ಸರಕಾರಿ ಕಾಮಗಾರಿಗಳಿಗೆ ಮರಳು ಸರಬರಾಜು ಮಾಡಲು ಮಾಜಿ ಶಾಸಕರ ಒತ್ತಾಯ

0
226

ಸುರಪುರ: ಸುರಪುರ ಕ್ಷೇತ್ರದಲ್ಲಿ ನಡೆಯುತ್ತಿರುವ ಸರ್ಕಾರಿ ಕಾಮಗಾರಿಗಳು ಮರಳು ಇಲ್ಲದೆ ನಿಂತುಹೋಗಿ ಯಾವುದೆ ಅಭಿವೃದ್ಧಿಯಾಗದಂತಾಗಿದೆ. ಇದರಿಂದಾಗಿ ಕಟ್ಟಡ ಕೂಲಿಕಾರ್ಮಿಕರು ದುಡಿಮೆ ಇಲ್ಲದೆ ಗೂಳೆಹೋಗುತ್ತಿದ್ದಾರೆ ಇದಕ್ಕೆ ಸರಕಾರವೆ ಹೊಣೆಯಾದಂತಾಗಿದೆ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅಸಮಧಾನ ವ್ಯಕ್ತಪಡಿಸಿದ್ದಾರೆ.

ತಾಲೂಕಿನಲ್ಲಿ ರಾಜಧನದ ಮೂಲಕ ಮರಳು ಸರಬರಾಜು ಮಾಡುವುದನ್ನು ನಿಲ್ಲಿಸಿದ್ದನ್ನು ಪ್ರಶ್ನಿಸಿ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸರ್ಕಾರ ಮರಳು ಸರಬರಾಜಿನಲ್ಲಿಯ ಅಕ್ರಮವನ್ನು ತಡೆಗಟ್ಟಲುಹೋಗಿ ಸಕ್ರಮವಾಗಿರುವ ಹಾಗೂ ಸರ್ಕಾರದಿಂದ ನಡೆಯುತ್ತಿರುವ ಮರಳು ಸರಬರಾಜನ್ನು ನಿಲ್ಲಿಸಿರುವುದು ಸರಿಯಲ್ಲ, ಅಧಿಕಾರಿಗಳ ಇತಂಹ ಅವೈಜ್ಞಾನಿಕ ನಿರ್ಣಯದಿಂದ ಸರ್ಕಾರದ ಬೊಕ್ಕಸಕ್ಕೆ ಬರಬೇಕಾದ ಲಕ್ಷಾಂತರ ರೂಪಾಯಿಗಳ ರಾಜ್ಯಧನವು ನಿಂತುಹೋಗಿದೆ. ಇತ್ತ ಅಭಿವೃದ್ಧಿ ಕೆಲಸಕ್ಕೆ ಮರಳು ಇಲ್ಲದೆ ಗುತ್ತಿಗೆದಾರರು ಕಾಮಗಾರಿಗಳನ್ನು ಪೂರ್ಣಗೊಳಿಸುವಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಕೆಲಸವಿಲ್ಲದೆ ಕಟ್ಟಡ ಕೂಲಿ ಕಾರ್ಮಿಕರು ಕಷ್ಟದಲ್ಲಿ ಜೀವನ ಸಾಗಿಸುವಂತಾಗಿದೆ.ಅತ್ತ ಸರಕಾರ ಜನರಿಗೆ ಉದ್ಯೋಗವನ್ನು ನೀಡುತ್ತಿಲ್ಲ,ಇತ್ತ ದುಡಿದು ಬದುಕು ನಡೆಸುವವರಿಗೆ ಎಲ್ಲಾ ರೀತಿಯ ಕಾಮಗಾರಿಗಳು ಮರಳಿಲ್ಲದೆ ನಿಂತಿವೆ.ಇದರಿಂದ ಬಡ ಜನರು ಸರಕಾರದ ಮೇಲೆ ಹಿಡಿಶಾಪ ಹಾಕುವಂತಾಗಿದೆ.

Contact Your\'s Advertisement; 9902492681

ಈಗಲಾದರು ಜಿಲ್ಲಾಧಿಕಾರಿಗಳೂ ಎಚ್ಚೆತ್ತುಕೊಂಡು ಸರ್ಕಾರದ ಸುರ್ಪದಿಯಲ್ಲಿರುವ ಅಥವಾ ಪರವಾನಿಗೆ ಪಡೆದಿರುವ ಮರಳಿನ ಗುತ್ತಿಗೆದಾರರಿಂದ ರಾಜ್ಯಧನ ಪಡೆದು ಮರಳನ್ನು ಸರಬರಾಜು ಮಾಡಲು ಸೂಕ್ತ ಕ್ರಮಕೈಗೊಂಡು ಅಭಿವೃಧ್ಧಿಗೆ ಒತ್ತು ನೀಡುವಂತೆ ಅವರು ಜಿಲ್ಲಾಡಳಿತಕ್ಕೆ ಪತ್ರಿಕಾ ಹೇಳಿಕೆ ಮೂಲಕ ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here