ಬಸವೇಶ್ವರ ಪತ್ತಿನ ಸಂಘದ ಚುನಾವಣೆ: ಎಲ್ಲಾ ಸ್ಥಾನಗಳ ಗೆದ್ದು ವಿಜಯ ಪತಾಕೆ ಹಾರಿಸಿದ ಸುರೇಶ ಸಜ್ಜನ್ ತಂಡ

0
446

ಸುರಪುರ: ಕಳೆದ ಒಂದು ವಾರದಿಂದ ತಾಲೂಕಿನ ವೀರಶೈವ ಮತ್ತು ಲಿಂಗಾಯತ ಸಮುದಾಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಬಸವೇಶ್ವರ ಪತ್ತಿನ ಸಹಕಾರ ಸಂಘದ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು ಸುರೇಶ ಸಜ್ಜನ್ ಪ್ಯಾನಲ್ ಎಲ್ಲಾ ಸ್ಥಾನಗಳನ್ನು ಗೆಲ್ಲುವ ಮೂಲಕ ವಿಜಯ ಪತಾಕೆ ಹಾರಿಸಿದೆ.

Contact Your\'s Advertisement; 9902492681

ಚುನಾವಣಾ ಪ್ರಕ್ರೀಯೆ ಆರಂಭಗೊಂಡ ನಂತರದಲ್ಲಿ ಮೂರು ನಾಲ್ಕು ಪ್ಯಾನಲ್‌ಗಳಾಗಿ ಚುನಾವಣೆ ಹುಮ್ಮಸ್ಸಿನಲ್ಲಿದ್ದ ಷೇರುದಾರ ಮುಖಂಡರು ನಂತರ ನಡೆದ ಕೆಲ ಬೆಳವಣಿಗೆಗಳಲ್ಲಿ ಮೂರು ಪ್ಯಾನಲ್‌ಗಳು ಒಂದಾಗಿ ಚುನಾವಣೆ ಹೆದರಿಸಲು ಮುಂದಾದ ನಂತರ,ಶಿವು ಸಾಹುಕಾರ ಮತ್ತವರ ಪ್ಯಾನಲ್ ನೇರ ಸ್ಪರ್ಧೆಗೆ ಇಳಿದಿತ್ತು.ಬಸವೇಶ್ವರ ಪತ್ತಿನ ಸಹಕಾರ ಸಂಘದ ಇಪ್ಪತ್ತೈದು ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚುನಾವಣೆ ನಡೆದಿದ್ದು ವಿಶೇಷವಾಗಿದೆ.

ಫಲಿತಾಂಶ: (ಹಿಂ.ವ ಅ) ಸುರೇಶ ಆರ್.ಸಜ್ಜನ-೧೦೦೩ ಮತಗಳು, (ಹಿಂ.ವ ಬ) ಜಗದೀಶ ಪಾಟೀಲ್ ೮೬೧. (ಮಹಿಳಾ) ಜಯಲಲಿತಾ ಪಾಟೀಲ್-೯೯೮ ಶ್ವೇತಾ ಮಂಜುನಾಥ ಗುಳಗಿ-೭೪೮. (ಸಾಮಾನ್ಯ) ಡಿ.ಸಿ ಪಾಟೀಲ್ ಕೆಂಭಾವಿ-೮೪೮,ನಂದಯ್ಯ ಮಠಪತಿ-೮೬೨,ಮನೋಹರ ಜಾಲಹಳ್ಳಿ -೮೮೨,ರವೀಂದ್ರ ಅಂಗಡಿ-೮೩೨, ವಿಜಯಕುಮಾರ ಬಂಡೋಳಿ-೭೮೭,ವಿಶ್ವರಾಧ್ಯ ಸತ್ಯಂಪೇಟ-೮೧೭,ಶರಣಪ್ಪ ಕಳ್ಳಿಮನಿ ೮೧೦,ಸೂಗೂರೇಶ ವಾರದ-೮೨೪ ,ಹೆಚ್.ಸಿ.ಪಾಟೀಲ್-೮೩೬ ಪಡೆಯುವ ಮೂಲಕ ಸುರೇಶ ಸಜ್ಜನ್ ಪ್ಯಾನಲ್ ಅಧಿಕಾರದ ಚುಕ್ಕಾಣಿ ಹಿಡಿದಂತಾಗಿದೆ.

ಒಟ್ಟು ೧೫ ಜನ ನಿರ್ದೇಶಕ ಸ್ಥಾನಗಳಲ್ಲಿ ಎಸ್.ಟಿ ಮೀಸಲು ಸ್ಥಾನಕ್ಕೆ ಈಗಾಗಲೇ ಅವಿರೋಧ ಆಯ್ಕೆಯಾಗಿದ್ದು, ಎಸ್.ಸಿ ಸ್ಥಾನಕ್ಕೆ ಅಭ್ಯಾರ್ಥಿಗಳಿಲ್ಲದೆ ಖಾಲಿ ಉಳಿದಿತ್ತು.ಇನ್ನುಳಿದ ೧೩ ಸ್ಥಾನಗಳಲ್ಲಿ ೯ ಸಾಮಾನ್ಯ,ಇಬ್ಬರು ಮಹಿಳಾ ಹಾಗು ಒಂದು ಹಿಂದುಳಿದ ವರ್ಗ ಅ ಮತ್ತು ಬ ಗೆ ಮೀಸಲಾಗಿತ್ತು. ೧೩ ಸ್ಥಾನಗಳಿಗೆ ಫೇಬ್ರವರಿ ೧೪ ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೪ ಗಂಟೆಯವರೆಗೆ ಚುನಾವಣೆ ನಡೆದಿದ್ದು ಒಟ್ಟು ೧೪೭೧ ಷೇರುದಾರರು ಮತ್ತು ಮತ ಚಲಾಯಿಸಿದರು.ಸಂಜೆ ಮತ ಎಣಿಕೆ ಕಾರ್ಯ ನಡೆದಿದ್ದು ತಡರಾತ್ರಿ ೧೨ ಗಂಟೆ ಸುಮಾರಿಗೆ ಫಲಿತಾಂಶ ಹೊರ ಬಿದ್ದಿದ್ದು ಸುರೇಶ ಸಜ್ಜನ್ ಪ್ಯಾನಲ್ ಸ್ಪಷ್ಟ ಬಹುಮತದೊಂದಿದೆ ಎಲ್ಲಾ ೧೩ ಅಭ್ಯಾರ್ಥಿಗಳು ಜಯಗಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here