ಜನವರಿ 12 ರಂದು ಕಲಬುರಗಿಯಲ್ಲಿ ‘ಹರಟೆ’ ಕಾರ್ಯಕ್ರಮ

0
98

ಕಲಬುರಗಿ: ಈ ಭಾಗದ ಜನತೆಗೆ ಹರಟೆ ಮೂಲಕ ನಗಿಸಲು ಇಲ್ಲಿನ ಸಹೃದಯಿ ಸ್ನೇಹ ಬಳಗದ ವತಿಯಿಂದ ಜನವರಿ ೧೨ ರಂದು ಸಾಯಂಕಾಲ ೫ ಗಂಟೆಗೆ ‘ನೆಮ್ಮದಿ ಜೀವನಕ್ಕೆ ಲವ್ ಮ್ಯಾರೇಜೋ…? ಅರೆಂಜ್ ಮ್ಯಾರೇಜೋ…? ಎಂಬ ವಿಷಯವನ್ನಿಟ್ಟುಕೊಂಡು ೨ ಗಂಟೆಗಳ ಕಾಲ ಹರಟೆ ಕಾರ್ಯಕ್ರಮಕ್ಕಾಗಿ ನಗರದ ಸಂಗಮೇಶ್ವರ ಕಾಲೋನಿಯ ಸಂಗಮೇಶ್ವರ ಮಹಿಳಾ ಮಂಡಳದ ಆವರಣದಲ್ಲಿನ ವೇದಿಕೆ ಸಿದ್ಧಪಡಿಸಲಾಗಿದೆ ಎಂದು ಬಳಗದ ಪ್ರಮುಖರಾದ ವಿಜಯಕುಮಾರ ತೇಗಲತಿಪ್ಪಿ, ಸುರೇಶ ಬಡಿಗೇರ, ನಾಗಲಿಂಗಯ್ಯ ಮಠಪತಿ, ಶಿವರಂಜನ್ ಸತ್ಯಂಪೇಟೆ, ಹಣಮಂತರಾಯ ಅಟ್ಟೂರ, ರಾಜಕುಮಾರ ಉದನೂರ, ಅಣವೀರಯ್ಯ ಪ್ಯಾಟಿಮನಿ, ಸವಿತಾ ನಾಸಿ, ಶರಣರಾಜ್ ಛಪ್ಪರಬಂದಿ, ರವಿ ಶಹಾಪುರಕರ್, ಸಂಗಮೇಶ ಶಾಸ್ತ್ರೀ ಮಾಶಾಳ, ಶಿವಾನಂದ ಮಠಪತಿ, ಗುಂಡಣ್ಣ ಡಿಗ್ಗಿ ಜಂಟಿಯಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಥಳೀಯವಾಗಿರುವ ಮಾತುಗಾರರು, ಕಲಾವಿದರನ್ನೇ ಇದಕ್ಕಾಗಿ ಆಯ್ಕೆ ಮಾಡಿರೋದು ವಿಶೇಷವಾಗಿದ್ದು, ಹರಟೆ ಎಂದರೆ ಕೇವಲ ಹಾಸ್ಯವಲ್ಲ, ಚಿಂತನೆಗಳಿರುವ ಮಾತು. ಅಂಥ ಮಾತುಗಳು ಮಂಥಿಸಿ ಬರುವ ಜ್ಞಾನವೂ ಹರಟೆ ಮೂಲಕ ಹೊರ ಬಂದರೆ ಅಲ್ಲಿದ್ದವರೆಲ್ಲರೂ ಅದನ್ನು ಸ್ವೀಕರಿಸಿ ಬದುಕಿಗೆ ಅನ್ವಯಿಸಿಕೊಳ್ಳಬಹುದು ಎಂದು ಅವರು ವಿವರಿಸಿದ್ದಾರೆ.

