ಕಲಬುರಗಿ: ತಾಲೂಕಿನ ಹಿರೇನಂದೂರಿನ ಶ್ರೀ ಗುರುಮಲಯಶಾಂತೇಶ್ವರರ ೧೦೭೮ನೇ ಜಾತ್ರಾ ಮಹೋತ್ಸವ ಅಂಗವಾಗಿ ೨೪ರಂದು ಪ್ರಾರಂಭಗೊಂಡಿದ್ದ ಶ್ರೀ ಗುರುಮಲಯ ಶಾಂತೇಶ್ವರರ ಪುರಾಣ ಮಂಗಲ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ಲಿಂಗಾಯತ ಶಾಸ್ತ್ರೀ ಕುಲಸಚಿವರು ಅಪ್ಪಾ ವಿವಿ ಡಾ.ಸುಧಾ ಆರ್.ಹಾಲಕಾಯಿ ಅವರುಗಳಿಗೆ ಮಲಯಶಾಂತಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಪ್ರಶಸ್ತಿ ಪ್ರಧಾನ ಮಾಡಿ ಆಶೀರ್ವಚನ ನೀಡಿದ ಸಾನಿಧ್ಯವಹಿಸಿದ ಪಾಳಾದ ಡಾ.ಶ್ರೀ ಗುರುಮೂರ್ತಿ ಶಿವಚಾರ್ಯರರು ಪ್ರಶಸ್ತಿಗಳು ಪ್ರಶಸ್ತಿ ಪಡೆದವರ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಮುಂದೆಯೂ ಸಮಾಜಕ್ಕೆ ತಮ್ಮ ಕೊಡುಗೆ ನಿರಂತರವಾಗಿ ಇರಲಿ ಎಂದು ಹೇಳಿದರು, ಸ್ಟೇಷನ ಬಬಲಾದ ಶ್ರೀಗಳು, ವೆಂಕಟಬೆನೂರ ಶ್ರೀಗಳು, ಮುತ್ತಿಗಿಶ್ರೀಗಳು ಆಶೀರ್ವಚನ ನೀಡಿದರು.
ಶ್ರೀ ಮಲಯಶಾಂತೇಶ್ವರ ತೋಪಕಟ್ಟಿ ಸಂಸ್ಥಾನ ಹಿರೇಮಠದ ಧರ್ಮಾಧಿಕಾರಿಗಳಾದ ಡಾ.ಗಂಗಾಧರ ಹಿರೇಮಠ ವೀರಶೈವ ಮಹಾಸಭಾ ಜಿಲ್ಲಾ ಯುವ ಘಟಕ, ಗೌರವಾಧ್ಯಕ್ಷ ಎಮ್.ಎಸ್.ಪಾಟೀಲ ನರಿಬೋಳ, ಡಾ.ರವೀಂದ್ರ ಹಾಲಕಾಯಿ ಇನ್ನೀತರರು ಇದ್ದರು, ಗುರಪ್ಪ ನಂದೂರ ನಿರೂಪಿಸಿದರು.
ಇಂತಿ ತಮ್ಮ ವಿಶ್ವಾಸಿ,