ಕಲಬುರಗಿ: ಸಿಎಎ, ಎನ್.ಆರ್.ಸಿ ವಳಮತ್ತು ಎನ್.ಪಿ.ಆರ್ ವಿರೋಧಿಸಿ ನಗರದ ಪೀರ ಬಂಗಾಲಿ ಮೈದಾನದಲ್ಲಿ ಸಂಸದ ಎಐಎಂಐಎಂ ಪಕ್ಷದ ಮುಖಂಡ ಅಸಾದುದ್ದೀನ್ ಓವೈಸಿ ನೇತೃತ್ವದಲ್ಲಿ ಬೃಹತ್ ಜನ ಸಂಪರ್ಕ ಸಭೆ ನಡೆಯಿತು.
ಕಾರ್ಯಕ್ರಮ ಉದ್ದೇಶಿ ಮಾತನಾಡಿದ, ಸಂಸದ ಅಸಾದುದ್ದೀನ್ ಓವೈಸಿ ಮಾತನಾಡಿ, ಸಿಎಎ, ಎನ್.ಆರ್.ಸಿ ಮತ್ತು ಎನ್.ಪಿ.ಆರ್ ವಿರುದ್ಧ ಹೋರಟ ದೇಶ ಮತ್ತು ಸಂವಿಧಾನ ಉಳಿಸುವ ಹೋರಾಟ ಆಗಿದೆ. ಭಾರತ ದೇಶವನ್ನು ಧರ್ಮದಲ್ಲಿ ಆಧಾರದಲ್ಲಿ ವಿಭಜನೆ ಮಾಡಲು ಬಿಡುವುದಿಲ್ಲ. ಭಾರತದಕ್ಕೆ ಯಾವುದೇ ಧರ್ಮ, ಜಾತಿ ಇಲ್ಲ ಪ್ರಧಾನಿ ಅರ್ಥೈಸಿಕೊಳಬೇಕು.
ಬಿಜೆಪಿ ಮತ್ತು ಆರ್.ಎಸ್.ಎಸ್ ಗರೆ ನೀವು ದೇಶವನ್ನು ಕೋಮುವಾದಿಯ ಅಫೀಮ್ ನಲ್ಲಿ ಮುಳಗಿಸಲು ಹೋರಟಿದ್ದಾರೆ. ಸಂವಿಧಾನದ ಪ್ರಥಮ ಆಕೃತಿಯ ಪುಟ್ಟಗಳಲ್ಲಿ ಟೀಪು ಮತ್ತು ರಾಮನ ಭಾವ ಚಿತ್ರ ಒಮ್ಮೆ ನೋಡಿ ಭಾರತದ ಸಂವಿಧಾನವನ್ನು ಗೃಹ ಸಚಿವ ಮತ್ತು ಪ್ರಧಾನಿ ತಿಳಿದುಕೋಳಬೇಕು.
ಆಸಾಂನಲ್ಲಿ 19 ಲಕ್ಷ ಹಿಂದೂಗಳಿ ಪೌರತ್ವ ನೀಡಲು ಹೋರಟಿದ್ದಾರೆ, ಆದರೆ 5 ಲಕ್ಷ ಮುಸ್ಲಿಂ ಶಿಕ್ಷೆಗೆ ಗುರಿಪಡಿಸಲಾಗುವುದು ಇದರಿಂದ ನನ್ನಗೆ ಆಪತಿ ಇದೆ. ಮೋದಿ ಅವರು ಎನ್.ಆರ್.ಸಿ ಬಗ್ಗೆ ಇದು ವರೆಗೆ ಚರ್ಚೆ ನಡೆದಿಲ್ಲ, ಜಾರಿಮಾಡಿಲ್ಲ ಎಂದು ಮಾರಮಿಕವಾಗಿ ಉತ್ತರ ನೀಡುವ ಬದಲಿಗೆ, ತಾನು ಪ್ರಧಾನಿ ಆಗಿರುವವರೆಗೆ ಜಾರಿ ಮಾಡಲ್ಲ ಎಂದು ಘೋಷಣೆ ಮಾಡಲ್ಲಿ ಎಂದು ಸವಾಲ್ ಹಾಕಿದರು.
ಎನ್.ಪಿ.ಆರ್ ನಲ್ಲಿ ಮುಸ್ಲಿಂರಿಗೆ ಸಮೀಕ್ಷೆದಾರರು ತನ್ನ ಸ್ವ ಇಚ್ಛೆಯಿಂದ ಡೌಟ್ ಫುಲ್ ಸಿಟಿಜನ್ ಎಂದು ಗುರುತಿಸಿದರೆ, ನಮ್ಮ ಗತಿ ಎನಾಗುತದೆ ಎಂದು ಊಹಿಸಲು ಸಾಧ್ಯವಿಲ್ಲ. ಇದು ನಮ್ನ ಅಸ್ತಿತ್ವದ ಹೋರಾಟ, ಇಲ್ಲಾಂದ್ರೆ ಜೀವಂತ ಶವಗಳಂತೆ ಬದುಕಬೇಕಾಗುತದೆ ಎಂದು ಕಳವಳ ವ್ಯಕ್ತಪಡಿಸಿದರು.