Contact Your\'s Advertisement; 9902492681

ಇಂದಿನ ಧಾವಂತದ ಬದುಕಲ್ಲಿ ಎಲ್ಲರೂ ಸೇರಿ ನಗುವುದು, ಹರಟೆ ಹೊಡೆಯುವುದೂ ಕಮ್ಮಿಯಾಗುತ್ತಿದೆ. ಹರಟೆ ಕಾರ್ಯಕ್ರಮದ ಮೂಲಕ ಕಲಬುರಗಿಯಲ್ಲಿ ಹೊಸ ಅಲೆ ಹುಟ್ಟು ಹಾಕುವುದೇ ತಮ್ಮ ಉದ್ದೇಶವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಬಳಗದ ಪ್ರಮುಖರು,ಸಂಗಮೇಶ್ವರ ಮಹಿಳಾ ಮಂಡಳದ ಸಹಯೋಗದೊಂದಿಗೆ ಸಹೃದಯಿ ಸ್ನೇಹ ಬಳಗದ ಆಶ್ರಯದಲ್ಲಿ ಆಯೋಜಿಸಿರುವ ಹರಟೆ ಕಾರ್ಯಕ್ರಮದಲ್ಲಿ ‘ಲವ್ ಮ್ಯಾರೇಜ್‌ನಿಂದ ಉತ್ತಮ ಬದುಕು ಎಂಬ ವಿಷಯವಾಗಿ ರಾಜಕುಮಾರ ಉದನೂರ, ಮಧುಮತಿ ಪಾಟೀಲ, ಗಣೇಶ ಪಾಟೀಲ, ಅರೇಂಜ್ ಮ್ಯಾರೇಜ್ ಪರವಾಗಿ ಶೋಭಾ ರಂಜೋಳಕರ್, ಗುಂಡಣ್ಣ ಡಿಗ್ಗಿ, ಹಣಮಂತ ಖಜೂರಿ ಅವರ ಮಧ್ಯೆ ಜುಗಲ್ ಬಂದಿ ನಡೆಯಲಿದೆ.

ಹಾಸ್ಯ ಸಾಹಿತಿ ಪ್ರೊ.ಹೇಮಂತ ಕೊಲ್ಹಾಪುರೆ ಅವರ ಸಾರಥ್ಯದಲ್ಲಿ ಈ ಹಾಸ್ಯದ ಹರಟೆ ನಡೆಯಲಿದ್ದು, ಶ್ರೀನಿವಾಸ ಸರಡಗಿ ಸಂಸ್ಥಾನ ಹಿರೇಮಠದ ಪೂಜ್ಯ ಡಾ.ರೇವಣಸಿದ್ಧ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದಾರೆ. ಕೆ.ಎಸ್.ಆರ್.ಪಿ. ಕಮಾಂಡೆಂಟ್ ಬಸವರಾಜ ಜಿಳ್ಳೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಜೆಸ್ಕಾಂನ ಪ್ರಧಾನ ವ್ಯವಸ್ಥಾಪಕಿ ಪ್ರಮೀಳಾ ಎಂ.ಕೆ., ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಅರುಣಕುಮಾರ ಕಿಣ್ಣಿ, ಸಹೃದಯಿ ಸ್ನೇಹ ಬಳಗದ ಸದಸ್ಯರಾದ ಅಣವೀರಯ್ಯ ಪ್ಯಾಟಿಮನಿ, ಸವಿತಾ ನಾಸಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಂಗಮೇಶ್ವರ ಮಹಿಳಾ ಮಂಡಳದ ಹಿರಿಯ ಸದಸ್ಯೆ ಸುನಂದಾ ಹೊನ್ನರಾವ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರೇಕ್ಷಕರಿಗೆ ಪ್ರವೇಶ ಉಚಿತವಾಗಿದ್ದು, ದಶಕದ ನಂತರ ಕಲಬುರಗಿಯಲ್ಲಿ ಮತ್ತೊಮೆ ಹರಟೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಕಲಬುರಗಿ ಜನತೆಗೆ ಸಿಗಲಿದೆ. ಬೆಂಗಳೂರಿನ ಟಿ.ವಿ. ಮಾಧ್ಯಮಕ್ಕೆ ಸೀಮಿತವಾದ ‘ಹರಟೆ’ ಕಾರ್ಯಕ್ರಮ ಸಹೃದಯಿ ಸ್ನೇಹ ಬಳಗದ ಪ್ರಯತ್ನದೊಂದಿಗೆ ಸ್ಥಳೀಯ ಪ್ರಸಿದ್ಧ ಕಲಾವಿದರಿಂದ ರೂಪುಗೊಂಡ ಕಾರ್ಯಕ್ರಮ ಇದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಮೊ.೯೯೪೫೫ ೭೧೦೩೬ – ೯೪೪೯೭ ೩೨೨೯೭ ಗೆ ಸಂಪರ್ಕಿಸಲು ಕೋರಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here