಿದ್ದು,ಈ ಭಾಷೆಯಲ್ಲಿನ ಇನ್ನೂ ಅನೇಕ ಕೃತಿಗಳನ್ನು ಓದಬೇಕಿದೆ,ಅಲ್ಲದೆ ಶಿವನಗೌಡ ಪಾಟೀಲ ಸರ್ ಅವರು ಹೇಳಿದಂತೆ ಮರಾಠಿ ಮತ್ತು ಹಿಂದಿಯಲ್ಲಿನ ಉತ್ತಮವಾದ ಕೃತಿಗಳನ್ನು ಕನ್ನಡ ಭಾಷೆಗೆ ತರುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.ಇದೇ ಸಂದರ್ಭದಲ್ಲಿ ಕಲಬುರಗಿ ಭಾವಸಾರ ಕ್ಷತ್ರೀಯ ಸಮಾಜದ ಅಧ್ಯಕ್ಷರಾದ ರಮೇಶ ನವಲೆ,ಜ್ಯೋತಿ ಸಂ.ಅಂಬುರೆಯವರರು ಮಾತನಾಡಿದರು.

ವೇದಿಕೆ ಮೇಲಿದ್ದ ಅರುಣಕುಮಾರ ಅಂಬಾಜಿರಾವ್ ಪುಲಸೆ ಅಧ್ಯಕ್ಷತೆ ವಹಿಸಿದ್ದರು,ವಿಜಯಕುಮಾರ ಹಂಚಾಟೆ,ಪ್ರಭಾ ಕಿ.ರಂಗದಳ,ವೀಣಾ ತಿ.ಮಾಳದಕರ್,ಸ್ವಾಮಿನಾಥ ಅಂಬುರೆ ಇದ್ದರು. ಗುಂಡೆರಾವ್ ಅಂಬುರೆ ನಿರೂಪಿಸಿದರು, ರಾಜು ಪುಲಸೆ ಸ್ವಾಗತಿಸಿದರು,ಜಯಶ್ರೀ ಮಾ.ಘನಾತೆ ಪ್ರಾಸ್ತಾವಿಕವಾಗಿ ಮಾತನಾಡಿದರು,ಶ್ರೀನಿವಾಸ ದಾಯಪುಲೆ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here