ವಿದ್ಯಾರ್ಥಿ, ಯುವಜನ ವಿರೋಧಿ ರಾಜ್ಯ ಬಜೆಟ್: ಭೀಮಾಶಂಕರ ಪಾಣೇಗಾಂವ್

0
67

ಕಲಬುರಗಿ: ಕೇಂದ್ರ ಮತ್ತು ರಾಜ್ಯದಲ್ಲಿ ಬಹುಮತ ವಿರುವ ಬಿಜೆಪಿ ಸರಕಾರದ ಬಜೆಟ್ ವಿದ್ಯಾರ್ಥಿ ಯುವಜನ ಮತ್ತು ಶಿಕ್ಷಣ ವಿರೋಧಿ ಬಜೆಟ್ ಇದಾಗಿದೆ ಎಂದು ವಿದ್ಯಾರ್ಥಿ, ಹೋರಾಟಗಾರ, ಪತ್ರಿಕೋದ್ಯಮ ಸ್ನಾತಕೋತ್ತರ ವಿದ್ಯಾರ್ಥಿ ಭೀಮಾಶಂಕರ ಪಾಣೇಗಾಂವ್ ಎಂದು ಟೀಕಿಸಿದ್ದಾರೆ.

ಅದರಲ್ಲಿ ವಿಶೇಷ ಸ್ಥಾನಾಮಾನ ಹೊಂದಿರುವ ಈ ಪ್ರದೇಶಕ್ಕೆ ಕೆಲ ತಿಂಗಳ ಹಿಂದೆ ಹೆಸರಿಗೆ “ಕಲ್ಯಾಣ ಕರ್ನಾಟಕ ” ಅಂತ ಹೆಸರು ಘೋಷಿಸಿ ಸಮಾಧಾನಪಡಿಸಿ ತೊಗರಿಗೆ ಕನಿಷ್ಟ ಬೆಂಬಲ ಸಮರ್ಪಕ ಬೆಲೆ ನಿಗದಿಪಡಿಸದೇ  ಹೆಚ್ಚಿನ  ಬಜೆಟ್ ನೀಡದೆ ರೈತರಿಗೆ ಮತ್ತು ಈ  ಭಾಗಕ್ಕೆ  ಮಲತಾಯಿ ಧೋರಣೆ ಮಾಡಿ ಅನ್ಯಾಯ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ರಾಜ್ಯದ ಎಲ್ಲಾ ವಿದ್ಯಾರ್ಥಿ ಗಳಿಗೆ ಬೇಸರ ತರುವ ಹಾಗೂ ಯುವಜನರಿಗೆ ಹೆಚ್ಚಿನ ಉದ್ಯೋಗದ ಮಾತು ಪ್ರಸ್ತಾಪಿಸದೇ ನಿರಾಸೆ ಮೂಡಿಸಿದೆ. ಪ್ರಮುಖವಾಗಿ ಶಿಕ್ಷಣಕ್ಕೆ ಹೆಚ್ಚಿನ ಬಜೆಟ್ ನೀಡಿದ್ದು ತೃಪ್ತಿಕರ ಇಲ್ಲ.

ಬಂಡವಾಳಶಾಹಿಗಳಿಗೆ ಇಂಬು ನೀಡಿ ರಾಜ್ಯದ ಜನರಿಗೆ ಅಗತ್ಯ ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಯಿಂದ ಹೈರಾಣದಲ್ಲಿ ಬದುಕುತ್ತಿರುವ ಜನತೆಗೆ ಮತ್ತೊಮ್ಮೆ  ಗಾಯದ ಮೇಲೆ ಬರೆ ಎಳೆದಿದ್ದಾರೆ.ಹಾಸ್ಟೆಲ್ ಮೂಲಸೌಕರ್ಯದ ಮಾತಿಲ್ಲ. ಮಹಿಳೆಯರ ಸಬಲೀಕರಣಕ್ಕೆ ಬೇಜವಾಬ್ದಾರಿ ತೋರಿದ್ದಾರೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಯೋಜನೆಯ ಕೊರತೆ ಬಜೆಟ್ ಯಾಗಿದೆ. ಒಟ್ಟಾರೆಯಾಗಿ  ಈ ಸಲದ 2020 ರ ಬಜೆಟ್ ಆಟಕ್ಕುಂಟು ಲೆಕ್ಕಕಿಲ್ಲದಂತಾಗಿದೆ ಎಂದು ಹೇಳಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here