ಭೋಪಾಲ್: ದೇಶದಲ್ಲಿ ಬುರ್ಕಾ ಹಾಗೂ ಗುಂಘಟ್ ಎರಡ ಮೇಲೂ ನಿಷೇಧ ಹೇರಿದರೆ ನನಗೆ ಖುಷಿಯಾಗುತ್ತದೆ ಎಂದು ಕವಿ, ಸಾಹಿತಿ ಜಾವೇದ್ ಅಖ್ತರ್ ಶಿವಸೇನೆ ನೀಡಿದ ಹೇಳಿಕೆಗೆ ಪ್ರತಿಕ್ರಿಯೆಸಿ ಮಾತನಾಡಿದ್ದರು.
ಅವರು ಮಾತನಾಡುತ್ತ ದೇಶದಲ್ಲಿ ಬುರ್ಕಾ ನಿಷೇಧಕ್ಕೆ ನನ್ನಿಂದ ಯಾವುದೇ ಆಕ್ಷೇಪವಿಲ್ಲ. ಬುರ್ಕಾವನ್ನು ಬ್ಯಾನ್ ಮಾಡುವುದೇ ಆದರೆ ರಾಜಸ್ಥಾನದಲ್ಲಿ ಹಿಂದೂ ಮಹಿಳೆಯರು ಧರಿಸುವ ಗುಂಘಟ್ ಕೂಡ ನಿಷೇಧಿಸಬೇಕು ಎಂದು ಹೇಳುತಾ, ರಾಜಸ್ಥಾನದಲ್ಲಿ ನಡೆಯುವ ಲೋಕಸಭಾ ಮತದಾನದ ಕೊನೆ ಹಂತಕ್ಕೂ ಮುನ್ನ ಗುಂಘಟ್ ಮೇಲೂ ಸರ್ಕಾರ ನಿಷೇಧ ಹೇರುವ ಕುರಿತು ಹೇಳಿಕೆ ನೀಡುತ್ತಾ ಎಂದು ಈ ಸಂದರ್ಭದಲ್ಲಿ ಪ್ರಶ್ನಿಸಿದರು.
ಭದ್ರತೆ ದೃಷ್ಠಿಯಿಂದ ಶ್ರೀಲಂಕಾದಲ್ಲಿ ಮುಖ ಮುಚ್ಚಿಕೊಳ್ಳದಂತಹ ಕಾನೂನು ಜಾರಿಗೆ ತರಲಾಗುತ್ತಿದೆ. ಆದರೆ ಇರಾಕ್ ಅತ್ಯಂತ ಸಂಪ್ರದಾಯಬದ್ಧ ಮುಸ್ಲಿಂ ದೇಶವಾಗಿದೆ. ಆದರೆ ಅಲ್ಲಿನ ಮಹಿಳೆಯರು ತಮ್ಮ ಮುಖವನ್ನು ಮುಚ್ಚುವುದಿಲ್ಲ ಎಂದು ಹೇಳಿದ್ದರು.