ಸುರಪುರ: ನಮ್ಮ ಸಮಾಜವನ್ನು ಕಾಲಕಾಲಕ್ಕೆ ಶರಣರು ಮತ್ತು ತ್ರಪದಿ ಕವಿ ಸರ್ವಜ್ಞರಂತ ಕವಿಯವರು ತಮ್ಮ ವಚನ ಮತ್ತು ಲೇಖನಗಳಿಂದ ಸಮಾಜವನ್ನು ಸುಧಾರಣೆಗೆ ಅವರ ಪಾತ್ರ ಮಹತ್ತರವಾಗಿದೆ ಇತಂಹ ದಾರ್ಶನಿಕರ ಜಯಂತಿಗಳನ್ನು ಅದ್ದೂರಿಯಾಗಿ ಆಚರಿಸಬೇಕು ಎಂದು ಗ್ರೇಡ್೨ ತಹಶಿಲ್ದಾರ ಸುಫಿಯಾ ಸುಲ್ತಾನ ತಿಳಿಸಿದರು.
ನಗರದ ತಹಶಿಲ್ದಾರ ಕಚೇರಿ ಸಭಾಂಗಣದಲ್ಲಿ ತ್ರಿಪದಿ ಕವಿ ಸರ್ವಜ್ಞ ಮತ್ತು ಕಾಯಕ ಶರಣ ಜಯಂತಿ ಆಚರಣೆ ನಿಮಿತ್ಯ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತ್ರಿಪದಿಕವಿ ಸರ್ವಜ್ಞರ ಜಯಂತಿ ಫೆ.೨೦ ರಂದು ಮತ್ತು ಕಾಯಕ ಶರಣರ ಜಯಂತಿಯು ಫೆ.೨೧ ರಂದು ಜರುಗಲಿವೆ ಅಂದಿನ ದಿನ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಜಯಂತಿ ಕಾರ್ಯಕ್ರಮವನ್ನು ಆಚರಿಸಿ ತಾಲೂಕು ಆಡಳಿತದಿಂದ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಸೂಚಿಸಿದರು.
ಭೀಮರಾಯ ಕುಂಬಾರ, ವೀರಭದ್ರಪ್ಪಾ ಕುಂಬಾರ, ಅಂಬ್ರೇಶ ಕುಂಬಾರ, ರಾಜು ಕುಂಬಾರ, ಯಲ್ಲಪ್ಪ ಹುಲಕಲ್, ರವಿಕುಮಾರ ದೇವರಗೋನಾಲ, ಹಣಮಂತ ಕಟ್ಟಮನಿ, ಬಲಭೀಮ ದೊಡ್ಡಮನಿ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಯ ಅನುಷ್ಠಾನ ಅಧಿಕಾರಿಗಳು ಉಪಸ್ಥಿತರಿದ್ದರು.