ರಾಜ್ಯದಲ್ಲಿ ನಮ್ಮದೇ ಪಕ್ಷದ ಸರ್ಕಾರವಿರುವುದರಿಂದ ಅಭಿವೃದ್ಧಿ ಕಾಮಗಾರಿಗಳು ನಿಗದಿಯಂತೆ ನಡೆಯುತ್ತಿವೆ ಆದರೂ ತಾವು ಹೆಚ್ಚಿನ ಅನುದಾನದ ನಿರೀಕ್ಷೆಯಲ್ಲಿದ್ದೆವೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಹೇಳಿದರು.
ಮಂಗಳವಾರ ಆಳಂದ ತಾಲೂಕಿನ ಗಡಿಗ್ರಾಮ ಕಾಮನಳ್ಳಿಯಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಮಂಜೂರಾದ ರೂ. ೫೦ ಲಕ್ಷ.ಗಳ ಕಾಮನಹಳ್ಳಿ- ಎಂ ಸಲಗರ್ ರಸ್ತೆ ಸುಧಾರಣೆ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಸಂಪರ್ಕ ರಸ್ತೆಗಳು ಸುಧಾರಿಸುವುದರಿಂದ ನೆರೆಯ ರಾಜ್ಯದವರ ಜೊತೆ ಸಂಬಂಧಗಳು ವೃದ್ದಿಸುತ್ತವೆ ಇದರಿಂದ ಎರಡು ರಾಜ್ಯಗಳ ಮಧ್ಯೆ ಸುಮಧುರ ಸಂಬಂಧ ಏರ್ಪಡುತ್ತದೆ ಈ ನಿಟ್ಟಿನಲ್ಲಿ ಗಡಿಗ್ರಾಮಗಳ ಜನತೆ ಅನೋನ್ಯತೆಯಿಂದ ಇರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡ ಮಲ್ಲಣ್ಣ ನಾಗೂರೆ, ಸುಭಾಷ್ ಪಾಟೀಲ, ಮಲ್ಲಿಕಾರ್ಜುನ ಪಾಟೀಲ, ನವಾಜ ಜಮಾದಾರ, ಕಲ್ಪಪ್ಪ ಜೆಟ್ಟೆಪ್ಪಗೋಳ, ಮಹಾದೇವ ಕುಮಟಗಿ, ಅಜೀತ ಕುಲಕರ್ಣಿ, ಗುತ್ತಿಗೆದಾರ ಕಲ್ಯಾಣಿ ಧನ್ನಾಗೋಳ, ಅಧಿಕಾರಿ ಚಂದ್ರಕಾಂತ ಮಲ್ಕೆ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.