ಕಲಬುರಗಿ: ಸಿಎಎ, ಎನ್.ಆರ್.ಸಿ ವಳಮತ್ತು ಎನ್.ಪಿ.ಆರ್ ವಿರೋಧಿಸಿ ನಗರದ ಪೀರ ಬಂಗಾಲಿ ಮೈದಾನದಲ್ಲಿ ಸಂಸದ ಎಐಎಂಐಎಂ ಪಕ್ಷದ ಮುಖಂಡ ಅಸಾದುದ್ದೀನ್ ಓವೈಸಿ ನೇತೃತ್ವದಲ್ಲಿ ಬೃಹತ್ ಜನ ಸಂಪರ್ಕ ಸಭೆ ನಡೆಯಿತು.
ಅವರಂಗಬಾದ್ ಸಂಸದ ಇಮ್ತಿಯಾಜ್ ಜಲೀಲ್, ಎಐಎಂಐಎಂ ವಾರಿಸ್ ಪಠಾನ್, ಕಲಬುರಗಿ ಪಕ್ಷದ ಜಿಲ್ಲಾಧ್ಯಕ್ಷ ಅಬ್ದುಲ್ ರಹಿಮ್ ಮಿರ್ಚಿ, ನ್ಯಾಯವಾದಿ ಸೈಯದ್ ಮಜಹರ್, ಜೆಡಿಎಸ್ ಜಿಲ್ಲಾ ಮುಖಂಡ ನಾಸೀರ್ ಹುಸೈನ್ ಉಸ್ತಾದ್, ಪೀಪಲ್ಸ್ ಫೊರಂ ಸಂಸ್ಥಾಪಕ ಅಧ್ಯಕ್ಷ, ಕಲಬುರಗಿ ನಗರಾಭಿವೃದ್ಧಿ ಮಾಜಿ ಅಧ್ಯಕ್ಷ ಡಾ. ಅಜಗರ್ ಚುಲಬುಲ್, ಜಿಲ್ಲಾ ಪಂಚಶಯಿತ್ ಮಾಜಿ ಸದಸ್ಯ ಗುರುಶಾಂತ ಪಟೇದಾರ್, ಇಲಿಯಾಸ್ ಸೇಠ್ ಬಾಗಬಾನ್, ನ್ಯಾಯವಾದ ವಾಹಾಜ್ ಬಾಬಾ, ಮಾಜೀದ್ ಪ್ಯಾರೆ ಸೇರಿಂದ ಮುಂತಾದವರು ಇದ್ದರು.
ನ್ಯಾಯವಾದಿ ವಾಹಾಜ್ ಬಾಬಾ ಮಾತನಾಡಿ, ಓವೈಸಿ ಅವರು ಹಿಂದುಳಿದ ವರ್ಗದ ಹಕ್ಕು ಸುರಕ್ಷೆಗಾಗಿ ನಿರಂತರ ಹೋರಾಟ ನಡೆಸುತಿದ್ದಾರೆ ಎಂದು ಸ್ಮರಿಸಿ, ಸಂವಿಧಾನ ಬದಲಾವಣೆ ಮಾಡುವ ಬಗ್ಗೆ, ಸಂವಿಧಾನ ಪ್ರತಿ ಸುಡುವುದು ಮತ್ತು ಗೋಲಿ ಮಾರೋದಂತಹ ಹೇಳಿಕೆ ನೀಡುವವರ ವಿರುದ್ಧಯಾವುದೆ ಪ್ರಕರಣ ದಾಖಲಾಗುವುದಿಲ್ಲ, ಆದರೆ ಬೀದರ್ 4ನೇ ತರಗತಿಯ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಿ ಹಿಂಸೆ ನೀಡಲಾಗುತಿದ್ದು, ಕಾಯ್ದೆ ಪರ ನ್ಯಾಯಾಲಯ ತೀರ್ಪು ಬಂದರೆ, ಕಾಯ್ದೆ ಎದುರಿಸುವ ಮುಂಚೆ ಜೈಲ್ ಭರೋ ಆಂದೋಲನ ನಡೆಸಲಾಗುವುದು ಎಂದು ಘೋಷಿಸಿದರು.
ನಂತರ ಇಮತೀಯಾಜ್ ಸಿದ್ದಿಖಿ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ದೇವದಾಸಿಗಳಿದ್ದು, ತಂದೆ, ಗಂಡನ ಹೆಸರು ಹೆಸರು ಗೊತ್ತಿಲ್ಲ ಇಂತಹವರು ಮೋದಿ, ಅಮಿತ್ ಶಾ, ಮತ್ತು ಯೋಗಿ ಎಂದು ಬರಿಸಬಹುದಾ ಎಂದು ಪ್ರಶ್ನಿಸಿದರು.
ನಂತರ ಚುಲಬುಲ್ ಮಾತನಾಡಿ, ದೇಶದಲ್ಲಿ ಕೋಮು ಮತ್ತು ದ್ವೇಷದ ರಾಜಕಾರಣ ನಡೆಸುತಿದೆ ಎಂದರು. ಪಟೆದ್ದಾರ ಮಾತನಾಡಿ, ಮಾಂಸಹಾರಿ ದಲಿತರು ಮುಸ್ಲಿಂ ಒಗಟ್ಟಾಗಿದ್ದೇವೆ ನಮ್ಮನ್ನು ಕೆಣಕಬೇಡಿ ಎಂದು ಎಚ್ಚರಿಕೆ ನೀಡಿದರು.