ಸುರಪುರ: ಈಭಾಗದ ಶ್ರೀಶೈಲವೆಂದೆ ಖ್ಯಾತಿ ಪಡೆದಿರುವ ಮರಡಿ ಮಲ್ಲಿಕಾರ್ಜುನ ದೇವರ ಜಾತ್ರಾ ಮೊಹೊತ್ಸವ ಹಾಗೂ ಶ್ರೀಗಿರಿಮಠದ ಶ್ರೀ ಬಸವಲಿಂಗದೇವರು ಅವರ ಗುರುಪಟ್ಟಾಭಿಷೇಕ ಕಾರ್ಯಕ್ರಮವು ಮುಂಬರುವ ಫೆ.೨ ರಂದು ನಡೆಯಲಿದೆ ಎಂದು ಕಾರ್ಯಕ್ರಮದ ಸ್ವಾಗತ ಸಮಿತಿಯ ಅಧ್ಯಕ್ಷ ಹಾಗೂ ತಾಲೂಕ ವೀರಶೈವಲಿಂಗಾಯತ ಸಮಾಜಸ ಅಧ್ಯಕ್ಷ ಸುರೇಶ ಸಜ್ಜನ್ ಹೇಳಿದರು.
ತಾಲೂಕಿನ ಲಕ್ಷ್ಮೀಪುರದ ಶ್ರೀಗಿರಿಮಠದ ಆರ್ವಣದಲ್ಲಿ ಶ್ರೀ ಬಸವಲಿಂಗ ದೇವರ ಗುರು ಪಟ್ಟಾಧಿಕಾರ ಮಹೋತ್ಸವ ಹಾಗೂ ಉಜ್ಜಯಿನಿ ಹಾಗೂ ಶ್ರೀಸೈಲ್ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವದ ಮತ್ತು ಶ್ರೀ ಮಠದ ಜಾತ್ರಾ ಮಹಾರಥೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು ಗುರುಪಟ್ಟಾಭಿಷೇಕ ಕಾರ್ಯಕ್ರಮದ ನಿಮಿತ್ಯ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಜ.೨೭ ರಂದು ಶ್ರೀಶೈಲ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ, ಜ.೩೧ ರಂದು ಅಯ್ಯಾಚಾರ,ಲಿಂಗದೀಕ್ಷೆ ಹಾಗೂ ಶತಚಂಡಿ ಯಾಗದ ಪೂರ್ಣಾಹುತಿ ಕಾರ್ಯಕ್ರಮ ಹೇಮರೆಡ್ಡಿ ಮಲ್ಲಮ್ಮನವರ ಮಹಾಪೂರಾಣದ ಮಂಗಲ ಕಾರ್ಯಕ್ರಮ ಮತ್ತು ಫೆ.೧ ರಂದು ಲಕ್ಷ್ಮೀಪುರದ ಪ್ರಭುಲಿಂಗೇಶ್ವರ ದೇವಸ್ಥಾನದಿಂದ ಶ್ರೀಮಠದ ವರೆಗೆ ಶ್ರೀಸೈಲ ಮತ್ತು ಉಜ್ಜಯನಿ ಜಗದ್ಗುರುಗಳ ಅಡ್ಡಪಲಕ್ಕಿ ಉತ್ಸವ ಹಾಗೂ ಜನಜಾಗೃತಿ ಧರ್ಮಸಭೆಗಳು ನಡೆಯಲಿವೆ ಈ ಕಾರ್ಯಕ್ರಮದಲ್ಲಿ ಈ ಭಾಗದ ಅನೇಕ ಗಣ್ಯವ್ಯಕ್ತಿಗಳು ಹಾಗೂ ಶಾಸಕರು, ಮಾಜಿ ಮಂತ್ರಿಗಳು ಮತ್ತು ವಿವಿಧ ಮಠದ ಪೀಠಾಧಿಪತಿಗಳು ಬಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸೂಗುರೇಶ ವಾರದ, ಮಂಜುನಾಥ ಜಾಲಹಳ್ಳಿ, ಚನ್ನುದೇಸಾಯಿ, ಆನಂದ ಲಕ್ಷ್ಮೀಪುರ, ರಾಘವೇಂದ್ರ ಲಕ್ಷ್ಮೀಪುರ,ಜಗದೀಶ ಪಾಟೀಲ, ಚಂದ್ರು ಡೊಣ್ಣೂರ, ಮಲ್ಲುಹೂಗಾರ ಸೇರಿದಂತೆ ಇನ್ನಿತರರು ಇದ್ದರು.