ಬೀದರ್ ನಲ್ಲಿ ಒಂದು ನಾಟಕ ಪ್ರದರ್ಶನದಲ್ಲಿ ಒಂದು ವಿಧವೆ ಮಹಿಳೆ, ಮಕ್ಕಳು ಮತ್ತು ಸಂಸ್ಥೆಯ ಮೇಲೆ ಪ್ರಕರಣ ದಾಖಲಿಸಿ ಜೈಲಿನಲ್ಲಿ ಹಾಕಿ ಹಿಂಸೆ ನೀಡಲಾಗುತಿದೆ. ಗುಂಡು ಹೊಡೆಯುವವರು ಮತ್ತು ಗುಂಡು ಹೊಡೆಯಿರಿ ಎಂದು ಹೇಳುವವರ ವಿರುದ್ಧ ಪ್ರೀತಿಯಿಂದ ನಡೆದುಕೊಳುತ್ತದೆ ಎಂದು ಆಕ್ರೋಶ ಹೊರಹಾಕಿ, ಅಮಾಯಕ ಶಾಲಾ ಮಕ್ಕಳ ಮೇಲೆ ಪ್ರಕರಣ ದಾಖಲಿಸಿ ಮುಗದ್ಧ ಮಕ್ಕಳಿಗೆ ಪೋಷಕರ ಅನುಪಸ್ಥಿತಿಯಲ್ಲಿ ವಿಚಾರಣೆ ನಡೆಸಲಾಗುತಿದೆ ಎಂದು ಕಿಟಿಕಾರಿದರು.
ಹೋರಾಟ ನಡೆಸುತಿದ್ದ, ಜಾಮಿಯ ವಿದ್ಯಾರ್ಥಿಗಳ ಮೇಲೆ ಹಗಲಲ್ಲಿ ಗುಂಡು ಹೊಡೆದ ಯುವ ಅಪ್ರಾಪ್ತ ಎಂದು ಮಾಧ್ಯಮ ಕೆಲವೆ ನಿಮಿಷದಲ್ಲಿ ಘೋಷಣೆ ಮಾಡಿ ವರದಿ ಮಾಡುತದೆ ಆದರೆ ಬೀದರ್ ಪುಟ್ಟ ಮಕ್ಕಳು ಇವರಿಗೆ ಅಪ್ರಾಪ್ತ ಕಾಣುವುದಿಲ್ಲ ಇವರ ಮೇಲೆ ಪ್ರೀತಿ ಏಕೆ ಇಲ್ಲ, ಮುಸ್ಲಿಂ ಅಂತನ ಭೇದ ಏಕೆ ಎಂದು ಮಾಧ್ಯಮಕ್ಕೆ ಪ್ರಶ್ನಿಸಿದರು.
ಅವರಂಗಬಾದ್ ಸಂಸದ ಇಮ್ತಿಯಾಜ್ ಜಲೀಲ್, ಎಐಎಂಐಎಂ ಶಾಸಕ ವಾರಿಸ್ ಪಠಾನ್, ಕಲಬುರಗಿ ಪಕ್ಷದ ಜಿಲ್ಲಾಧ್ಯಕ್ಷ ಅಬ್ದುಲ್ ರಹಿಮ್ ಮಿರ್ಚಿ, ನ್ಯಾಯವಾದಿ ಸೈಯದ್ ಮಜಹರ್, ಜೆಡಿಎಸ್ ಜಿಲ್ಲಾ ಮುಖಂಡ ನಾಸೀರ್ ಹುಸೈನ್ ಉಸ್ತಾದ್, ಪೀಪಲ್ಸ್ ಫೊರಂ ಸಂಸ್ಥಾಪಕ ಅಧ್ಯಕ್ಷ, ಕಲಬುರಗಿ ನಗರಾಭಿವೃದ್ಧಿ ಮಾಜಿ ಅಧ್ಯಕ್ಷ ಡಾ. ಅಜಗರ್ ಚುಲಬುಲ್, ಜಿಲ್ಲಾ ಪಂಚಶಯಿತ್ ಮಾಜಿ ಸದಸ್ಯ ಗುರುಶಾಂತ ಪಟೇದಾರ್, ಇಲಿಯಾಸ್ ಸೇಠ್ ಬಾಗಬಾನ್, ನ್ಯಾಯವಾದ ವಾಹಾಜ್ ಬಾಬಾ, ಮಾಜೀದ್ ಪ್ಯಾರೆ ಸೇರಿಂದ ಮುಂತಾದವರು ಇದ್ದರು.