ಸತ್ಯ ಶುದ್ಧ ಕಾಯಕದಲ್ಲಿ ದೇವರನ್ನು ಕಾಣುವುದೆ ನಿಜವಾದ ಭಕ್ತಿ: ಅಡವಿಲಿಂಗ ಮಹಾರಾಜ

0
63

ಸುರಪುರ: ಜನರು ಗುಡಿ ಗುಂಡಾರಗಳಿಗೆ ಕೇವಲ ತಮ್ಮ ಮನಶಾಂತಿಗಾಗಿ ಹೋಗುತ್ತಾರೆ.ಢಾಂಬಿಕತನದ ತೋರಿಕೆಯ ಭಕ್ತಿ ಆಚರಣೆಗಿಂತ ಸತ್ಯ ಶುದ್ಧ ಕಾಯಕದಲ್ಲಿ ದೇವರನ್ನು ಕಾಣಬೇಕು ಅದುವೇ ನಿಜವಾದ ಭಕ್ತಿಯಾಗಿದೆ ಎಂದು ವೀರಘೋಟದ ಅಡವಿಲಿಂಗ ಮಹಾರಾಜರು ಮಾತನಾಡಿದರು.

ತಾಲೂಕಿನ ದೇವಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅಡವಿಲಿಂಗ ಮಹಾರಾಜ ವೃತ್ತವನ್ನು ಉದ್ಘಾಟಿಸಿ ಮಾತನಾಡಿ,ಹೂ ಹಣ್ಣು ಕಾಯಿ ಕರ್ಪುರಗಳನ್ನು ದೇವರಿಗೆ ಢಾಂಬಿಕ ಆಚರಣೆಗಾಗಿ ತೆಗೆದುಕೊಂಡು ಹೋಗುವ ಮುನ್ನ ನಿಶ್ಚಲವಾದ ಮನಸ್ಸನ್ನಿಟ್ಟುಕೊಂಡು ದೇವರ ಸ್ಮರಣೆ ಮಾಡಿದರೆ ಎಲ್ಲಿಯೂ ದೇವರನ್ನು ಹುಡುಕೊಕೊಂಡು ಹೋಗುವುದು ಬೇಕಾಗಿಲ್ಲ.ಪರಿಶುದ್ಧವಾದ ಮನದಲ್ಲಿಯೇ ದೇವರು ನೆಲಸಿರುತ್ತಾನೆ ಇದನ್ನೆ ಎಲ್ಲಾ ಶರಣರು ಮಹಾತ್ಮರು ಲೋಕಕ್ಕೆ ತಿಳಿಸಿದ್ದಾರೆ ಎಂದರು.

Contact Your\'s Advertisement; 9902492681

ಪಿ.ಎಲ್.ಡಿ ಬ್ಯಾಂಕಿನ ಉಪಾಧ್ಯಕ್ಷ ಬಸನಗೌಡ ಪಾಟೀಲ ಮಾತನಾಡಿ,ಅಡವಿಲಿಂಗ ಮಹಾರಾಜರು ಬಂಥನಾಳದ ಶಿವಯೋಗಿಗಳ ಶಿಷ್ಯರಾಗಿ ಅವರ ಆದರ್ಶದ ನುಡಿಗಳನ್ನು ಎಲ್ಲೆಡೆ ಬಿತ್ತುವ ಮೂಲಕ ನಮಗೆಲ್ಲ ಬಸವಾದಿ ಶರಣರ ವಿಚಾರಗಳನ್ನು ತಿಳಿಸುತ್ತಿದ್ದಾರೆ.ಇಂದು ನಮ್ಮ ಗ್ರಾಮದಲ್ಲಿ ಅವರ ಹೆಸರಿನ ವೃತ್ತವನ್ನು ನಿರ್ಮಿಸಿದ್ದು ನಮ್ಮ ಗ್ರಾಮಕ್ಕೆ ಇದು ಶೋಭೆಯಂತಾಗಿದೆ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಅಡವಿಲಿಂಗ ಮಹಾರಾಜ ನಾಮಫಲಕವನ್ನು ಅನಾವರಣಗೊಳಿಸಲಾಯಿತು,ನಂತರ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಹೂಮಾಲೆ ಹಾಕಿ ಜಯಘೋಷ ಮೊಳಗಿಸಿದರು.ಈ ಸಂದರ್ಭದಲ್ಲಿ ಮಲ್ಲಯ್ಯಸ್ವಾಮಿ ಮೇದಲಾಪುರ,ನಿವೃತ್ತ ಪ್ರಾಂಶುಪಾಲ ಹೆಚ್.ಟಿ.ಪಾಟೀಲ,ಪ್ರಮುಖರಾದ ಆದಪ್ಪ ದೇಸಾಯಿ,ಚನ್ನಪ್ಪಗೌಡ ಪಾಟೀಲ,ಮಲ್ಲಣ್ಣ ಮುತ್ಯಾ ಕಲಕೇರಿ,ತಾ.ಪಂ ಮಾಜಿ ಸದಸ್ಯ ಬಸವರಾಜ ಬಾಗಲಿ,ರಮೇಶ ಕವಲಿ,ಕಾಳಪ್ಪ ಡಂಬರ್,ಬಸವರಾಜ ಪರಾಪುರ್ ಸೇರಿದಂತೆ ಗ್ರಾಮದ ನಾಗರಿಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here