ಸುರಪುರ: ಇತ್ತೀಚೆಗೆ ನಿಧನರಾದ ಉಡುಪಿ ಶ್ರೀಕೃಷ್ಣ ಮಠದ ವಿಶ್ವೇಶತೀರ್ಥ ಪೇಜಾವರಶ್ರೀ ಹಾಗು ಕನ್ನಡ ವಿದ್ವಾಂಸ ಹಾಗು ಸಂಶೋಧಕ ಸಾಹಿತಿ ಡಾ: ಎಂ.ಚಿದಾನಂದಮೂರ್ತಿ ಮತ್ತು ಸೋಮವಾರ ಬೆಳಿಗ್ಗೆ ನಿಧನರಾದ ಸ್ಥಳಿಯ ಶಾಸಕ ನರಸಿಂಹ ನಾಯಕ (ರಾಜುಗೌಡ)ರ ತಾಯಿ ತಿಮ್ಮಮ್ಮ ಶಂಭನಗೌಡ ನಾಯಕ ಅವರ ನಿಧನಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗು ಕನ್ನಡ ಸಾಹಿತ್ಯ ಸಂಘ ಸುರಪುರ ವತಿಯಿಂದ ಅಗಲಿದ ತ್ರಿಮೂರ್ತಿಗಳಿಗೆ ಸಂತಾಪ ಸೂಚಿಸಿ ಎರಡು ನಿಮಿಷಗಳ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಭೆಯಲ್ಲಿದ್ದ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ,ಕಸಾಪ ತಾಲೂಕು ಅಧ್ಯಕ್ಷ ಶ್ರೀನಿವಾಸ ಜಾಲವಾದಿ, ಬಸವರಾಜ ಜಮದ್ರಖಾನಿ,ಬಸವರಾಜಪ್ಪ ನಿಷ್ಠಿ ದೇಶಮುಖ,ಕೆ.ವೀರಪ್ಪ,ನಿಂಗಣ್ಣ ಚಿಂಚೋಡಿ,ಶ್ರೀಹರಿ ರಾವ್ ಆದವಾನಿ,ಬಸವರಾಜ ರುಮಾಲ, ಮಲ್ಲಿಕಾರ್ಜುನ ಸತ್ಯಂಪೇಟೆ,ಇಕ್ಬಾಲ್ ರಾಹಿ,ನಬಿಲಾಲ ಮಕಾಂದಾರ, ರಾಜಶೇಖರ ದೇಸಾಯಿ,ಗೋಪಣ್ಣ ಯಾದವ,ಕನಕಪ್ಪ ವಾಗಣಗೇರಿ,ಮುದ್ದಪ್ಪ ಅಪ್ಪಾಗೋಳ,ಬೀರಣ್ಣ ಆಲ್ದಾಳ,ಪಂಡೀತ ನಿಂಬೂರ,ಅನ್ವರ್ ಜಮಾದಾರ,ಜಯಲಲಿತಾ ಪಾಟೀಲ್,ಹಸೀನಾ ಬಾನು,ಹೆಚ್.ರಾಠೋಡ,ಸೋಮರಡ್ಡಿ ಮಂಗಿಹಾಳ,ದೇವು ಹೆಬ್ಬಾಳ,ಶಾಂತರಾಜ ಬಾರಿ, ಶ್ರೀಶೈಲ ಯಂಕಂಚಿ, ಲಕ್ಷ್ಮಣ ಗುತ್ತೇದಾರ, ವೆಂಕಟೇಶ ಗೌಡ,ಸಾಹೆಬಣ್ಣ ಇಟಗಿ,ಮೋನಪ್ಪ ಕಳಸದ್,ಶರಣಬಸಪ್ಪ ಯಳವಾರ, ಚನ್ನಬಸಪ್ಪ ಹೂಗಾರ,ನ್ಯಾಯವಾದಿ ಬಸವಲಿಂಗಪ್ಪ ಪಾಟೀಲ್ ಸೇರಿದಂತೆ ಅನೇಕರಿದ್ದರು.