ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಫೋನ್-ಇನ್ ಕಾರ್ಯಕ್ರಮ ವಿನೂತನ ತಂತ್ರ

0
23

ಕಲಬುರಗಿ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಜೀವನದ ಪ್ರಮುಖಘಟ್ಟವಾಗಿದ್ದು, ಮುಂದಿನ ವಿದ್ಯಾರ್ಥಿ ಜೀವನಕ್ಕೆ ಆಧಾರವಾಗಿದೆ. ಫಲಿತಾಂಶ ಸುಧಾರಣೆಗಾಗಿ ಸರ್ಕಾರ ಸಾಕಷ್ಟು ಹಣ ವೆಚ್ಚ ಮಾಡಿ ಅನೇಕ ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ. ಅದರಲ್ಲಿ ಫೋನ್-ಇನ್ ಕಾರ್ಯಕ್ರಮವು ಇಡಿ ರಾಜ್ಯದಲ್ಲಿಯೇ ವಿನೂತನ ಹಾಗೂ ವಿದ್ಯಾರ್ಥಿಮುಖಿ ಕಾರ್ಯಕ್ರಮವಾಗಿದೆಯೆಂದು ನಿಕಟಪೂರ್ವ ಡಿಡಿಪಿಐ, ಜಮಖಂಡಿ ಸರ್ಕಾರಿ ಬಿ.ಎಡ್ ಕಾಲೇಜಿನ ಪ್ರವಾಚಕ ಶಾಂತಗೌಡ ಪಾಟೀಲ ಅಭಿಮತ ವ್ಯಕ್ತಪಡಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಜಿಲ್ಲಾ ಘಟಕ, ಜ್ಞಾನಾಮೃತ ಶೈಕ್ಷಣಿಕ, ವೃತ್ತಿ ಮಾರ್ಗದರ್ಶನ ಕೇಂದ್ರ, ಮಿಲೇನಿಯಂ ಕನ್ನಡ, ಆಂಗ್ಲ್ ಮಾಧ್ಯಮ ಶಾಲೆ ಮತ್ತು ಕಾಲೇಜು ಇವುಗಳ ಸಂಯುಕ್ತ ಆಶ್ರಯದಲ್ಲಿ ಕಳೆದ ಜ.೧ರಿಂದ ನಿರಂತರವಾಗಿ ೫೫ ದಿವಸಗಳ ಕಾಲ ದಿನನಿತ್ಯ ಸಾ.೭-೯ ಗಂಟೆಯವರೆಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಫೋನ್-ಇನ್ ಕಾರ್ಯಕ್ರಮ ಮಂಗಳವಾರ ಸಂಜೆ ಜರುಗಿದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

Contact Your\'s Advertisement; 9902492681

ವಿದ್ಯಾರ್ಥಿಗಳಲ್ಲಿರುವ ವಿಷಯದ ಅನೇಕ ಸಂಶಯಗಳನ್ನು ನುರಿತ ಶಿಕ್ಷಕರು ನಿವಾರಿಸಿದ್ದಾರೆ. ಈ ಕಾರ್ಯಕ್ರಮ ಕೇವಲ ಜಿಲ್ಲೆಗೆ ಮಾತ್ರ ಸೀಮಿತವಾಗದೆ, ಇಡಿ ರಾಜ್ಯದ ಮೂಲೆಗಳಿಂದ ಅನೇಕ ವಿದ್ಯಾರ್ಥಿಗಳು ಕರೆ ಮಾಡಿ ತಮ್ಮ ಸಂಶಯ ನಿವಾರಿಸಿಕೊಂಡಿದ್ದಾರೆ. ಶಿಕ್ಷಕರು ಈ ಕಾರ್ಯವನ್ನು ತುಂಬಾ ಆಸಕ್ತಿಯಿಂದ ನೆರವೇರಿಸುವ ಮೂಲಕ ಪ್ರಸ್ತುತ ವರ್ಷದ ಫಲಿತಾಂಶ ಹೆಚ್ಚಳಗೊಳಿಸುವ ಗುರಿಗೆ ಪೂರಕವಾಗಿ ಕಾರ್ಯನಿರ್ವಹಿಸಿದ್ದಾರೆಂದರು.

ಕಾರ್ಯಕ್ರಮದಲ್ಲಿ ಶಿಕ್ಷಣಾಧಿಕಾರಿ ಭರತರಾಜ ಸಾವಳಗಿ, ಸಮಗ್ರ ಶಿಕ್ಷಣ ಯೋಜನಾ ಉಪ ಸಮನ್ವಯಾಧಿಕಾರಿ ಸಿ.ಬಿ.ಪಾಟೀಲ, ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ, ಎಸ್ಸೆಸ್ಸೆಲ್ಸಿ ಜಿಲ್ಲಾ ನೋಡಲ್ ಅಧಿಕಾರಿ ರಮೇಶ ಜಾನಕರ, ಆರ್‌ಎಮ್‌ಎಸ್‌ಎ ವಿಭಾಗ ಪ್ರಮುಖ ಮಹೇಶ ಬಸರಕೋಡ, ಜ್ಞಾನಾಮೃತ ಶೈಕ್ಷಣಿಕ, ವೃತ್ತಿ ಮಾರ್ಗದರ್ಶನ ಕೇಂದ್ರದ ಅಧ್ಯಕ್ಷ ಕೆ.ಬಸವರಾಜ, ಉಪನ್ಯಾಸಕ ಎಚ್.ಬಿ.ಪಾಟೀಲ, ಪ್ರಮುಖರಾದ ಮುಕುಂದಪ್ಪ ನಂದಗಾಂವ, ಶಿವಲಿಂಗಪ್ಪ ಕೋಡ್ಲಿ, ಶಿವಲಿಂಗಪ್ಪ ಮೂಲಗೆ, ಭೀಮರಾವ ಮೂಲಗೆ, ರಾಘವೇಂದ್ರ ಕೋದಂಪೂರ, ಆನಂದ ಕುಲಕರ್ಣಿ, ಸಂತೋಷ ಕುಲಕರ್ಣಿ, ನಾಗೇಂದ್ರಪ್ಪ ಕಲಶೆಟ್ಟಿ, ಸಿದ್ದರಾಮ ಬೇತಾಳೆ, ಸಂತೋಷ ಹೂಗಾರ, ಶರಣಬಸಪ್ಪ ಕುಡಕಿ, ಶ್ರೀಶೈಲ ನಾಗಶೆಟ್ಟಿ, ಶಿವಶರಣ ಉದನೂರ, ರಾಜಶೇಖರ ಬಿರಾದಾರ, ದಿಲಿಪ ಚವ್ಹಾಣ, ವಿಲಾಸರಾವ ಸಿನ್ನೂರಕರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಶರಣು ಬಿರಾದಾರ ಪ್ರಾರ್ಥಿಸಿದರು. ಶ್ರೀಪಾಲ ಭೋಗಾರ ಸ್ವಾಗತಿಸಿದರು. ಸಂಜೀವಕುಮಾರ ಪಾಟೀಲ ನಿರೂಪಿಸಿದರು. ಶ್ರೀನಿವಾಸ ನಾಲವಾರ್ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here