ಸಿಎಎ, ಎನ್,ಆರ್,ಸಿ ಮತ್ತು ಎನ್. ಪಿ.ಆರ್ ವಿರೋಧಿಸಿ 17ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ: ಭಾನುಪ್ರತಾಪ್ ಭೇಟಿ

0
56

ಕಲಬುರಗಿ: ಇಲ್ಲಿನ ನಗರದ ಮಹೇಬುಬ್ ನಗರ ಪ್ರದೇಶದಲ್ಲಿ ಸಿಎಎ, ಎನ್,ಆರ್,ಸಿ ಮತ್ತು ಎನ್. ಪಿ.ಆರ್ ವಿರೋಧಿಸಿ ನಡೆಯುತಿರುವ ಪ್ರತಿಭಟನೆ 17 ನೇ ದಿನಕ್ಕೆ ಕಾಲಿಟ್ಟಿದೆ.

ಇಂದು ನವದೆಹಲಿಯ ಸುಪ್ರೀಂ ಕೋರ್ಟ್ ನ್ಯಾಯವಾದಿ, ಆರ್.ಜೆ.ಎಸ್.ಪಿ ಸಂಸ್ಥೆಯ ಅಧ್ಯಕ್ಷ ಭಾನು ಪ್ರತಾಪ ಸಿಂಗ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು.

Contact Your\'s Advertisement; 9902492681

ಎನ್.ಆರ್.ಸಿಯಿಂದ ಸರಕಾರಿ ನೌಕರರು ತನ್ನ ಪೌರತ್ವ ಸಾಬಿತು ಪಡಿಸದಿದ್ದರೆ, ನೌಕರಿ ಕಳೆದುಕೊಳ್ಳಬೇಕಾಗುತ್ತದೆ. ಏಪ್ರಿಲ್ ನಲ್ಲಿ ಎನ್.ಪಿ.ಆರ್ ಆರಂಭವಾಗಲಿದ್ದು, ಯಾರು ಉತ್ತರ ನೀಡಬೇಡಿ, ಈ ಮೂಲಕ ನಿಮ್ಮನ್ನು ಎನ್.ಆರ್.ಸಿ ಮೂಲಕ ಬಲಿಪಸ್ಸು ಮಾಡಿ ನಾಗರಿಕತ್ವ ಕಸಿದುಕೊಂಡು ಪ್ರಜೆಗಳಿಗೆ ಸರಕಾರ ಕಂಗಾಲು ಮಾಡಲು ಹೊರಟಿದೆ ಎಂದು ಎಚ್ಚರಿಸಿದರು.

ಈ ಹೋರಾಟ ಕೊನೆಯ ಕ್ಷಣದವರೆಗೆ ಇರಬೇಕು ಎಂತಹ ಪರಿಸ್ಥಿತಿ ಎದುರಾದರು ನಮ್ಮ ಮುಂದಿನ ಪಿಳಿಗೆಗಾಗಿ ಬರುವ ಸವಾಲುಗಳು ಧೈರ್ಯದಿಂದ ಎದುರಿಸುವ ಅಗತ್ಯವಿದೆ ಎಂದು ಕರೆ ನೀಡಿದರು.

ಮೋದಿ ಮತ್ತು ಅಮಿತ್ ಶಾ ಸಿಎಎ ಮತ್ತು ಎನ್.ಪಿ.ಆರ್ ವಾಪಸ್ ಪಡೆಯುದಿಲ್ಲ ಎಂದು ಹೇಳುತಾರೆ ಆದರೆ ನಾವು ಕಾಯ್ದೆಗಳು ವಾಸ್ ಆಗುವವರೆಗೂ ಮತ್ತು ವಾಪಸ್ ಪಡೆದ ನಂತರವು ಹೋರಾಟ, ಇವಿಎಂ, ಸರಕಾರಿ ಕ್ಷೇತ್ರಗಳನ್ನು ಖಾಸಗಿ ಒಡೆತನಕ್ಕೆ ಒಂದೂ ದಾಗಿ ಮಾರಾಟ ಮಾಡುತಿದ್ದು ಇದರ ವಿರುದ್ಧವು ನಮ್ಮ ಹೋರಾಟ ಮುಂದುವರೆಸಬೇಕು ಎಂದು ತಿಳಿಸಿದರು.

ಈ ವೇಳೆಯಲ್ಲಿ ಇಲಿಯಾಸ್ ಸೇಠ ಬಾಗಬಾನ್, ಶಿರಾಜ ಪಾಶಾ, ಅಲಿಮೋದ್ದಿನ್, ಮೊದ್ದಿನ ಪಟೇಲ್, ಯುನುಸ್ ಖಾನ್, ಮೌಲಾನ ನೂರ್, ಜಾವಿದಆಲಂ ಖಾನ, ಮೊಹಮ್ಮದ್ ಮೋಹಸಿನ್ ಹಾಗೂ ನೂರಾರು ಮಹಿಳೆಯರು ಪ್ರತಿಭಟನೆ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here